Euro Cup 2024 Semi-final: ಬಲಿಷ್ಠ ಫ್ರಾನ್ಸ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಸ್ಪೇನ್
ಜುಲೈ 10 ಬುಧವಾರ, ಜರ್ಮನಿಯ ಮ್ಯೂನಿಚ್‌ನಲ್ಲಿ (ಮಂಗಳವಾರ) ನಡೆದ ಯುರೋ ಕಪ್ 2024ರ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಕೈಲಿಯನ್ ಎಂಬಪ್ಪೆ ನಾಯಕತ್ವದ ಫ್ರಾನ್ಸ್ ತಂಡವನ್ನು ಅಲ್ವಾರೊ ಮೊರಾಟಾ ಮುನ್ನೆಡೆಸುತ್ತಿರುವ ಸ್ಪೇನ್ ಮಣಿಸಿದೆ.
ಫ್ರಾನ್ಸ್ ವಿರುದ್ಧ 2-1 ಗೋಲುಗಳಿಂದ ರೋಚಕ ಜಯ ಸಾಧಿಸಿದ ಸ್ಪೇನ್ ಯುರೋ ಕಪ್ 2024ರ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಫ್ರಾನ್ಸ್ ಆರಂಭದಲ್ಲಿ ಗೋಲು ಬಾರಿಸಿ ಮುನ್ನೆಡೆ ಸಾಧಿಸಿದರೂ, ಚೆಂಡಿನ ಮೇಲೆ ಹೆಚ್ಚು ಪ್ರಾಬಲ್ಯ ಸಾಧಿಸುವಲ್ಲಿ ವಿಫಲವಾಯಿತು.

ಮತ್ತೊಂದೆಡೆ ಫ್ರಾನ್ಸ್ ನಾಯಕ ಎಂಬಪ್ಪೆ ಅತ್ಯುತ್ತಮ ಪ್ರದರ್ಶನ ನೀಡಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಅಂತಿಮ ಘಟ್ಟದಲ್ಲಿ ಎಡುವಿದ ಎಂಬಪ್ಪೆ ಪಡೆ ಮತ್ತೊಮ್ಮೆ ನಾಕೌಟ್ ಪಂದ್ಯದಲ್ಲಿ ಅಘಾತಕಾರಿ ಸೋಲು ಕಂಡಿದೆ.
Spain book their place in the final! 🇪🇸#EURO2024 pic.twitter.com/9xororAdFU
— UEFA EURO 2024 (@EURO2024) July 9, 2024
ಮೊದಲಾರ್ಧದ 9ನೇ ನಿಮಿಷದಲ್ಲಿ ಫ್ರಾನ್ಸ್ ತಂಡ ಸ್ಪೇನ್‌ನ ಗೋಲಿನ ಬಲೆಯನ್ನು ಅಲುಗಾಡಿಸಿ ಮುನ್ನಡೆ ಸಾಧಿಸಿತು. ಆದರೆ ಇದಕ್ಕೆ ಶೀಘ್ರದಲ್ಲೇ ಸ್ಪೇನ್ ಕೂಡ ಸೇಡು ತೀರಿಸಿಕೊಂಡಿತು.
21ನೇ ನಿಮಿಷದಲ್ಲಿ ಲ್ಯಾಮಿನ್ ಯಮಾಲ್ ಗಳಿಸಿದ ಗೋಲು ಫ್ರಾನ್ಸ್ ವಿರುದ್ಧ ಸ್ಪೇನ್ ಸಮಬಲ ಸಾಧಿಸಲು ಕಾರಣವಾಯಿತು. ಇದಾದ ಬಳಿಕ 25ನೇ ನಿಮಿಷದಲ್ಲಿ ಡ್ಯಾನಿ ಓಲ್ಮೊ ಗೋಲಿನಿಂದ ಮುನ್ನಡೆ ಸಾಧಿಸಿದ ಸ್ಪೇನ್ ಎದುರು ಫ್ರಾನ್ಸ್ ಸೋಲನುಭವಿಸಿತು.
5ನೇ ಬಾರಿಗೆ ಫೈನಲ್ ಪ್ರವೇಶಿಸಿದ ಸ್ಪೇನ್
ಯೂರೋ ಇತಿಹಾಸದಲ್ಲಿ ಸತತ 6 ಪಂದ್ಯಗಳನ್ನು ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಯೊಂದಿಗೆ ಸ್ಪೇನ್ ಫೈನಲ್ ಪ್ರವೇಶಿಸಿದೆ. ಇದು 5ನೇ ಬಾರಿಗೆ ಸ್ಪೇನ್ ಯೂರೋಕಪ್ ಫೈನಲ್ ತಲುಪುತ್ತಿರುವುದು.
2012ರಲ್ಲಿ ಯೂರೋ ಕಪ್ ಗೆದ್ದ ನಂತರ ಸ್ಪೇನ್ ಫೈನಲ್ ಪ್ರವೇಶಿಸಿದ್ದು ಇದೇ ಮೊದಲು. ಸ್ಪೇನ್‌ನ 16 ವರ್ಷದ ಲ್ಯಾಮಿನ್ ಯಮಲ್ ಯುರೋ ಇತಿಹಾಸದಲ್ಲಿ ಅತ್ಯಂತ ಕಿರಿಯ ಗೋಲು ಗಳಿಸಿದ ಆಟಗಾರ ಎನಿಸಿಕೊಂಡರು.
ಜುಲೈ 10 ರಂದು ನಡೆಯಲಿರುವ ನೆದರ್ಲೆಂಡ್-ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ವಿಜೇತರನ್ನು ಸ್ಪೇನ್ ತಂಡವು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications