ಇಂಗ್ಲೆಂಡ್ ಆಟಗಾರರಿಗೆ ಜನಾಂಗೀಯ ನಿಂದನೆ, ಅಭಿಮಾನಿಗಳ ಅಸಮಾಧಾನ

ಲಂಡನ್: ಸಾಮಾಜಿಕ ಜಾಲತಾಣ ದೈತ್ಯರಾದ ಫೇಸ್ಬುಕ್ ಮತ್ತು ಟ್ವಿಟರ್ ವಿರುದ್ಧ ಫುಟ್ಬಾಲ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯೂರೋ 2020 ಫೈನಲ್‌ನಲ್ಲಿ ಇಟಲಿ ವಿರುದ್ಧ ಇಂಗ್ಲೆಂಡ್ ಸೋತ ಬಳಿಕ ಇಂಗ್ಲೆಂಡ್‌ನ ಮೂವರು ಕರಿಯ ಜನಾಂಗದ ಆಟಗಾರರು ನಿಂದನೆಗೆ ಗುರಿಯಾಗಿದ್ದರಿಂದ ಫೇಸ್ಬುಕ್, ಟ್ವಿಟರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇಟಲಿ ವಿರುದ್ಧ ಯೂರೋ 2020 ಫೈನಲ್ ಪಂದ್ಯದಲ್ಲಿ ಸೋತ ಬಳಿಕ ಇಂಗ್ಲೆಂಡ್ ಆಟಗಾರರಾದ ಮಾರ್ಕಸ್ ರಾಶ್‌ಫೋರ್ಡ್, ಜಾಡಾನ್ ಸ್ಯಾಂಚೊ ಮತ್ತು ಬುಕಾಯೊ ಸಾಕಾ ಜನಾಂಗೀಯ ನಿಂದನೆಗೆ ಗುರಿಯಾಗಿದ್ದಾರೆ. ಪಂದ್ಯದಲ್ಲಿ ಮೂವರೂ ಪೆನಾಲ್ಟಿ ಶೂಟೌಟ್ ನಲ್ಲಿ ಗೋಲ್ ಬಾರಿಸಲು ವಿಫಲರಾಗಿದ್ದರು. ಪಂದ್ಯದಲ್ಲಿ ಇಟಲಿ 3-2ರಿಂದ ಗೆದ್ದಿತ್ತು.
ಯೂರೋ 2020ಯಲ್ಲಿ ಇಟಲಿ ವಿರುದ್ಧ ಇಂಗ್ಲೆಂಡ್ ಸೋತ ಬಳಿಕ ಆಂಗ್ಲ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಜನಾಂಗೀಯ ನಿಂದನೆಗೆ ತುತ್ತಾಗಿದ್ದರು. ಆಟಗಾರರನ್ನು ನಿಂದನೆ ಮಾಡಿರುವ ಪೋಸ್ಟ್ ಅನ್ನು ತಕ್ಷಣ ಯಾಕೆ ಟ್ವಿಟರ್, ಫೇಸ್ಬುಕ್ ತೆಗೆದು ಹಾಕಿಲ್ಲ ಎಂದು ಅಭಿಮಾನಿಗಳು ಅಸಮಾಧಾನ ತೋರಿಕೊಂಡಿದ್ದಾರೆ.
"ಇದರ ಹಿಂದೆ ಯಾರಿದ್ದಾರೆ ಅನ್ನೋದು ನಮಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಇಂಥ ಕೆಟ್ಟ ನಡೆಗಳನ್ನು ಯಾವತ್ತೂ ಬೆಂಬಲಿಸುವುದಿಲ್ಲ. ಆಟಗಾರರನ್ನು ನಿಂದಿಸಿದವರಿಗೆ ಕಠಿಣ ಶಿಕ್ಷೆ ನೀಡಲು ಬೇಕಾದ ಎಲ್ಲದಕ್ಕೂ ನಾವು ಬೆಂಬಲಿಸುತ್ತೇವೆ," ಎಂದು ಫುಟ್ಬಾಲ್ ಅಸೋಸಿಯೇಶನ್ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications