UEFA Euro 2020: ಸ್ಕಾಟ್ಲೆಂಡ್‌ಗೆ ದಂಗುಬಡಿಸಿದ ಝೆಕ್ ರಿಪಬ್ಲಿಕ್

ಗ್ಲಾಸ್ಗೋ: ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿರುವ ಹ್ಯಾಂಪ್‌ಡೆನ್ ಪಾರ್ಕ್ ಅರೆನಾದಲ್ಲಿ ಮಂಗಳವಾರ (ಜೂನ್ 15) ನಡೆದ ಯೂನಿಯನ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಎಎಫ್‌ಎ) ಯೂರೋ 2020 ಸ್ಕಾಟ್ಲೆಂಡ್ vs ಝೆಕ್ ರಿಪಬ್ಲಿಕ್ ನಡುವಿನ ಪಂದ್ಯದಲ್ಲಿ ಝೆಕ್ ರಿಪಬ್ಲಿಕ್ 2-0ಯಿಂದ ಗೆದ್ದಿದೆ.
ಝೆಕ್ ಫಾರ್ವರ್ಡ್ ಪ್ಯಾಟ್ರಿಕ್ ಶಿಕ್ ಅವರ ಜೋಡಿ ಗೋಲ್‌ಗಳ ನೆರವಿನಿಂದ ಆತಿಥೇಯ ಸ್ಕಾಟ್ಲೆಂಡನ್ನು ಝೆಕ್ ರಿಪಬ್ಲಿಕ್ ದಂಗುಬಡಿಸಿದೆ. ಪಂದ್ಯದ ಮೊದಲಾರ್ಧದಲ್ಲಿ ಅಂದರೆ 42ನೇ ನಿಮಿಷದಲ್ಲಿ ಮತ್ತು ದ್ವಿತೀಯಾರ್ಧದಲ್ಲಿ (52ನೇ ನಿಮಿಷ) ಗೋಲ್ ಬಾರಿಸಿದ ಪ್ಯಾಟ್ರಿಕ್, ಝೆಕ್ ಗೆಲುವನ್ನು ಸಾರಿದರು.
ಈ ಪಂದ್ಯದ ಬಳಿಕ ಗ್ರೂಪ್ ಡಿಯಲ್ಲಿರುವ ಝೆಕ್ ರಿಪಬ್ಲಿಕ್ ಮತ್ತು ಇಂಗ್ಲೆಂಡ್ ತಂಡಗಳು ತಲಾ ಒಂದೊಂದು ಜಯದೊಂದಿಗೆ ಅಂಕಪಟ್ಟಿಯಲ್ಲಿ ತಲಾ ಮೂರು ಅಂಕಗಳೊಂದಿಗೆ ಕ್ರಮವಾಗಿ ಮೊದಲ, ದ್ವಿತೀಯ ಸ್ಥಾನ ಪಡೆದುಕೊಂಡಿವೆ. ಇದೇ ಗ್ರೂಪ್‌ನಲ್ಲಿರುವ ಕೊವೇಷಿಯಾ ಮತ್ತು ಸ್ಕಾಟ್ಲೆಂಡ್ ಕೆಳ ಸ್ಥಾನದಲ್ಲಿದೆ.
ಅಂಕಪಟ್ಟಿಯಲ್ಲಿ ಈಗ ಗ್ರೂಪ್ 'ಎ'ಯಲ್ಲಿ ಇಟಲಿ, ಗ್ರೂಪ್ 'ಬಿ'ಯಲ್ಲಿ ಬೆಲ್ಜಿಯಂ, ಗ್ರೂಪ್ 'ಸಿ'ಯಲ್ಲಿ ಆಸ್ಟ್ರಿಯಾ, ಗ್ರೂಪ್ 'ಡಿ'ಯಲ್ಲಿ ಝೆಕ್ ರಿಪಬ್ಲಿಕ್, ಗ್ರೂಪ್ 'ಇ'ಯಲ್ಲಿ ಸ್ಲೊವೇಕಿಯಾ ತಂಡಗಳು ಮೊದಲ ಸ್ಥಾನದಲ್ಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications