Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೀಫಾ ವಿಶ್ವಕಪ್ 2018 ಕಪ್ ಎತ್ತಿಹಿಡಿದ ಇಂಗ್ಲೆಂಡಿನ ಹೀರೋ ಬೆನ್!

All this boy wanted after six weeks of radiotherapy was his own World Cup

ಬೆಂಗಳೂರು, ಜುಲೈ 06: ರಷ್ಯಾದಲ್ಲಿ ನಡೆದಿರುವ ಫೀಫಾ ವಿಶ್ವಕಪ್ 2018ರಲ್ಲಿ ಅಚ್ಚರಿಯ ಫಲಿತಾಂಶ, ಅನೇಕ ಅಭಿಮಾನಿಗಳಿಗೆ ಆಘಾತ ತಂದಿದೆ. ಸದ್ಯ ಲೀಗ್ ಹಂತದ ಅಬ್ಬರ ಮುಗಿದು, ನಾಕೌಟ್ ಹಂತದ ಸಂಭ್ರಮದ ನಂತರ ಕ್ವಾರ್ಟರ್ ಫೈನಲ್ ಹಂತಕ್ಕೆ ಬಂದಿದೆ.

ಆದರೆ, ಫೈನಲ್ ಪಂದ್ಯಕ್ಕೂ ಮುನ್ನವೇ ಇಂಗ್ಲೆಂಡ್ ಹೀರೊ ಬೆನ್ ಕೈಗೆ ವಿಶ್ವಕಪ್ ಟ್ರೋಫಿ ಸೇರಿದೆ. ಯಾರು ಈ ಹೀರೋ ಬೆನ್?

ಬೆನ್ -ಇಂಗ್ಲೆಂಡಿನ ಪುಟ್ಟ ಬಾಲಕ. ಕ್ಯಾನ್ಸರ್ ಪೀಡಿತ ಬೆನ್, ಕಳೆದ ಆರು ವಾರಗಳಿಂದ ರೇಡಿಯೋ ಥೆರಪಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ವಿಶ್ವಕಪ್ ಟ್ರೋಫಿ ಹೊಂದುವ ಹಂಬಲದಿಂದ ತೀವ್ರ ನೋವಿನ ಚಿಕಿತ್ಸೆಯನ್ನು ಸಮರ್ಥವಾಗಿ ಎದುರಿಸಿ, ಹೀರೋ ಎನಿಸಿಕೊಂಡಿದ್ದಾನೆ.

ಬೆನ್ ನಡೆಸಿದ ಹೋರಾಟಕ್ಕೆ ಮೆಚ್ಚಿ ವಿಶ್ವಕಪ್ ಟ್ರೋಫಿಯ ಪ್ರತಿರೂಪವನ್ನು ಆತನ ಕೈಗಿತ್ತು, ಆತನ ಮುಖದಲ್ಲಿ ಮಂದಹಾಸ ಮೂಡಿಸಲಾಗಿದೆ. ಮಗುವಿನ ಮನಸ್ಸು ಅರಿತು, ಆತನ ಬಯಕೆ ಈಡೇರಿಸಿದವರೆಲ್ಲರಿಗೂ ಟ್ವಿಟ್ಟರ್ ನಲ್ಲಿ ಧನ್ಯವಾದಗಳ ಮಹಾಪೂರವೇ ಹರಿದು ಬರುತ್ತಿದೆ. ಬೆನ್ ನಂಥ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಬ್ಯೂಟಿಫುಲ್ ಗೇಮ್ ಫುಟ್ಬಾಲ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

Story first published: Friday, July 6, 2018, 14:14 [IST]
Other articles published on Jul 6, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+