Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Euro Cup Football 2024: ಪೆನಾಲ್ಟಿ ಶೂಟೌಟ್‌ನಲ್ಲಿ ಮುಗ್ಗರಿಸಿದ ಸ್ಲೊವೇನಿಯಾ; ಕ್ವಾರ್ಟರ್‌ಫೈನಲ್‌ ಲಗ್ಗೆ ಇಟ್ಟ ಪೋರ್ಚುಗಲ್‌

ಜುಲೈ 2 ಮಂಗಳವಾರ, ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ನಡೆಯುತ್ತಿರುವ ಯುರೋ ಕಪ್‌ 2024ರ ಫುಟ್‌ಬಾಲ್‌ ಟೂರ್ನಿಯ 16ನೇ ಸುತ್ತಿನ ಪಂದ್ಯದಲ್ಲಿ ಸ್ಲೊವೇನಿಯಾ ವಿರುದ್ಧ ಪೋರ್ಚುಗಲ್‌ ಗೆಲುವು ಸಾಧಿಸಿದೆ.

ಸ್ಲೊವೇನಿಯಾ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿದ ಪೋರ್ಚುಗಲ್‌ ಕ್ವಾಟರ್‌ಫೈನಲ್‌ಗೆ ಪ್ರವೇಶಿಸಿದೆ. 120 ನಿಮಿಷಗಳ ಕಾಲ ಉಭಯ ತಂಡಗಳು ಯಾವುದೇ ಗಳಿಸಲಿಲ್ಲ. ಇದಾದ ಬಳಿಕ ಹೆಚ್ಚುವರಿ ಸಮಯದಲ್ಲಿ ಪೆನಾಲ್ಟಿ ಶೂಟೌಟ್‌ಗೆ ಅವಕಾಶ ನೀಡಲಾಯಿತು.

Euro 2024 Portugal won against Slovenia

ಈ ವೇಳೆ ಪೋರ್ಚುಗಲ್‌ ತಂಡ ಗೋಲ್‌ ಕೀಪರ್‌ ಡಿಯೊಗೊ ಕೋಸ್ಟಾ ಅವರು ಎಲ್ಲಾ ಮೂರು ಪೆನಾಲ್ಟಿಗಳನ್ನು ಉಳಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು. ಇನ್ನೊಂದೆಡೆ ಪೋರ್ಚುಗಲ್‌ ಪರ ಬ್ರೂನೋ ಫೆರ್ನಾಂಡಿಸ್, ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಬರ್ನಾರ್ಡೊ ಸಿಲ್ವಾ ಪೆನಾಲ್ಟಿಯಲ್ಲಿ ತಲಾ ಒಂದೊಂದು ಗೋಲು ಬಾರಿಸಿದರು.

ಆದರೆ ಸ್ಲೊವೇನಿಯಾ ಪರ ಪೆನಾಲ್ಟಿ ಶೂಟೌಟ್‌ನಲ್ಲಿ ಯಾವುದೇ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪೋರ್ಚುಗಲ್‌ ಸೋಲಿಸಿ ಕ್ವಾಟರ್‌ಫೈನಲ್‌ ತಲುಪು ಕಸನು ನನಸಾಗಲಿಲ್ಲ. ಯುರೋ 2024ರ 16ನೇ ಸುತ್ತಿನ ನಾಕೌಟ್‌ ಪಂದ್ಯದಲ್ಲಿ ಸ್ಲೊವೇನಿಯಾ ಸೋಲು ಕಂಡಿದೆ. ಪೋರ್ಚುಗಲ್ ಕ್ವಾರ್ಟರ್‌ಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು ಎದುರಿಸಲಿದೆ.

ಪೋರ್ಚುಗಲ್ vs ಸ್ಲೊವೇನಿಯಾ ಪ್ಲೇಯಿಂಗ್‌-11

ಪೋರ್ಚುಗಲ್ ತಂಡ: ಡಿಯೊಗೊ ಕೋಸ್ಟಾ, ಜೋವೊ ಕ್ಯಾನ್ಸೆಲೊ, ಡಯಾಸ್, ಪೆಪೆ, ನುನೊ ಮೆಂಡೆಸ್, ವಿಟಿನ್ಹಾ, ಜೋವೊ ಪಲ್ಹಿನ್ಹಾ, ಬರ್ನಾರ್ಡೊ ಸಿಲ್ವಾ, ಬ್ರೂನೋ ಫೆರ್ನಾಂಡಿಸ್, ಲಿಯೊ, ರೊನಾಲ್ಡೊ.

ಸ್ಲೊವೇನಿಯಾ ತಂಡ: ಒಬ್ಲಾಕ್, ಕಾರ್ನಿಕ್ನಿಕ್, ಡ್ರ್ಕುಸಿಕ್, ಬಿಜೋಲ್, ಬಾಲ್ಕೊವೆಕ್, ಸ್ಟೊಜಾನೋವಿಕ್, ಸೆರಿನ್, ಎಲ್ಸ್ನಿಕ್, ಮ್ಲಾಕರ್, ಸ್ಪೋರಾರ್, ಸೆಸ್ಕೋ.

Story first published: Tuesday, July 2, 2024, 6:53 [IST]
Other articles published on Jul 2, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+