55 ವರ್ಷಗಳ ಬಳಿಕ ಜರ್ಮನಿ ವಿರುದ್ಧ ಮುಯ್ಯಿ ತೀರಿಸಿಕೊಂಡ ಇಂಗ್ಲೆಂಡ್

ಲಂಡನ್: ಇಂಗ್ಲೆಂಡ್‌ನ ವೆಂಬ್ಲಿ ಸ್ಟೇಡಿಯಂನಲ್ಲಿ ಮಂಗಳವಾರ (ಜೂನ್ 29) ನಡೆದ ದ ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಯೂರೋ 2020 ಫುಟ್ಬಾಲ್ ಟೂರ್ನಿಯ ಇಂಗ್ಲೆಂಡ್ ಮತ್ತು ಜರ್ಮನಿ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ 2-0ಯ ಜಯ ಗಳಿಸಿದೆ.
ಇಂಗ್ಲೆಂಡ್‌ನ ರಹೀಮ್ ಸ್ಟರ್ಲಿಂಗ್ 75ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರೆ, ಆ ಬಳಿಕ ನಾಯಕ ಹ್ಯಾರಿ ಕೇನ್ 86ನೇ ನಿಮಿಷದಲ್ಲಿ ಗೋಲ್ ಬಾರಿಸಿ ಗೆಲುವನ್ನು ಸಾರಿದರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತನ್ನ ಬದ್ಧ ಎದುರಾಳಿ ಜರ್ಮನಿ ವಿರುದ್ಧ ಸತತ ಸೋಲಿನ ಮುಯ್ಯಿ ತೀರಿಸಿಕೊಂಡಿದೆ.
ಫುಟ್ಬಾಲ್ ಟೂರ್ನಿಯ ನಾಕೌಟ್ ಹಂತದಲ್ಲಿ ಜರ್ಮನಿ ವಿರುದ್ಧ ಇಂಗ್ಲೆಂಡ್ ಗೆಲುವು ಸಾಧಿಸಿ ಬಹಳ ವರ್ಷಗಳಾಗಿವೆ. 1966ರಲ್ಲಿ ಕಡೇಯ ಸಾರಿ ಇಂಗ್ಲೆಂಡ್ ತಂಡ ಜರ್ಮನಿ ವಿರುದ್ಧ ನಾಕೌಟ್ ಹಂತದಲ್ಲಿ ಗೆದ್ದಿತ್ತು. ಅದಾಗಿ ಬರೋಬ್ಬರಿ 55 ವರ್ಷಗಳ ಬಳಿಕ ಇಂಗ್ಲೆಂಡ್ ಪ್ರಮುಖ ಪಂದ್ಯದಲ್ಲಿ ಜರ್ಮನಿ ವಿರುದ್ಧ ಗೆದ್ದಿದೆ.
ಇದಕ್ಕೂ ಮುನ್ನ 1966ರ ವಿಶ್ವಕಪ್‌ನಲ್ಲಿ ಜರ್ಮಿನಿಯನ್ನು ಇಂಗ್ಲೆಂಡ್ ಸೋಲಿಸಿತ್ತು. ಆ ಬಳಿಕ ಜರ್ಮನಿ ತಂಡ ಇಂಗ್ಲೆಂಡ್ ಅನ್ನು 1970, 1990 ಮತ್ತು 2010ರ ವಿಶ್ವಕಪ್‌ಗಳಲ್ಲಿ ಹೊರಗಟ್ಟಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications