ಯೂರೋ 2020: ಸ್ವಿಟ್ಜರ್ಲ್ಯಾಂಡ್ ವಿರುದ್ಧ ಇಟಲಿಗೆ ಸುಲಭ ಜಯ

ರೋಮ್: ರೋಮ್‌ನ ಸ್ಟೇಡಿಯೋ ಒಲಿಂಪಿಕೋ ಅರೆನಾದಲ್ಲಿ ಗುರುವಾರ (ಜೂನ್ 17) ನಡೆದ ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಇಟಲಿ ಮತ್ತು ಸ್ವಿಟ್ಜರ್ಲ್ಯಾಂಡ್ ನಡುವಿನ ಪಂದ್ಯದಲ್ಲಿ ಇಟಲಿ 3-0ಯ ಸುಲಭ ಜಯ ಗಳಿಸಿದೆ.
ಗ್ರೂಪ್ 'ಎ'ಯ ಪಂದ್ಯದಲ್ಲಿ ಇಟಲಿಯಿಂದ ಮ್ಯಾನುಯೆಲ್ ಲೊಕಾಟೆಲ್ಲಿ ಎರಡು ಗೋಲ್ ಬಾರಿಸಿದರೆ, ಸಿರೋ ಇಮ್ಮೊಬೈಲ್ ಒಂದು ಗೋಲ್ ಬಾರಿಸಿ ಸ್ವಿಸ್ ಸೋಲಿಗೆ ಕಾರಣರಾದರು. ಲೊಕಾಟೆಲ್ಲಿ 26, 52ನೇ ನಿಮಿಷಗಳಲ್ಲಿ ಗೋಲ್‌ಗಳನ್ನು ಬಾರಿಸಿದರೆ, ಇಮ್ಮೊಬೈಲ್ ಕೊನೇ ಕ್ಷಣದಲ್ಲಿ ಅಂದರೆ 89ನೇ ನಿಮಿಷದಲ್ಲಿ ಗೋಲ್ ಬಾರಿಸಿದರು.
ಈ ಪಂದ್ಯದ ಬಳಿಕ ಗ್ರೂಪ್ 'ಎ'ಯ ಪಾಯಿಂಟ್ಸ್ ಟೇಬಲ್‌ನಲ್ಲಿ ಇಟಲಿ ಮೊದಲ ಸ್ಥಾನದಲ್ಲಿದೆ. ಆಡಿರುವ ಎರಡು ಪಂದ್ಯಗಳಲ್ಲಿ ಎರಡೂ ಪಂದ್ಯಗಳನ್ನು ಇಟಲಿ ಗೆದ್ದಿದ್ದು, 6 ಪಾಯಿಂಟ್ಸ್ ಕಲೆ ಹಾಕಿದೆ. ದ್ವಿತೀಯ ಸ್ಥಾನದಲ್ಲಿರುವ ವೇಲ್ಸ್ 4 ಪಾಯಿಂಟ್ಸ್ ಗಳಿಸಿದೆ.
ಗ್ರೂಪ್ 'ಎ'ಯಲ್ಲಿ ಇಟಲಿ ಅಗ್ರ ಸ್ಥಾನದಲ್ಲಿದ್ದರೆ, ಗ್ರೂಪ್ 'ಬಿ'ಯಲ್ಲಿ ಬೆಲ್ಗಿಯಂ, ಗ್ರೂಪ್ 'ಸಿ'ಯಲ್ಲಿ ಆಸ್ಟ್ರಿಯಾ, ಗ್ರೂಪ್ 'ಡಿ'ಯಲ್ಲಿ ಜೆಕ್ ರಿಪಬ್ಲಿಕ್, ಗ್ರೂಪ್ 'ಇ'ನಲ್ಲಿ ಸ್ಲೊವೇಕಿಯಾ, ಗ್ರೂಪ್ 'ಎಫ್'ನಲ್ಲಿ ಪೋರ್ಚುಗಲ್ ತಂಡಗಳಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications