Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Erling Haaland ಐಷಾರಾಮಿ ಜೀವನಕ್ಕೆ ಇವರ ಬ್ಯಾಗ್‌ಗಳೇ ಸಾಕ್ಷಿ; ಬ್ಯಾಗ್ ಬೆಲೆ ಬರೋಬ್ಬರಿ 7 ಕೋಟಿ

ಫುಟ್ಬಾಲ್‌ ವಿಶ್ವಕಪ್‌ ಆರಂಭವಾಗಿದೆ. ಸ್ಟಾರ್ ಆಟಗಾರರು ಈಗ ತಮ್ಮ ತಮ್ಮ ತಂಡಗಳ ಪರ ಕಣಕ್ಕೆ ಇಳಿಯುತ್ತಿದ್ದಾರೆ. ಈ ವೇಳೆ ಅಭಿಮಾನಿಗಳ ಕಣ್ಣುಗಳು ಆಟಗಾರರ ಜೀವನ ಶೈಲಿಯ ಮೇಲೆ ನೆಟ್ಟಿರಲಿವೆ. ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಹಲವು ಸ್ಟಾರ್ ಆಟಗಾರರು ತಮ್ಮ ಐಶಾರಾಮಿ ಜೀವನದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಇದರಲ್ಲಿ ಎದ್ದು ಕಾಣುವ ಹೆಸರು ನಾರ್ವೆಯ ಎರ್ಲಿಂಗ್ ಹಾಲೆಂಡ್.

ಎರ್ಲಿಂಗ್ ಹಾಲೆಂಡ್ ತಮ್ಮ ಕಾಲ್ಚಳಕದ ಮೂಲಕ ಸದ್ದು ಮಾಡಿರುವ ಆಟಗಾರ. ಇವರು ಪ್ರೀಮಿಯರ್ ಲೀಗ್‌ನಲ್ಲಿ ಮ್ಯಾಂಚೆಸ್ಟರ್‌ ಸಿಟಿ ಕ್ಲಬ್‌ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಇವರು ಸ್ಟ್ರೈಕರ್‌ ಆಗಿ ಸದ್ದು ಮಾಡಿರುವ ಪ್ರತಿಭೆ. ನಾರ್ವೆ ಕಂಡಿರುವ ದಿಗ್ಗಜ ಫುಟ್ಬಾಲ್ ಆಟಗಾರರ ಪಟ್ಟಿಯಲ್ಲೂ ಇವರಿಗೆ ಸ್ಥಾನ.

Erling Haaland

ಸಾಮಾನ್ಯವಾಗಿ ಹರ್ಮ್ಸ್ ಬರ್ಕಿನ್ ಬ್ಯಾಗ್‌ಗಳು ಫುಟ್‌ಬಾಲ್ ಆಟಗಾರರ ಪತ್ನಿಯರು ಅಥವಾ ಗೆಳತಿಯರ ಫ್ಯಾಷನ್ ಆಯ್ಕೆಯಾಗಿ ಹೆಸರುಮಾಡಿವೆ. ಆದರೆ ಹಾಲೆಂಡ್ ವಿಶಿಷ್ಟ ರೀತಿಯ ಲೈಫ್‌ಸ್ಟೈಲ್ ರೂಢಿಸಿಕೊಂಡಿದ್ದಾರೆ. ಇವರು ತಮ್ಮ ವಿಶಿಷ್ಟ ಹಾಗೂ ಅಪರೂಪದ ಬ್ಯಾಗ್‌ಗಳ ಸಂಗ್ರಹದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಎರ್ಲಿಂಗ್ ಹಾಲೆಂಡ್ ನಿವ್ವಳ ಆದಾಯ ಎಷ್ಟು?

ನಾರ್ವೆಯ ಸ್ಟಾರ್ ಆಟಗಾರ ಎರ್ಲಿಂಗ್ ಹಾಲೆಂಡ್ ಅವರ ನಿವ್ವಳ ಆದಾಯ 100 ಮಿಲಿಯನ್‌ ಡಾಲರ್ ಎಂದು ಅಂದಾಜಿಸಲಾಗಿದೆ. ಇವರು ತಮ್ಮ ಐಶಾರಾಮಿ ಜೀವನ ಶೈಲಿಯಿಂದಲೇ ಹೆಸರುವಾಸಿಯಾದ ಆಟಗಾರ.

ವಿಶ್ವದ ಅತ್ಯಂತ ದುಬಾರಿ ಬ್ರ್ಯಾಂಡ್‌ಗಳಲ್ಲಿ ಒಂದಾದ ಹರ್ಮ್ಸ್ ಸಂಸ್ಥೆಯ ಬ್ಯಾಗ್‌ಗಳ ಭಾರಿ ಕಲೆಕ್ಷನ್‌ಗಳನ್ನು ಎರ್ಲಿಂಗ್ ಹಾಲೆಂಡ್ ಹೊಂದಿದ್ದಾರೆ. ಇವರ ಬಳಿ ಇರುವ ಒಟ್ಟು ಬ್ಯಾಗ್‌ಗಳ ಮೌಲ್ಯ 6,50,000 ಪೌಂಡ್‌ಗಳಿಗಿಂತಲೂ (ಸುಮಾರು 7 ಕೋಟಿ ರೂಪಾಯಿಗಳಿಗಿಂತ ಹೆಚ್ಚು) ಅಧಿಕವಾಗಿದೆ.

ಹಾಲೆಂಡ್ ಬ್ಯಾಗ್‌ ಕಲೆಕ್ಷನ್‌

ಎರ್ಲಿಂಗ್ ಹಾಲೆಂಡ್ ಅವರ ಬಳಿ ಇರುವ ಬ್ಯಾಗ್‌ ಕಲೆಕ್ಷನ್‌ಗಳಲ್ಲಿ ಬರ್ಕಿನ್ 25 ಹಿಮಾಲಯ ನಿಲೋಟಿಕಸ್ ಕ್ರೊಕೊಡೈಲ್ ಸಹ ಒಂದಾಗಿದೆ. ಇದರ ಮೌಲ್ಯ ಬರೋಬ್ಬರಿ ಸುಮಾರು 3.5 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಇವರ ಕಲೆಕ್ಷನ್‌ನನಲ್ಲಿ ಎವರ್‌ಕಾಫ್ ಟೋಯಿಲ್ ಕಾರ್ಗೋ ಹೆಚ್‌ಎಸಿ ಬರ್ಕಿನ್ ಸಹ ಇದ್ದು, ಇದರ ಮೌಲ್ಯ ಸಮಾರು 62 ಲಕ್ಷ ರೂ. ಆಗಿದೆ. ಈ ಬ್ಯಾಗ್‌ ಈ ಬಾರಿಯ ವಿಶ್ವಕಪ್‌ ವೇಳೆ ಭಾರೀ ಗಮನ ಸೆಳೆದಿದೆ.

Cristiano Ronaldo: ಫಿಫಾ ವಿಶ್ವಕಪ್‌ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಐತಿಹಾಸಿಕ ಸಾಧನೆ; ಪೋರ್ಚುಗಲ್‌ಗೆ ಜಯ

Cristiano Ronaldo: ಫಿಫಾ ವಿಶ್ವಕಪ್‌ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಐತಿಹಾಸಿಕ ಸಾಧನೆ; ಪೋರ್ಚುಗಲ್‌ಗೆ ಜಯ

ಎಂಡ್‌ಲೆಸ್ ರೋಡ್ ಹಾಟ್ ಅ ಕೌರೋಯಿಸ್ ಬ್ಯಾಗ್‌ ಅನ್ನು ಸಹ ಇವರು ಹೊಂದಿದ್ದು, ಇದರ ಮೌಲ್ಯ 56 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಅಲ್ಲದೆ ಇವರ ಬಳಿ ಟೋಯಿಲ್ ಹೆಚ್‌ಎಸಿ ಬರ್ಕಿನ್, ಹೆಚ್ ಟೋಗೊ ಹೆಚ್‌ಎಸಿ ಕಾಸಾಕ್ ಬರ್ಕಿನ್ 40 ಪಲ್ಲಾಡಿಯಮ್ ನಂತಹ ಬ್ಯಾಗ್‌ಗಳು ಸಹ ಇವೆ.

ಎರ್ಲಿಂಗ್ ಹಾಲೆಂಡ್ ಸಾಧನೆ

ಮ್ಯಾಂಚೆಸ್ಟರ್ ಸಿಟಿ ಕ್ಲಬ್ ಪರ ಆಡುವ ಎರ್ಲಿಂಗ್ ಹಾಲೆಂಡ್, ತಮ್ಮ ಪದಾರ್ಪಣೆಯ ಆವೃತ್ತಿಯಲ್ಲೇ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ಗೋಲುಗಳನ್ನು (36) ಬಾರಿಸಿದ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ. ಇವರು ಮ್ಯಾಂಚೆಸ್ಟರ್ ಸಿಟಿ ಪರ ಲೀಗ್‌ನಲ್ಲಿ 130ಕ್ಕೂ ಹೆಚ್ಚು ಪಂದ್ಯಗಳಿಂದ 110ಕ್ಕೂ ಅಧಿಕ ಗೋಲುಗಳನ್ನು ಸಿಡಿಸಿರುವ ಅವರು, ಸತತವಾಗಿ 'ಗೋಲ್ಡನ್ ಬೂಟ್' ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಮೆಸ್ಸಿ ದಾಖಲೆಯ ಹಿಂದೆ ಬಿದ್ದಿರುವ ಕೈಲ್‌ ಎಂಬಪ್ಪೆ; ಫ್ರಾನ್ಸ್‌ಗೆ ಭರ್ಜರಿ ಜಯ

ಮೆಸ್ಸಿ ದಾಖಲೆಯ ಹಿಂದೆ ಬಿದ್ದಿರುವ ಕೈಲ್‌ ಎಂಬಪ್ಪೆ; ಫ್ರಾನ್ಸ್‌ಗೆ ಭರ್ಜರಿ ಜಯ

ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ನಾರ್ವೆ ದೇಶವನ್ನು ಪ್ರತಿನಿಧಿಸುವ ಹಾಲೆಂಡ್, ಕೇವಲ 46 ಪಂದ್ಯಗಳಲ್ಲಿ 50 ಗೋಲುಗಳನ್ನು ಪೂರೈಸುವ ಮೂಲಕ ಫುಟ್‌ಬಾಲ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಈ ಮೈಲಿಗಲ್ಲು ತಲುಪಿದ ಆಟಗಾರ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇವರಿಗೆ ಯುಇಎಫ್‌ಎ ವರ್ಷದ ಅತ್ಯುತ್ತಮ ಆಟಗಾರ, ಗೋಲ್ಡನ್ ಬಾಯ್ ನಂತಹ ಪ್ರತಿಷ್ಠಿತ ಪ್ರಶಸ್ತಿ ಲಭಿಸಿವೆ.

Story first published: Wednesday, June 24, 2026, 15:19 [IST]
Other articles published on Jun 24, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+