Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Euro Cup Football 2024: 16 ವರ್ಷಗಳ ಬಳಿಕ ಕ್ವಾಟರ್‌ಫೈನಲ್‌ ತಲುಪಿದ ನೆದರ್ಲ್ಯಾಂಡ್ಸ್; ರೊಮೇನಿಯಾ ಪಯಣ ಅಂತ್ಯ!

ಜುಲೈ 3 ಬುಧವಾರ, ಯುರೋ ಕಪ್‌ 2024ರ ಫುಟ್‌ಬಾಲ್‌ ಟೂರ್ನಿಯ 16ನೇ ಸುತ್ತಿನ ನಾಕೌಟ್‌ ಪಂದ್ಯದಲ್ಲಿ ರೊಮೇನಿಯಾ ವಿರುದ್ಧ ನೆದರ್ಲ್ಯಾಂಡ್ಸ್ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ನೆದರ್ಲ್ಯಾಂಡ್ಸ್ 16 ವರ್ಷಗಳ ನಂತರ ಯುರೋಪಿಯನ್ ಚಾಂಪಿಯನ್‌ಶಿಪ್ ಕ್ವಾರ್ಟರ್‌ಫೈನಲ್ ತಲುಪಿದೆ.

ರಣರೋಚಕ ಪಂದ್ಯದಲ್ಲಿ ರೊಮೇನಿಯಾ ವಿರುದ್ಧ ಆರಂಭದಿಂದಲ್ಲೇ ಪ್ರಾಬಲ್ಯ ಸಾಧಿಸಿದ ನೆದರ್ಲ್ಯಾಂಡ್ಸ್ 3-0 ಗೋಲುಗಳ ಅಂತರದಲ್ಲಿ ಜಯಗಳಿಸಿದೆ. ನೆದರ್ಲ್ಯಾಂಡ್ಸ್ ಪರ 20ನೇ ನಿಮಿಷದಲ್ಲಿ ಕೋಡಿ ಗಕ್ಪೋ ಮೊದಲು ಗೋಲು ಹೊಡೆದು ಮುನ್ನೆಡೆ ಸಾಧಿಸಲು ಸಹಾಯ ಮಾಡಿದರು.

Euro 2024 Netherlands win against Romania

ಇದಾದ ಬಳಿಕ ತಡವಾಗಿ ಡೊನಿಯೆಲ್ ಮಾಲೆನ್ ಎರಡು ಗೋಲುಗಳನ್ನು ಹೊಡೆಯುವ ಮೂಲಕ ನೆದರ್ಲ್ಯಾಂಡ್ಸ್
ಕ್ವಾರ್ಟರ್‌ಫೈನಲ್ ತಲುಪಲು ನೆರವಾದರು. ಇತ್ತ ಹೀನಾಯವಾಗಿ ಸೋತ ರೊಮೇನಿಯಾ ತಂಡ ಯುರೋ ಕಪ್‌ 2024ರ ಫುಟ್‌ಬಾಲ್‌ ಟೂರ್ನಿಯಿಂದ ಹೊರಬಿದ್ದಿದೆ.

ನೆದರ್ಲ್ಯಾಂಡ್ಸ್ vs ರೊಮೇನಿಯಾ ಪ್ಲೇಯಿಂದ-11

ನೆದರ್ಲ್ಯಾಂಡ್ಸ್: ವರ್ಬ್ರುಗ್ಗೆನ್, ಡಮ್ಫ್ರೈಸ್, ಡಿ ವ್ರಿಜ್, ವ್ಯಾನ್ ಡಿಜ್ಕ್, ಅಕೆ, ಸ್ಚೌಟೆನ್, ರೀಜೆಂಡರ್ಸ್, ಸೈಮನ್ಸ್, ಗಕ್ಪೋ, ಬರ್ಗ್ವಿಜ್ನ್, ಮೆಂಫಿಸ್.

ಸಬ್‌ಗಳು: ಬಿಜ್ಲೋ, ಫ್ಲೆಕೆನ್, ಗೀರ್ಟ್ರುಯಿಡಾ, ಡಿ ಲಿಗ್ಟ್, ವಿಜ್ನಾಲ್ಡಮ್, ವೆಘೋರ್ಸ್ಟ್, ಫ್ರಿಂಪಾಂಗ್, ವ್ಯಾನ್ ಡಿ ವೆನ್, ವೀರಮನ್, ಬ್ಲೈಂಡ್, ಮಾಲೆನ್, ಬ್ರೋಬಿ, ಮಾಟ್‌ಸೆನ್, ಜಿರ್ಕ್‌ಜೀ, ಗ್ರಾವೆನ್‌ಬರ್ಚ್.

ರೊಮೇನಿಯಾ: ನೀತಾ, ರಾಟಿಯು, ಡ್ರಾಗುಸಿನ್, ಬುರ್ಕಾ, ಮೊಗೊಸ್; ಎಂ.ಮರಿನ್, ಆರ್.ಮರಿನ್, ಸ್ಟಾನ್ಸಿಯು, ಮ್ಯಾನ್, ಹಗಿ, ಡ್ರಾಗಸ್.

ಸಬ್‌ಗಳು: ಮೊಲ್ಡೊವನ್, ಟರ್ನೋವಾನು, ರುಸ್, ನೆಡೆಲ್ಸಿಯಾರು, ಅಲಿಬೆಕ್, ಸಿಕಾಲ್ಡೌ, ಪುಸ್ಕಾಸ್, ಮಿಹೈಲಾ, ಒಲಾರು, ಸೊರೆಸ್ಕು, ರಾಕೊವಿಶನ್, ಬಿರ್ಲಿಜಿಯಾ, ಷಟ್.

Story first published: Wednesday, July 3, 2024, 15:31 [IST]
Other articles published on Jul 3, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+