For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

Euro 2020: ಫ್ರಾನ್ಸ್ ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ ಸ್ವಿಟ್ಜರ್‌ಲ್ಯಾಂಡ್

Euro 2020: Switzerland beat France on penalties to reach quarter-finals

ಬುಚಾರೆಸ್ಟ್: ರುಮೇನಿಯಾದ ಬುಚಾರೆಸ್ಟ್‌ನಲ್ಲಿರುವ ನ್ಯಾಷನಲ್ ಅರೇನಾದಲ್ಲಿ ಜೂನ್ 29ರ ಮಂಗಳವಾರ ನಡೆದ ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಯೂರೋ 2020 ಫುಟ್ಬಾಲ್ ಟೂರ್ನಿಯ ರೌಂಡ್-16 ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಸ್ವಿಟ್ಜರ್‌ಲ್ಯಾಂಡ್ ಜಯ ಗಳಿಸಿದೆ.

ಜಿದ್ದಾಜಿದ್ದಿಯಿಂದ ಕೂಡಿದ್ದ ಪಂದ್ಯ ಅಸಲಿಗೆ 3-3ರಿಂದ ಡ್ರಾಗೊಂಡಿತ್ತಾದರೂ ಅಂತಿಮವಾಗಿ ಪೆನಾಲ್ಟಿ ಶೂಟೌಟ್‌ನಲ್ಲಿ ಸ್ವಿಟ್ಜರ್‌ಲ್ಯಾಂಡ್‌ ಮೇಲುಗೈ ಸಾಧಿಸಿತ್ತು. ಈ ಗೆಲುವಿನೊಂದಿಗೆ ಸ್ವಿಟ್ಜರ್‌ಲ್ಯಾಂಡ್ ಕ್ವಾರ್ಟರ್ ಫೈನಲ್‌ ಹಂತಕ್ಕೆ ಪ್ರವೇಶಿಸಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ ಸ್ವಿಟ್ಜರ್‌ಲ್ಯಾಂಡ್ ತಂಡ ಸ್ಪೇನ್ ಸವಾಲು ಸ್ವೀಕರಿಸಲಿದೆ.

ಪಂದ್ಯ ಆರಂಭಗೊಳ್ಳುತ್ತಲೇ ಗೋಲ್ ಖಾತೆ ತೆರೆದಿದ್ದು ಸ್ವಿಟ್ಜರ್‌ಲ್ಯಾಂಡ್‌ನ ಹ್ಯಾರಿಸ್ ಸೆಫೆರೋವಿಕ್. 15ನೇ ನಿಮಿಷದಲ್ಲಿ ಸೆಫೆರೋವಿಕ್ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಅದಾಗಿ 57ನೇ ನಿಮಿಷದಲ್ಲಿ ಫ್ರಾನ್ಸ್‌ನ ಕರೀಮ್ ಬೆನ್ಝೆಮ ಗೋಲ್ ಬಾರಿಸಿದರು. ಮರು ನಿಮಿಷದಲ್ಲಿ ಅಂದರೆ 59ನೇ ನಿಮಿಷದಲ್ಲಿ ಬೆನ್ಝೆಮ ಮತ್ತೊಂದು ಗೋಲ್ ಬಾರಿಸಿದರು.

ಫ್ರಾನ್ಸ್‌ನಿಂದ ಪೌಲ್‌ ಪೋಗ್ಬಾ 74ನೇ ನಿಮಿಷದಲ್ಲಿ ತಂಡದ ಪರ ಮೂರನೇ ಗೋಲ್ ಬಾರಿಸಿದರು. ಅದಾಗಿ ಸ್ವಿಟ್ಜರ್‌ಲ್ಯಾಂಡ್‌ನಿಂದ ಹ್ಯಾರಿಸ್ ಸೆಫೆರೋವಿಕ್ ವೈಯಕ್ತಿಕ ಎರಡನೇ ಗೋಲ್ ಬಾರಿಸಿದರು. 90ನೇ ನಿಮಿಷದಲ್ಲಿ ಸ್ವಿಸ್‌ನ ಮಾರಿಯೋ ಗವ್ರನೋವಿಕ್ ತಂಡದ ಪರ 3ನೇ ಗೋಲ್ ಬಾರಿಸಿ ಜಿದ್ದಾಜಿದ್ದಿಗೆ ಸಾಕ್ಷಿಯಾದರು. ಪೆನಾಲ್ಟಿ ಶೂಟೌಟ್‌ನಲ್ಲಿ 5-4ರ ಅಂತರದಲ್ಲಿ ಸ್ವಿಟ್ಜರ್‌ಲ್ಯಾಂಡ್ ಗೆದ್ದಿತು.

Story first published: Tuesday, June 29, 2021, 8:49 [IST]
Other articles published on Jun 29, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+