Euro Cup 2024 Semi-final-2: ಸತತ ಎರಡನೇ ಬಾರಿ ಫೈನಲ್‌ಗೆ ಆರ್ಹತೆ ಪಡೆದ ಇಂಗ್ಲೆಂಡ್; ಕಪ್ ಗೆಲ್ಲುವ ನೆದರ್ಲೆಂಡ್ಸ್ ಕನಸು ಭಗ್ನ
ಜುಲೈ 11 ಗುರುವಾರ, ಜರ್ಮನಿಯ ಡಾರ್ಟ್‌ಮಂಡ್‌ನ ಸಿಗ್ನಲ್ ಇಡುನಾ ಪಾರ್ಕ್‌ನಲ್ಲಿ ನಡೆದ ಯುರೋ ಕಪ್ 2024ರ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್-2ರ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಇಂಗ್ಲೆಂಡ್ ರೋಚಕ ಗೆಲುವು ದಾಖಲಿಸಿದೆ.
ಇಂಗ್ಲೆಂಡ್ ತಂಡವು 2-1 ಗೋಲುಗಳ ಅಂತರದಿಂದ ನೆದರ್ಲೆಂಡ್ಸ್ ಅನ್ನು ಸೋಲಿಸಿದೆ. ಬದಲಿ ಆಟಗಾರ ಒಲ್ಲಿ ವಾಟ್ಕಿನ್ಸ್ ಅವರು ಕೊನೆಯ ನಿಮಿಷದಲ್ಲಿ ಬಾರಿಸಿದ ಗೋಲಿನ ನೆರವಿನಿಂದ ನೆದರ್ಲೆಂಡ್ಸ್ ವಿರುದ್ಧ
ಇಂಗ್ಲೆಂಡ್ ತಂಡವು ಜಯ ಸಾಧಿಸಿದೆ.

ಈ ಮೂಲಕ ಸತತ ಎರಡನೇ ಬಾರಿಗೆ ಯೂರೋ ಕಪ್ ಫೈನಲ್‌ಗೆ ಇಂಗ್ಲೆಂಡ್ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಭಾನುವಾರ ಬರ್ಲಿನ್‌ನಲ್ಲಿ ನಡೆಯಲಿರುವ ಯುರೋ 2024ರ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವು ಸ್ಪೇನ್ ಅನ್ನು ಎದುರಿಸಲಿದೆ.
ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಗರೆಥ್ ಸೌತ್‌ಗೇಟ್ ಅವರ ತಂಡವು ಒಂದು ಗೋಲಿನ ಹಿನ್ನಡೆಯ ನಂತರ ಆಟಕ್ಕೆ ಮರಳಿಯತು. 7ನೇ ನಿಮಿಷದಲ್ಲಿ ಕ್ಸೇವಿ ಸಿಮನ್ಸ್ ಅವರ ಬುಲೆಟ್ ಶಾಟ್ ಗೋಲು ನೆದರ್ಲೆಂಡ್ಸ್ ತಂಡವನ್ನು ಮುನ್ನಡೆಸಿತು.
ಹತ್ತು ನಿಮಿಷಗಳ ನಂತರ ಹ್ಯಾರಿ ಕೇನ್ ಮೂಲಕ ಇಂಗ್ಲೆಂಡ್ ಪ್ರತ್ಯುತ್ತರ ನೀಡಿತು. ಪೆನಾಲ್ಟಿ ಮೂಲಕ ಹ್ಯಾರಿ ಕೇನ್ ಅವರ ಗೋಲು ದಾಖಲಿಸಿದ ಇಂಗ್ಲೆಂಡ್ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಬಳಿಕ 23ನೇ ನಿಮಿಷದಲ್ಲಿ ಫೋಡೆನ್ ಹೊಡೆದ ಚೆಂಡನ್ನು ಡಚ್ ಡಿಫೆಂಡರ್ ಡಮ್‌ಫ್ರೀಸ್ ಗೋಲ್ ಲೈನ್‌ನಲ್ಲಿ ಅದ್ಭುತವಾಗಿ ಉಳಿಸಿದರು.
ಸಮಬಲ ಸಾಧಿಸಿದ ಉಭಯ ತಂಡಗಳು ಮುನ್ನೆಡೆ ಕಾಣಲು ರೋಚಕ ಕಾದಾಟ ನಡೆಸಿದರು. ಹೀಗಾಗಿ ಎರಡೂ ತಂಡಗಳಿಂದ ಮುನ್ನಡೆ ಹೆಚ್ಚಿಸುವ ಪ್ರಯತ್ನಗಳು ನಿರಂತರವಾಗಿ ನಡೆದವು. ಆದರೆ, ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ.
ದ್ವಿತೀಯಾರ್ಧದಲ್ಲಿ ಇಂಗ್ಲೆಂಡ್ ಚೆಂಡಿನ ಮೇಲೆ ಹೆಚ್ಚು ಪ್ರಾಬಲ್ಯ ಸಾಧಿಸಿತು. ಮತ್ತೊಂದೆಡೆ, ನೆದರ್ಲೆಂಡ್ಸ್ ರಕ್ಷಣಾತ್ಮಕ ಆಟಕ್ಕೆ ಮುಂದಾಯಿತು. ಪಂದ್ಯವು ಅಂತಿಮ 10 ನಿಮಿಷಗಳನ್ನು ಪ್ರವೇಶಿಸುತ್ತಿದ್ದಂತೆ ಇಂಗ್ಲೆಂಡ್ ಕೋಚ್ ಹ್ಯಾರಿ ಕೇನ್, ಫಿಲ್ ಫೋಡೆನ್ ಅವರನ್ನು ಹಿಂತೆಗೆದುಕೊಂಡರು.
ಒಲ್ಲಿ ವಾಟ್ಕಿನ್ಸ್ ಮತ್ತು ಕೋಲ್ ಪಾಲ್ಮರ್ ಅವರನ್ನು ಬದಲಾಯಿಸಲಾಯಿತು. ಈ ಬದಲಾವಣೆಯೇ ನಂತರ ಪಂದ್ಯ ಕುತೂಹಲ ಹೆಚ್ಚಿಸಿತು. ಬದಲಿ ಆಟಗಾರನಾಗಿ ಬಂದ ಆಲಿ ವಾಟ್ಕಿನ್ಸ್ ಅವರು ಗೆಲುವಿನ ಗೋಲು ಗಳಿಸಿ ಇಂಗ್ಲೆಂಡ್ ಗೆಲುವಿನ ರೂವಾರಿಯಾದರು. ವಾಟ್ಕಿನ್ಸ್ ಅವರ ಗೋಲು ಕೋಲ್ ಪಾಮರ್ ಅವರ ಪಾಸ್‌ನಿಂದ ಬಂದಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications