Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಿಯಲ್ ಮ್ಯಾಡ್ರೀಡ್ vs ಬಾರ್ಸಿಲೋನಾ: ದೈತ್ಯರ ಸೆಣೆಸಾಟದ ಮೇಲೆ ಫುಟ್ಬಾಲ್ ಪ್ರೇಮಿಗಳ ಕಣ್ಣು!

El Clasico: Real Madrid Supporters Share Their Stories as Derby Day Festivities Begin

ಫುಟ್ಬಾಲ್ ಲೋಕದ ಎರಡು ದೈತ್ಯ ಕ್ಲಬ್‌ಗಳ ಸೆಣೆಸಾಟ ಇಂದು ನಡೆಯಲಿದ್ದು ಫುಟ್ಬಾಲ್ ಪ್ರೇಮಿಗಳ ಕಣ್ನು ಈ ಪಂದ್ಯದ ಮೇಲೆ ನೆಟ್ಟಿದೆ. ಯುರೋಪ್‌ನ ಎರಡು ಬಲಿಷ್ಠ ತಂಡಗಳಾದ ಬದ್ಧ ಎದುರಾಳಿ ತಂಡಗಳಾಗಿರುವ ಎಫ್‌ಸಿ ಬಾರ್ಸಿಲೋನಾ ಹಾಗೂ ರಿಯಲ್ ಮ್ಯಾಡ್ರೀಡ್ ತಂಡಗಳು ಲಾಲೀಗಾ ಫುಟ್ಬಾಲ್ ಲೀಗ್ ಟೂರ್ನಿಯಲ್ಲಿ ಇಂದು ಮುಖಾಮುಖಿಯಾಗಿದ್ದು ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಎಲ್ ಕ್ಲಾಸಿಕೋ ಎಂದೇ ಈ ತಂಡಗಳ ಮುಖಾಮುಖಿ ಫುಟ್ಬಾಲ್ ಪ್ರೇಮಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ.

ವಿಶ್ವದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡೆ ಎಂಬ ಖ್ಯಾತಿಗೆ ಹೊಂದಿರುವ ಫುಟ್ಬಾಲ್‌ಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಅದರಲ್ಲೂ ರಿಯಲ್ ಮ್ಯಾಡ್ರೀಡ್ ಹಾಘೂ ಬಾರ್ಸಿಲೋನಾ ತಂಡಗಳ ನಡುವಿನ ಪಂದ್ಯವೆಂದರೆ ಜಗತ್ತಿನ ಮೂಲೆ ಮೂಲೆಯಲ್ಲಿರುವ ಫುಟ್ಬಾಲ್ ಅಭಿಮಾನಿಗಳು ಕೂಡ ಈ ಪಂದ್ಯಕ್ಕಾಗಿ ಕಾತುರವಾಗಿತ್ತಾರೆ. ದೇಶಗಳ ಗಡಿ ದಾಟಿ ಕೋಟ್ಯಂತರ ಅಭಿಮಾನಿಗಳು ಈ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದಾರೆ.

ಈ ಕುತೂಹಲಕಾರಿ ಕದನದ ಬಗ್ಗೆ ಮುಂಬೈ ಮೂಲದ 24ರ ಹರೆಯದ ಫುಟ್ಬಾಲ್ ಪ್ರೇಮಿ ಸಾಯಿ ಮೋಹನ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ. 2020ರಲ್ಲಿ ಸ್ಯಾಂಟಿಯಾಗೋ ಬೆರ್ನಾಬ್ಯೂ ಸ್ಟೇಡಿಯಂನಲ್ಲಿ ನಡೆದ ಈ ಎರಡು ತಂಡಗಳ ಕದನಕ್ಕೆ ನೇರವಾಗಿ ಸಾಕ್ಷಿಯಾಗಿದ್ದ ಸಾಯಿಮೋಹನ್ ಮತ್ತೊಮ್ಮೆ ಈ ಎರಡು ತಂಡಗಳು ಮುಖಾಮುಖಿಯಾಗಿತ್ತಿರುವ ಈ ಸಂದರ್ಭದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

"ಅದು ಮಾರ್ಚ್ 3 2020 ರಂದು ನಡೆದ ಎಲ್ ಕ್ಲಾಸಿಕೋ ಮುಖಾಮುಖಿಯಾಗಿತ್ತು. ನಾನು ಮ್ಯಾಡ್ರಿಡ್‌ಗೆ ತೆರಳಿ 6 ತಿಂಗಳಾಗಿತ್ತಷ್ಟೆ. ಕಡೆಗೂ ಈ ಎಲ್ ಕ್ಲಾಸಿಕೋ ಮುಖಾಮುಖಿ ನೋಡುವ ಅವಕಾಶ ಪಡೆದುಕೊಂಡಿದ್ದೆ. ನಾನು ಟಿಕೆಟ್‌ಗಳನ್ನು ಪಡೆಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದೆ ಆದರೆ ದುರದೃಷ್ಟವಶಾತ್ ಎಲ್ಲಾ ಟಿಕೆಟ್ ಕೂಡ 3 ನಿಮಿಷಗಳೊಳಗೆ ಮಾರಾಟವಾಗಿತ್ತು. ಮರು ಮಾರಾಟ ಮಾಡುವ ವೆಬ್‌ಸೈಟ್‌ಗಳಲ್ಲಿ ಟಿಕೆಟ್‌ನ ದರ ನನ್ನ ಬಜೆಟ್ ಮೀರಿ ಹೋಗಿತ್ತು"

"ನಾನು ರಿಯಲ್ ಮ್ಯಾಡ್ರಿಡ್ ವೆಬ್‌ಸೈಟ್ ಮತ್ತು ಎಲ್ಲಾ ಇತರ ಟಿಕೆಟ್ ಸೈಟ್‌ಗಳನ್ನು ಪ್ರತಿ ನಿಮಿಷವೂ ರಿಫ್ರೆಶ್ ಮಾಡುತ್ತಲೇ ಇದ್ದೆ. ಪಂದ್ಯ ಸ್ಥಳೀಯ ಕಾಲಮಾನ ರಾತ್ರಿ 9:00 ಗಂಟೆಗೆ ಪ್ರಾರಂಭವಾಗಬೇಕಿತ್ತು. ಅದೇ ರಾತ್ರಿ 8:20ರ ಸುಮಾರಿಗೆ ನಾನು ಇದ್ದಕ್ಕಿದ್ದಂತೆ ಅಧಿಕೃತ ವೆಬ್‌ಸೈಟ್‌ನಲ್ಲಿ ಒಂದು ಟಿಕೆಟ್ ಲಭ್ಯವಿರುವುದನ್ನು ನೋಡಿದೆ. ಆ ಟಿಕೆಟ್‌ನ ಬೆಲೆಯನ್ನು ನೋಡಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ. ಆ ಟಿಕೆಟ್‌ನ ಬೆಲೆ ಕೇವಲ 80 ಯುರೋ ಆಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅದು ಅತ್ಯುತ್ತಮ ಸೀಟುಗಳಲ್ಲಿ ಒಂದಾಗಿದ್ದು ಕಾರ್ನರ್ ಫ್ಲಾಗ್‌ಗಳ ಸಮೀಪದ ಸೀಟು ನನಗೆ ದೊರೆತಿತ್ತು. ಫೆಬ್ರವರಿ 2020 ರಲ್ಲಿ ಫುಟ್ಬಾಲ್ ಆಡುವಾಗ ನಾನು ಗಾಯಗೊಂಡಿದ್ದದ್ದನ್ನು ಕೂಡ ನಾನು ಆ ಕ್ಷಣ ಮರೆತಿದ್ದೆ. ಕ್ರೀಡಾಂಗಣದಿಂದ 1.4 ಕಿಮೀ ದೂರದಲ್ಲಿ ನಾನು ವಾಸಿಸುತ್ತಿದ್ದರಿಂದ ಪಂದ್ಯ ನಡೆಯುತ್ತಿದ್ದ ಬರ್ನಾಬ್ಯೂ ಕಡೆಗೆ ಓಡಲು ಆರಂಭಿಸಿದ್ದೆ"

"ನಾನು ಪಂದ್ಯದ ಆರಂಭಕ್ಕೂ ಮುನ್ನವೇ ಕ್ರೀಡಾಂಗಣ ತಲುಪಿದ್ದೆ. ನಾನು ನನ್ನ ಸೀಟ್‌ಗೆ ತಲುಪುತ್ತಿದ್ದಂತೆಯೇ ನಾನು ನನ್ನ ಅದೃಷ್ಟಕ್ಕೆ ಧನ್ಯವಾದ ಸಲ್ಲಿಸಿದೆ. ನನ್ನ ಬಾಲ್ಯದ ನೆಚ್ಚಿನ ಆಟಗಾರರು ನನ್ನಿಂದ ಕೇವಲ 40 ಮೀಟರ್‌ಗಳಷ್ಟು ದೂರದಲ್ಲಿ ಆಡುವುದನ್ನು ನಾನು ಇನ್ನೂ ವಿಸ್ಮಯದಿಂದ ನೋಡುತ್ತಿರುವಾಗಲೇ ಪಂದ್ಯ ಆರಂಬವಾಗಿತ್ತು" ಎಂದು ಈ ಹಿಂದಿನ ಮುಖಾಮುಖಿಯಲ್ಲಿನ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ ಸಾಯಿ ಮೋಹನ್.

ಇನ್ನು ಮತ್ತೋರ್ವ ಅಭಿಮಾನಿ ವಡೋಧರಾದ ಸಿದ್ದಾರ್ಥ್ ಝಾ ಕೂಡ ಈ ಪಂದ್ಯದ ಬಗೆಗಿನ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಸಿದ್ದಾರ್ಥ್ ಝಾ ಕೂಡ ರಿಯಲ್ ಮ್ಯಾಡ್ರಿಡ್ ತಂಡದ ಅಭಿಮಾನಿಯಾಗಿದ್ದು ಈ ದಿನ ನಡೆಯುವ ಕುತೂಹಲಕಾರಿ ಮುಖಾಮುಖಿಯನ್ನು ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದು ವಿಶೇಷವಾಗಿ ಮುಖಾಮುಖಿಯಾಗಲಿದೆ ಎಂದಿದ್ದಾರೆ ಸಿದ್ದಾರ್ಥ್ ಝಾ.

Story first published: Sunday, October 16, 2022, 12:09 [IST]
Other articles published on Oct 16, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+