Euro 2020: ನಾರ್ತ್ ಮ್ಯಾಸಿಡೋನಿಯಾ ಮಣಿಸಿದ ನೆದರ್ಲ್ಯಾಂಡ್ಸ್

ಆ್ಯಮ್ಸ್‌ಸ್ಟರ್‌ಡ್ಯಾಮ್: ನೆದರ್ಲ್ಯಾಂಡ್ಸ್‌ನ ಆ್ಯಮ್ಸ್‌ಸ್ಟರ್‌ಡ್ಯಾಮ್‌ನಲ್ಲಿರುವ ಜೋಹಾನ್ ಕ್ರೂಜ್ಫ್ ಅರೆನಾದಲ್ಲಿ ಸೋಮವಾರ (ಜೂನ್ 21) ನಡೆದ ಯೂರೋ 2020 ಗ್ರೂಪ್ ಸಿ ಪಂದ್ಯದಲ್ಲಿ ನಾರ್ತ್ ಮ್ಯಾಸಿಡೋನಿಯಾ ವಿರುದ್ಧ ನೆದರ್ಲ್ಯಾಂಡ್ಸ್ 3-0ಯ ಗೆಲುವು ದಾಖಲಿಸಿದೆ.
ಮೆಂಫಿಸ್ ಡಿಪೇ ಮೊದಲಾರ್ಧದಲ್ಲಿ ಅಂದರೆ 24ನೇ ನಿಮಿಷದಲ್ಲಿ ಮತ್ತು ದ್ವಿತೀಯಾರ್ಧದಲ್ಲಿ ಜಾರ್ಜಿನಿಯೊ ವಿಜ್ನಾಲ್ಡಮ್ (51 ಮತ್ತು 58ನೇ ನಿಮಿಷದಲ್ಲಿ) ಗೋಲ್ ಬಾರಿಸಿ ತಂಡದ ಭರ್ಜರಿ ಗೆಲುವಿಗೆ ಕಾರಣರಾದರು. ಈ ಗೆಲುವಿನೊಂದಿಗೆ ಸಿ ಗ್ರೂಪ್‌ನಲ್ಲಿ ನೆದರ್ಲ್ಯಾಂಡ್ಸ್ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ.
ಈ ಪಂದ್ಯದೊಂದಿಗೆ ಗ್ರೂಪ್ ಸಿಯಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ನೆದರ್ಲ್ಯಾಂಡ್ಸ್ ಮೂರರಲ್ಲೂ ಜಯ ಗಳಿಸಿದೆ. ಗ್ರೂಪ್ ಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ನೆದರ್ಲ್ಯಾಂಡ್ಸ್ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರಿಯಾ, ಉಕ್ರೇನ್ ತಂಡಗಳು ಅನಂತರದ ಸ್ಥಾನಗಳಲ್ಲಿವೆ.
ಯೂರೋ 2020 ಒಟ್ಟಾರೆ ಪಾಯಿಂಟ್ಸ್ ಟೇಬಲ್‌ನಲ್ಲಿ ಗ್ರೂಪ್ ಎಯಲ್ಲಿ ಇಟಲಿ, ಗ್ರೂಪ್ ಬಿಯಲ್ಲಿ ಬೆಲ್ಜಿಯಂ, ಗ್ರೂಪ್ ಸಿಯಲ್ಲಿ ನೆದರ್ಲ್ಯಾಂಡ್ಸ್, ಗ್ರೂಪ್ ಡಿಯಲ್ಲಿ ಝೆಕ್ ರಿಪಬ್ಲಿಕ್, ಗ್ರೂಪ್ ಇಯಲ್ಲಿ ಸ್ವೀಡನ್, ಗ್ರೂಪ್ ಎಫ್‌ನಲ್ಲಿ ಫ್ರಾನ್ಸ್ ತಂಡಗಳು ಮೊದಲ ಸ್ಥಾನ ಪಡೆದುಕೊಂಡಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications