ಐಎಸ್‌ಎಲ್: ಈಸ್ಟ್ ಬೆಂಗಾಲ್‌ಗೆ ಒಡಿಶಾ ಎಫ್‌ಸಿ ಸವಾಲು

ಗೋವಾ, ಜನವರಿ 3: ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಗೆದ್ದಿರುವ ಈಸ್ಟ್ ಬೆಂಗಾಲ್ ಮತ್ತು ಒಡಿಶಾ ಎಫ್‌ಸಿ ತಂಡಗಳು ಭಾನುವಾರ ತಿಲಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
ಈ ಮೈದಾನದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಎರಡೂ ತಂಡಗಳು ವಿಫಲವಾಗಿದ್ದು ಭಾನುವಾರದ ಈ ಪಂದ್ಯ ರೋಚಕವಾಗಲಿದೆ. ಈಸ್ಟ್ ಬೆಂಗಾಲ್ ಮತ್ತು ಒಡಿಶಾ ತಂಡ ರಕ್ಷಣಾತ್ಮಕವಾಗಿ ಆಡುವಾಗ ನಿರೀಕ್ಷೆಯ ಮಟ್ಟದಲ್ಲಿ ಪ್ರದರ್ಶನ ನೀಡಿಲ್ಲ. ಎರಡೂ ತಂಡಗಳು ಗಳಿಸಿರುವುದು ಕೇವಲ 5 ಗೋಲುಗಳು ಮಾತ್ರ.
ಈಸ್ಟ್ ಬೆಂಗಾಲ್ ಅತಿ ಹೆಚ್ಚು ಅಂದರೆ ೧೩ ಗೋಲುಗಳನ್ನು ದಾಖಲಿಸಿದರೆ ಒಡಿಶಾ ತಂಡ ತಂಡ 11 ಗೋಲುಗಳನ್ನು ದಾಖಲಿಸುವುದರ ಮೂಲಕ ಕೇರಳ ಬ್ಲಾಸ್ಟರ್ಸ್‌ನೊಂದಿಗೆ ಎರಡನೇ ಸ್ಥಾನ ಹಂಚಿಕೊಂಡಿದೆ. ಈಸ್ಟ್ ಬೆಂಗಾಲ ತಂಡ ಆಡಿದ ಮೊದಲ 4 ಪಂದ್ಯಗಳಲ್ಲಿ 5 ಗೋಲು ದಾಖಲಿಸಿದೆ. ಹಾಗೆಯೇ 3 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಈಸ್ಟ್ ಬೆಂಗಾಲ ತಂಡದ ತರಬೇತುದಾರ ರಾಬಿ ಫೋಲರ್ ಅವರು ಒಡಿಶಾಕೂಡ ಈಸ್ಟ್ ಬೆಂಗಾಲ್ ರೀತಿ ಸಮಸ್ಯೆ ಎದುರಿಸುತ್ತಿದ್ದು ಈಗಲೇ ಪಂದ್ಯದ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಒಡಿಶಾ ಕೂಡ ನಮ್ಮ ಹಾಗೆ ಸಮಸ್ಯೆಯಲ್ಲಿ ಇದೆ ಎಂದಿರುವ ಪೋಲರ್ ಅವರು ಕೆಲವೊಮ್ಮೆ ಅತ್ಯುತ್ತಮ ಆಟವನ್ನು ಆಡಿದ್ದಾರೆ. ಹಾಗೆಯೇ ಕಳಪೆ ಆಟವನ್ನೂ ಕೂಡ. ನಮ್ಮ ಹಾಗೆ ಅವರು ಕೂಡ ಸಿಲ್ಲಿ ಏರಿಯಾದಲ್ಲಿ ಗೋಲನ್ನು ಬಿಟ್ಟುಕೊಟ್ಟಿದ್ದಾರೆ. ಇಷ್ಟಾದರೂ ನಾವು ಈ ಪಂದ್ಯವನ್ನು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿದ್ದೇವೆ. ಲೀಗ್‌ನಲ್ಲಿ ಯಾವುದೇ ತಂಡ ಎಂತದ್ದೇ ತಂಡವನ್ನು ಸೋಲಿಸಿರುವುದನ್ನು ಲೀಗ್ ಪಂದ್ಯದಲ್ಲಿ ತಾವು ನೋಡಿದ್ದಾಗಿ ತಿಳಿಸಿದ್ದಾರೆ. ಎರಡೂ ತಂಡಗಳಿಗೆ 3 ಅಂಕ ಪಡೆಯುವುದು ಮುಖ್ಯವಾಗಿದೆ. ಈ ಪಂದ್ಯದಲ್ಲಿ ಯಾರು ಕಾರ್ಯಕ್ಷಮತೆಯಿಂದ ಆಡುತ್ತಾರೋ ಅವರು 3 ಪಾಯಿಂಟ್ ಪಡೆಯುತ್ತಾರೆ ಎಂದು ಫೋಲ್ ತಿಳಿಸಿದ್ದಾರೆ.
ಭಾನುವಾರದ ಪಂದ್ಯದಲ್ಲಿ ನಮ್ಮ ತಂಡ ಎಚ್ಚರಿಕೆಯಿಂದ ಆಟವಾಡುವ ಭರವಸೆಯನ್ನು ಈಸ್ಟ್ ಬೆಂಗಾಲ್ ತಂಡದ ಕೋಚ್ ಫೋರ್ ನೀಡಿದ್ದಾರೆ. ಆದರೆ ವಿರಾಮದ ಬಳಿ ನಮ್ಮ ತಂಡ 10 ಗೋಲುಗಳನ್ನು ಬಿಟ್ಟು ಕೊಟ್ಟಿರುವುದು ತಲೆ ನೋವಿನ ಸಂಗತಿ ಎಂದಿದ್ದಾರೆ.
ಪೋಲರ್ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಒಡಿಶಾ ತಂಡದ ಕೋಚ್ ಬಾಕ್ಸಟರ್ ಅವರು ಎರಡೂ ತಂಡಗಳಲ್ಲಿ ಸಾಕಷ್ಟು ಹೋಲಿಕೆಗಳಿವೆ. ಅವರು ಒಳ್ಳೆಯ ಆಟವನ್ನು ಆಡಿದ್ದಾರೆ. ನಾವು ಕೂಡ ಆಡಿದ್ದೇವೆ. ಭಾನುವಾರದ ಪಂದ್ಯವನ್ನು ಗೆಲ್ಲಲು ನಾವು ಹಣಾಹಣಿಗೆ ಸಿದ್ಧವಾಗಿದ್ದೇವೆ ಎನ್ನುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications