ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

Durand Cup 2022: ಚೊಚ್ಚಲ ಬಾರಿಗೆ ಟ್ರೋಫಿ ಗೆದ್ದು ಇತಿಹಾಸ ಬರೆದ ಬೆಂಗಳೂರು ಎಫ್‌ಸಿ

ಡುರಾಂಡ್‌ ಕಪ್‌ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್‌ (ಬಿಎಫ್‌ಸಿ) ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಸೆಪ್ಟೆಂಬರ್ 18ರಂದು ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸುನಿಲ್‌ ಚೆಟ್ರಿ ನೇತೃತ್ವದ ಬೆಂಗಳೂರು ಫುಟ್ಬಾಲ್ ಕ್ಲಬ್‌ ತಂಡ ಮುಂಬೈ ಸಿಟಿ ಎಫ್‌ಸಿ ವಿರುದ್ಧ 2-1 ಅಂತರದ ಭರ್ಜರಿ ಜಯ ದಾಖಲಿಸಿತು.

ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡವು ಅದ್ಭುತ ಪ್ರದರ್ಶನ ನೀಡಿತು. ಬೆಂಗಳೂರು ತಂಡ ಇದುವರೆಗೂ ಒಮ್ಮೆಯೂ ಕಪ್ ಗೆದ್ದಿರಲಿಲ್ಲ, ಆ ಕೊರತೆಯನ್ನು ಸುನಿಲ್ ಚೆಟ್ರಿ ನೇತೃತ್ವದಲ್ಲಿ ನೀಗಿಸಿಕೊಂಡಿದೆ. ಬೆಂಗಳೂರು ಎಫ್‌ಸಿ ತಂಡವು ಪ್ರತಿಷ್ಠಿತ ಡುರಾಂಡ್ ಕಪ್‌ನಲ್ಲಿ ಇದುವರೆಗೂ ಫೈನಲ್‌ ಪ್ರವೇಶಿಸಲು ವಿಫಲವಾಗಿತ್ತು. ಸೆಮಿಫೈನಲ್‌ನಲ್ಲಿ ಹೈದರಾಬಾದ್ ಎಫ್‌ಸಿ ವಿರುದ್ಧ ಗೆಲ್ಲುವ ಮೂಲಕ ಫೈನಲ್‌ಗೆ ಪ್ರವೇಶಿಸಿತ್ತು.

ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿ: ಗೇಲ್ ದಾಖಲೆಗಿಲ್ಲ ಸರಿಸಾಟಿಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿ: ಗೇಲ್ ದಾಖಲೆಗಿಲ್ಲ ಸರಿಸಾಟಿ

10ನೇ ನಿಮಿಷದಲ್ಲಿ ಶಿವಶಕ್ತಿ ಹಾಗೂ 61ನೇ ನಿಮಿಷದಲ್ಲಿ ಅಲನ್ ಕೋಸ್ಟಾ ಗೋಲು ಬಾರಿಸುವ ಮೂಲಕ ಬೆಂಗಳೂರು ಎಫ್‌ಸಿ ಗೆಲುವಿನಲ್ಲಿ ಸ್ಮರಣೀಯ ಕೊಡುಗೆ ನೀಡಿದರು. ಶಿವಶಕ್ತಿ ದುರಾಂಡ್ ಕಪ್‌ ಟೂರ್ನಿಯಲ್ಲಿ ಇದುವರೆಗೆ 5 ಗೋಲು ಬಾರಿಸುವ ಮೂಲಕ ಬೆಂಗಳೂರು ತಂಡ ಫೈನಲ್ ಪ್ರವೇಶಿಸುವಲ್ಲಿ ಮತ್ತು ಕಪ್ ಗೆಲ್ಲುವಲ್ಲಿ ಉತ್ತಮ ಕೊಡುಗೆ ನೀಡಿದ್ದಾರೆ.

Durand Cup 2022: Bengaluru FC Beat Mumbai City FC In Final 2-1 To Become Champions

ಜಗತ್ತಿನ ಹಳೆಯ ಟೂರ್ನಿಗಳಲ್ಲೊಂದು

1888ರಲ್ಲಿ ಡುರಾಂಡ್ ಕಪ್ ಪ್ರಪ್ರಥಮ ಬಾರಿಗೆ ಶಿಮ್ಲಾದಲ್ಲಿ ಆಯೋಜನೆಯಾಗಿತ್ತು. ಅಸ್ತಿತ್ವದಲ್ಲಿರುವ ಏಷ್ಯಾದ ಅತ್ಯಂತ ಹಳೆಯ ಕ್ಲಬ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಡುರಾಂಡ್ ಕಪ್ ಜಗತ್ತಿನ ಮೂರನೇಯ ಅತ್ಯಂತ ಹಳೆಯ ಟೂರ್ನಿ ಎನಿಸಿಕೊಂಡಿದೆ.

ಏಷ್ಯಾದ ಅತ್ಯಂತ ಹಳೆಯ ಫುಟ್ಬಾಲ್‌ ಟೂರ್ನಿ ಎನಿಸಿರುವ ಡುರಾಂಡ್‌ ಕಪ್‌ನಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ಎಫ್‌ಸಿ ತಂಡವು ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು.

ಡುರಾಂಡ್ ಕಪ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡವು ಫೈನಲ್ ಪ್ರವೇಶಿಸುವ ಮೂಲಕ ದೇಶದ ಎಲ್ಲಾ ಮುಖ್ಯವಾದ ಫುಟ್ಬಾಲ್ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿದ ದೇಶದ ಮೊದಲ ತಂಡ ಎನಿಸಿಕೊಂಡಿತು. ಈ ಮೊದಲು ಬಿಎಫ್‌ಸಿ ಫೆಡರೇಷನ್ ಕಪ್ (2015, 2017), ಇಂಡಿಯನ್ ಸೂಪರ್ ಲೀಗ್(2018, 2019), ಸೂಪರ್ ಕಪ್(2018) ಹಾಗೂ ಇದೀಗ 2022ರಲ್ಲಿ ಡುರಾಂಡ್ ಕಪ್ ಫೈನಲ್ ಪ್ರವೇಶಿಸಿ ದಾಖಲೆ ಬರೆಯಿತು.

Story first published: Sunday, September 18, 2022, 22:38 [IST]
Other articles published on Sep 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X