Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸಿಡ್ ದಾಳಿಗೊಳಗಾಗಿದ್ದ ಯೋನೆ ವಿಸ್ಸಾ ಇಂದು ಫುಟ್‌ಬಾಲ್ ಹೀರೋ: ಪೋರ್ಚುಗಲ್‌ಗೆ‌ ಶಾಕ್‌ ನೀಡಿದ ಆಟಗಾರ ಯಾರು?

ಫಿಫಾ ವಿಶ್ವಕಪ್ ಫುಟ್ಬಾಲ್‌ ದಿನೇ ದಿನೇ ರೋಚಕತೆ ಹೆಚ್ಚಿಸುತ್ತಿದೆ. ಬಲಿಷ್ಠ ತಂಡಗಳು ಭರ್ಜರಿ ಆರಂಭವನ್ನು ಮಾಡಿವೆ. ಇನ್ನು ಫುಟ್ಬಾಲ್‌ ಲೋಕದಲ್ಲಿ ತಮ್ಮ ಛಾಪು ಮೂಡಿಸುವ ಹಪಾಹಪಿಸುತ್ತಿರುವ ತಂಡಗಳು ಬಲಿಷ್ಠ ತಂಡಗಳಿಗೆ ಶಾಕ್‌ ನೀಡುತ್ತಿವೆ. ಬುಧವಾರ ತಡ ರಾತ್ರಿ ನಡೆದ ಪಂದ್ಯದಲ್ಲಿ ಪೋರ್ಚುಗಲ್ ತಂಡಕ್ಕೆ ಆಫ್ರಿಕಾ ಖಂಡದ ಡಿಆರ್‌ ಕಾಂಗೋ ದೇಶವು ಶಾಕ್‌ ನೀಡಿದೆ. ಈ ಪಂದ್ಯದಲ್ಲಿ ಡಿಆರ್‌ ಕಾಂಗೋ ಇತಿಹಾಸ ನಿರ್ಮಿಸಿದೆ. 52 ವರ್ಷಗಳ ಬಳಿಕ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದ ಡಿಆರ್‌ ಕಾಂಗೋ, ಪೋರ್ಚುಗಲ್‌ ತಂಡದ ಗೆಲುವಿನ ಆಸೆಗೆ ಶಾಕ್‌ ನೀಡಿದೆ. ಅಷ್ಟಕ್ಕೂ ಪೊರ್ಚುಗಲ್‌ ಪಾಲಿನ ವಿಲನ್‌ ಯೋನೆ ವಿಸ್ಸಾ.

ಯೋನೆ ವಿಸ್ಸಾ ಹೆಸರನ್ನು ಡಿಆರ್‌ ಕಾಂಗೋ ಕ್ರೀಡಾಭಿಮಾನಿಗಳು ಶಾಶ್ವತವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಪ್ರದರ್ಶನ ನೀಡಿದರು. ಡಿಆರ್‌ ಕಾಂಗೋ ವಿಶ್ವಕಪ್‌ನಲ್ಲೇ ಮೊದಲ ಗೋಲಿನ ನಗೆ ಬೀರುವಲ್ಲಿ ಯೋನೆ ವಿಸ್ಸಾ ಪ್ರಮುಖ ಪಾತ್ರವಹಿಸಿದರು. ಮೊದಲಾಧಿಯ ಆಟದ ಹೆಚ್ಚುವರಿ ಸಮಯದಲ್ಲಿ ಗೋಲು ಪೆಟ್ಟಿಗೆಯ ಎಡಭಾಗದಿಂದ ಸಹ ಆಟಗಾರ ನೀಡಿದ ಪಾಸ್‌ಗೆ ಹೆಡರ್ ಮೂಲಕ ಗೋಲು ಪೆಟ್ಟಿಗೆ ಮುಟ್ಟಿಸಿದ ಯೋನೆ ವಿಸ್ಸಾ ಇತಿಹಾಸ ನಿರ್ಮಿಸಿದರು.

DR Congo s acid attack

ಪೋರ್ಚುಗಲ್‌ ಈ ಪಂದ್ಯದಲ್ಲಿ ಹಲವು ಬಾರಿ ಗೋಲು ಪೆಟ್ಟಿಗೆಯ ಬಳಿ ಚೆಂಡನ್ನು ಒಯ್ದರು ಸಹ ಫಲ ಲಭಿಸಲಿಲ್ಲ. ಎರಡನೇ ಅವಧಿಯಲ್ಲಿ ಪೋರ್ಚುಗಲ್‌ ತಂಡ ಒಂದು ಗೋಲು ಬಾರಿಸಿತು. ಆದರೆ ಅದು ಫಾಲ್ ಆಯಿತು. ಪೋರ್ಚುಗಲ್‌ ಗೆಲುವಿನ ಆಸೆಗೆ ಪೆಟ್ಟು ಬಿದ್ದಿತು. ಅಂದಹಾಗೆ ಡಿಆರ್‌ ಕಾಂಗೋ ಪರ ಗೋಲು ಬಾರಿಸಿದ ಯೋನೆ ವಿಸ್ಸಾ ಅವರ ಹಿಂದೆ ಒಂದು ಕಣ್ಣೀರ ಕಥೆ ಇದೆ.

ಆಗಿದ್ದೇನು?

ಅದು 2021ರ ಜುಲೈ 1ರ ರಾತ್ರಿ ಯೋನೆ ವಿಸ್ಸಾ ಅವರ ಮನೆಯಲ್ಲಿ ಎಲ್ಲರೂ ಮಲಗಿದ್ದರು. ಆಗ ಅವರ ಮನೆಯ ಬಾಗಿಲನ್ನು ಯಾರೋ ತಟ್ಟಿದರು. ಆಗ ಯೋನೆ ವಿಸ್ಸಾ ಕದವನ್ನು ತೆಗೆದರು. ಆದರೆ ಬಾಗಿಲಲ್ಲಿ ನಿಂತವಳು ವಿಸ್ಸಾ ಅವರ ಮಗಳನ್ನು ಅಪಹರಿಸುವ ದುರುದ್ದೇಶದಿಂದ ಬಂದಿದ್ದಳು. ವಿಸ್ಸಾ ಬಾಗಿಲು ತೆರೆಯುತ್ತಿದ್ದಂತೆ, ಬಾಗಿಲಲ್ಲಿ ನಿಂತಿದ್ದ ಹೆಣ್ಣುಮಗಳು ವಿಸ್ಸಾ ಅವರ ಮುಖಕ್ಕೆ ನೇರವಾಗಿ ಆಸಿಡ್ ಎರಚಿದಳು. ಯೋನೆ ವಿಸ್ಸಾ ಅವರ ಮುಖ ಮತ್ತು ಕಣ್ಣುಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದವು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಕಣ್ಣಿನ ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು.

ನೋವಿನ ಕಥೆ

ಆಸಿಡ್‌ ದಾಳಿಗೆ ನನ್ನ ಕಣ್ಣುಗಳು ಸುಟ್ಟುಹೋಗಿವೆ ಎಂದು ವೈದ್ಯರು ಹೇಳಿದರು ಎಂದು ಯೋನೆ ವಿಸ್ಸಾ ತಮ್ಮ ಕಥೆಯನ್ನು ಹೇಳಿಕೊಂಡಿದ್ದರು. ಪ್ರತಿ ಗಂಟೆಗೊಮ್ಮೆ ನನ್ನ ಕಣ್ಣುಗಳನ್ನು ತೊಳೆಯಬೇಕಾಗಿತ್ತು. ಅದು ಒಂದು ನರಕಯಾತನೆ. ನನ್ನ ಎರಡು ಕಣ್ಣುಗಳಿಗೂ ಸರ್ಜರಿ ಮಾಡಲಾಗಿತ್ತು. ಜೀವನ ಪೂರ್ತಿ ನಾನು ಐ-ಡ್ರಾಪ್ಸ್ ಬಳಸಬೇಕು ಎಂದು ವೈದ್ಯರು ಸಲಹೆ ನೀಡಿದರು. ನನಗೆ ಕಣ್ಣಿನ ದೃಷ್ಟಿ ಮರಳಿ ಬರಲು ಬರೋಬ್ಬರಿ 6 ತಿಂಗಳು ಬೇಕಾಯಿತು ಎಂದು ಯೋನೆ ವಿಸ್ಸಾ ತಮ್ಮ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದರು. ಇನ್ನು ಆಸಿಡ್ ದಾಳಿಯನ್ನು ಮರೆಮಾಚಲು ಪ್ಲಾಸ್ಟಿಕ್ ಸರ್ಜರಿ ಮೊರೆ ಸಹ ಯೋನೆ ವಿಸ್ಸಾ ಹೋಗಲಿಲ್ಲ. ಇದು ನನ್ನ ಜೀವನದ ಇತಿಹಾಸದ ಭಾಗ, ಇದನ್ನು ನಾನು ಮರೆಮಾಡುವುದಿಲ್ಲ ಎಂದು ತಿಳಿಸಿದ್ದರು.

ರಾತ್ರಿ ವೇಳೆ ಒಬ್ಬರೇ ಇದ್ದರೆ ಭಯ ಪಡುತ್ತಿದ್ದ ಡಿಆರ್‌ ಕಾಂಗೋ ಫುಟ್ಬಾಲ್ ಆಟಗಾರ ಯೋನೆ ವಿಸ್ಸಾ, ಪೋರ್ಚುಗಲ್ ತಂಡಕ್ಕೆ ಭಯ ಹುಟ್ಟಿಸಿದ ಕಥೆ ರೋಚಕ.

Story first published: Thursday, June 18, 2026, 9:11 [IST]
Other articles published on Jun 18, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+