Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಹ್ಯಾಂಡ್ ಆಫ್ ಗಾಡ್' ಶರ್ಟ್ ನಿಮ್ಮದಾಗಬಹುದು, ಬೆಲೆಯೆಷ್ಟು ಗೊತ್ತಾ?!

Diego Maradona’s ‘Hand of God’ shirt will go on sale

ವಾಷಿಂಗ್ಟನ್: 1986ರ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡ ಇಂಗ್ಲೆಂಡ್ ವಿರುದ್ಧ ಗೆದ್ದಿದ್ದಾಗ ಅರ್ಜೆಂಟೀನಾ ನಾಯಕ ಡಿಯಾಗೋ ಮರಡೋನಾ ಧರಿಸಿದ್ದ ವಿಶ್ವ ಖ್ಯಾತಿಯ 'ಹ್ಯಾಂಡ್ ಆಫ್ ಗಾಡ್' ಜೆರ್ಸಿ ಮಾರಾಟಕ್ಕೆ ಲಭ್ಯವಾಗಲಿದೆ ಎಂದು ಅಮೆರಿಕಾದ ಕ್ರೀಡಾ ಸ್ಮರಣಾರ್ಥ ವಸ್ತುಗಳ ತಜ್ಞರೊಬ್ಬರು ಹೇಳಿದ್ದಾರೆ.

1986ರ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕಾ ವಿರುದ್ಧ ಅರ್ಜೆಂಟೀನಾ ವಿವಾದಾತ್ಮಕ ಗೆಲುವು ದಾಖಲಿಸಿತ್ತು. ಡಿಯಾಗೋ ಮರಡೋನಾ ಆಗ ಧರಿಸಿದ್ದ ಜೆರ್ಸಿ ಸದ್ಯ ಇಂಗ್ಲೆಂಡ್‌ನ ಮ್ಯಾನ್ಚೆಸ್ಟರ್‌ನಲ್ಲಿರುವ ರಾಷ್ಟ್ರೀಯ ಫುಟ್ಬಾಲ್ ಮ್ಯೂಸಿಯಂನಲ್ಲಿದೆ.

ಮಿಕ್ಸಿಕೋ ಸಿಟಿಯಲ್ಲಿ ನಡೆದಿದ್ದ 1986ರ ವಿಶ್ವಕಪ್ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಆಡಿದ್ದ ಇಂಗ್ಲೆಂಡ್‌ ತಂಡದ ಮಾಜಿ ಆಟಗಾರ ಸ್ಟೀವ್ ಹಾಜ್ ಅವರು ಮರಡೋನಾ ಅವರಿಂದ ಈ ಜೆರ್ಸಿಯನ್ನು ಪಡೆದುಕೊಂಡಿದ್ದರಂತೆ. ಪಂದ್ಯದ ಬಳಿಕ ನಡೆದುಕೊಂಡು ಹೋಗುತ್ತಿದ್ದಾಗ ಸ್ಟೀವ್ ಅವರು ಟಿ ಶರ್ಟ್ ಕೇಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದರಂತೆ.

ಅಂದ್ಹಾಗೆ, ನೀವೂ ಈ ವಿಶ್ವ ಖ್ಯಾತಿಯ ಟಿ ಶರ್ಟ್ ಧರಿಸಬಹುದು. ಈ ಜೆರ್ಸಿ ಸುಮಾರು 2 ಮಿಲಿಯನ್ ಡಾಲರ್ (14,93,07,486 ರೂ.) ಬೆಲೆ ಬಾಳುತ್ತದೆ. ಹೀಗಾಗಿ ಇದರ ಮಾಲೀಕ ಜೆರ್ಸಿಯನ್ನು ಖಾಸಗಿ ಹರಾಜಿಗಿಡಲು ಬಯಸಿದ್ದಾರೆ ಎಂದು ಅಮರಿಕಾದ ನ್ಯೂ ಜೆರ್ಸಿಯಲ್ಲಿರುವ ಗೋಲ್ಡಿನ್ ಆಕ್ಷನ್‌ನ ಡೇವಿಡ್ ಅಮರ್‌ಮನ್ ಹೇಳಿದ್ದಾರೆ.

Story first published: Saturday, November 28, 2020, 13:00 [IST]
Other articles published on Nov 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+