ಮರಡೋನಾ ಜೊತೆಗಿನ ತರಬೇತಿ ಕ್ಷಣಗಳನ್ನು ನೆನಪಿಸಿದ ಲೂಯೀಸ್ ಮಿಲ್ಲ

ಫುಟ್ಬಾಲ್ ಜಗತ್ತಿನಲ್ಲಿ ದಿಗ್ಗಜನಾಗಿ ಮೆರೆದ ಮರಡೋನಾ ನಿಧನರಾಗಿರುವುದು ವಿಶ್ವ ಕ್ರೀಡಾಲೋಕವನ್ನು ತಲ್ಲಣಗೊಳಿಸಿದೆ. ಫುಟ್ಬಾಲ್ ದಿಗ್ಗಜನೊಂದಿಗೆ ಒಡನಾಟವನ್ನು ಇಟ್ಟುಕೊಂಡಿದ್ದ ಪ್ರತಿಯೊಬ್ಬರೂ ಈ ಸಂದರ್ಭದಲ್ಲಿ ಅವರ ಜೊತೆಗಿನ ಒಡನಾಟವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಸ್ಪೇನ್‌ನ ಮಾಜಿ ಆಟಗಾರ ಕೋಚ್ ಲೂಯಿಸ್ ಮಿಲ್ಲ ಕೂಡ ಮರಡೋನಾ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ.
ಬಾರ್ಸಿಲೋನಾದಲ್ಲಿ ಫುಟ್ಬಾಲ್ ಕ್ಲಬ್‌ನಲ್ಲಿ ಮರಡೋನಾ ಹಲವು ವರ್ಷಗಳ ಕಾಲ ಆಡಿದ್ದರು. ಈ ಸಂದರ್ಭದಲ್ಲಿ ಯೂತ್ ಟೀಮ್‌ನಲ್ಲಿದ್ದ ಕೂಯಿಸ್ ಮಿಲ್ಲ ಮರಡೋನಾ ಜೊತೆಗೆ ಸಾಕಷ್ಟು ಉತ್ತಮ ಸಮಯಗಳನ್ನು ಕಳೆದಿರುವುದಾಗಿ ಹೇಳಿದ್ದಾರೆ. ಅವರ ವಿರುದ್ಧ ಸಾಕಷ್ಟು ಪಂದ್ಯಗಳಲ್ಲಿ ಆಡಿದ್ದೆ ಎಂದು ಮಿಲ್ಲ ಸ್ಮರಿಸಿಕೊಂಡಿದ್ದಾರೆ.
"ಅವರು ಬಾರ್ಸಿಲೋನಾ ತಂಡದಲ್ಲಿದ್ದಾಗ ನಾನು ಯುವ ತಂಡದಲ್ಲಿದ್ದೆ. ಆ ಸಂದರ್ಭದಲ್ಲಿ ಮುಖ್ಯ ತರಬೇತುದಾರನಾಗಿದ್ದ ಲೂಯಿಸ್ ಮನೊಟ್ಟಿ ಮೊದಲ ತಂಡ ಹಾಗೂ ಅಕಾಡೆಮಿ ಆಟಗಾರರ ನಡುವೆ ಪಂದ್ಯಗಳನ್ನು ಏರ್ಪಡಿಸುತ್ತಿದ್ದರು. ಈ ಸಂದರ್ಭದಲ್ಲಿ ಮರಡೋನಾ ಅವರನ್ನು ಎದುರಿಸುತ್ತಿದ್ದೆ ಎಂದು ವಾಹಿನಿಯೊಂದರ ಜೊತೆಗೆ ಮಾತನಾಡುತ್ತಾ ಲೂಯಿಸ್ ಹೇಳಿದ್ದಾರೆ.
"ನಾವು ಆತನ ಯುಗಕ್ಕೆ ಸೇರಿದ ಯುವ ಆಟಗಾರರು. ಆವರು ರಾಷ್ಟ್ರೀಯ ತಂಡದ ಪರವಾಗಿ ಶ್ರೇಷ್ಠವಾಗಿ ಆಡಿ ಫುಟ್ಬಾಲ್ ವಿಶ್ವಕಪ್‌ಅನ್ನು ದೇಶಕ್ಕಾಗಿ ತಂದುಕೊಟ್ಟ ರೀತಿಯನ್ನು ನೋಡಿದ್ದೇವೆ. ಆತ ಸಾಧಿಸಿರುವುದಕ್ಕಿಂತ ಹೆಚ್ಚಿನದನ್ನು ಸಾಧಿಸಬಲ್ಲವನಾಗಿದ್ದರೂ ಆತನೋರ್ವ ಪ್ರತಿಭೆಯ ಶಿಖರ" ಎಂದು ಲೂಯಿಸ್ ಮಿಲ್ಲ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications