Euro 2024: ಇಂಗ್ಲೆಂಡ್‌ಗೆ ಸೋಲುಣಿಸಿ 4ನೇ ಬಾರಿಗೆ ಯುರೋ ಪ್ರಶಸ್ತಿ ಗೆದ್ದ ಸ್ಪೇನ್
ಯುರೋಪ್ ಖಂಡದ ಅತಿ ದೊಡ್ಡ ಫುಟ್ಬಾಲ್ ಪಂದ್ಯಾವಳಿಯಲ್ಲಿ ನಾಲ್ಕನೇ ಪ್ರಶಸ್ತಿಯನ್ನು ಗೆದ್ದ ಬಳಿಕ ಸ್ಪೇನ್ ತಂಡವು, UEFA ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಅತ್ಯಂತ ಯಶಸ್ವಿ ರಾಷ್ಟ್ರವಾಗಿ ದಾಖಲೆಯನ್ನು ಸೃಷ್ಟಿಸಿತು.
ಭಾನುವಾರ, ಜುಲೈ 14ರ ತಡರಾತ್ರಿ ಬರ್ಲಿನ್‌ನಲ್ಲಿ ನಡೆದ 2024ರ ಯುರೋ ಫೈನಲ್ ಪಂದ್ಯದಲ್ಲಿ ಸ್ಪೇನ್ 2-1 ಗೋಲುಗಳ ಅಂತರದಿಂದ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಸೋಲಿಸಿತು ಮತ್ತು ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು.

47ನೇ ನಿಮಿಷದಲ್ಲಿ ಸ್ಪೇನ್‌ನ ನಿಕೊ ವಿಲಿಯಮ್ಸ್ ಆರಂಭಿಕ ಗೋಲು ಗಳಿಸಿದರೆ, ಇಂಗ್ಲೆಂಡ್‌ನ ಕೋಲ್ ಪಾಮರ್ ಇಂಗ್ಲೆಂಡ್ ತಂಡಕ್ಕೆ ಗೋಲು ಗಳಿಸಿ ಸಮಬಲ ಸಾಧಿಸಲು ನೆರವಾದರು. ಅಂತಿಮ ಹಂತದ 86ನೇ ನಿಮಿಷದಲ್ಲಿ ಮೈಕೆಲ್ ಒಯಾರ್ಜಾಬಲ್ ಗೋಲು ಬಾರಿಸಿ ಸ್ಪೇನ್ ತಂಡಕ್ಕೆ ಗೆಲುವು ತಂದುಕೊಟ್ಟರು.
ಯುರೋ 2024ರ ಫೈನಲ್‌ನಲ್ಲಿ ಸ್ಪೇನ್ ಗೆದ್ದು ಬೀಗಲು ಬದಲಿ ಆಟಗಾರ ಮೈಕೆಲ್ ಒಯಾರ್ಜಾಬಲ್ ನಾಟಕೀಯವಾಗಿ ಪಂದ್ಯ ವಿಜೇತರೆನಿಸಿದರು. ಇಂಗ್ಲೆಂಡ್ ಸೋಲಿಸಿ ಸ್ಪೇನ್ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಪುನರುತ್ಥಾನ ಖಚಿತಪಡಿಸಿದರು ಮತ್ತು ಸುಮಾರು ಆರು ದಶಕಗಳಲ್ಲಿ ಮೊದಲ ಪ್ರಶಸ್ತಿಯನ್ನು ಗೆಲ್ಲುವ ತಮ್ಮ ಎದುರಾಳಿಗಳ ಕನಸುಗಳನ್ನು ಕೊನೆಗೊಳಿಸಿದರು.
ಮೊದಲಾರ್ಧದಲ್ಲಿ ಸ್ಪೇನ್ ಪ್ರಭಾವಿ ಮಿಡ್‌ಫೀಲ್ಡರ್ ರೊಡ್ರಿ ಗಾಯದಿಂದ ಹೊರನಡೆದರು. ಆದರೆ ಎರಡು ನಿಮಿಷಗಳಲ್ಲಿ ಮರುಪ್ರಾರಂಭಿಸಿದಾಗ ನಿಕೊ ವಿಲಿಯಮ್ಸ್ ಮೂಲಕ ಮೊದಲ ಮುನ್ನಡೆ ಸಾಧಿಸಿತು.
ನಂತರ ಇಂಗ್ಲೆಂಡ್‌ನ ಬದಲಿ ಆಟಗಾರ ಕೋಲ್ ಪಾಲ್ಮರ್ 73ನೇ ನಿಮಿಷದಲ್ಲಿ ಗೋಲು ಬಾರಿಸಿ ಇಂಗ್ಲೆಂಡ್ ಫೈನಲ್‌ನಲ್ಲಿ ಪುನರಾಗಮನ ಮಾಡಿತು.
ಹೋರಾಟಕ್ಕೆ ಪ್ರವೇಶಿಸಿದ ಕೆಲವೇ ನಿಮಿಷಗಳ ನಂತರ, ಮೈಕೆಲ್ ಒಯಾರ್ಜಾಬಲ್ 86ನೇ ನಿಮಿಷದಲ್ಲಿ ಬಾರಿಸಿದ ಗೋಲು ಸ್ಪೇನ್‌ಗೆ ದಾಖಲೆಯ ನಾಲ್ಕನೇ ಯುರೋಪಿಯನ್ ಚಾಂಪಿಯನ್‌ಶಿಪ್ ಕಿರೀಟ ಪಡೆಯಲು ಸಹಾಯ ಮಾಡಿತು.
ಈ ಗೆಲುವಿನೊಂದಿಗೆ ಸ್ಪೇನ್ ತಂಡ ನಾಲ್ಕನೇ ಯುರೋ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ಇದೀಗ ಪ್ರತಿಷ್ಠಿತ ಪಟ್ಟಿಯಲ್ಲಿ ಜರ್ಮನಿ ದೇಶಕ್ಕಿಂತ ಮುಂದಿದೆ. ಇದು ಕಳೆದ ಐದು ಆವೃತ್ತಿಗಳಲ್ಲಿ ಸ್ಪೇನ್‌ಗೆ ಮೂರನೇ ಯುರೋ ಪ್ರಶಸ್ತಿಯಾಗಿದೆ. 2012ರಲ್ಲಿ ಯುರೋ ಗೆದ್ದ ನಂತರ ಸ್ಪೇನ್‌ಗೆ ಯುರೋಪಿಯನ್ ವಿಜಯೋತ್ಸವದ ವೈಭವವು 12 ವರ್ಷಗಳ ನಂತರ ಬಂದಿದೆ.
ಮತ್ತೊಂದೆಡೆ, ಇಂಗ್ಲೆಂಡ್ ಸತತ ಎರಡನೇ ಬಾರಿಗೆ ಮತ್ತೊಮ್ಮೆ ಯುರೋ ಫೈನಲ್‌ನಲ್ಲಿ ಹಿನ್ನಡೆ ಅನುಭವಿಸಿತು. 2021ರಲ್ಲಿ ಪೆನಾಲ್ಟಿ ಆಘಾತದ ನಂತರ, ತ್ರೀ ಲಯನ್ಸ್ ಮತ್ತೊಮ್ಮೆ ಫೈನಲ್ ಅಡಚಣೆಯಲ್ಲಿ ಎಡವಿತು.
ಯುರೋ ಕಪ್ ವಿಜೇತ ರಾಷ್ಟ್ರಗಳು
ಜರ್ಮನಿ ಮೂರು ಬಾರಿ ಯೂರೋ ಪಂದ್ಯಾವಳಿ ಗೆದ್ದಿದೆ. ಇಟಲಿ ಮತ್ತು ಫ್ರಾನ್ಸ್ ಎರಡು ಬಾರಿ ಗೆದ್ದಿದ್ದರೆ, ಇತರ ರಾಷ್ಟ್ರಗಳಾದ ರಷ್ಯಾ, ಜೆಕ್ ರಿಪಬ್ಲಿಕ್, ಪೋರ್ಚುಗಲ್ , ಸ್ಲೋವಾಕಿಯಾ, ಡೆನ್ಮಾರ್ಕ್, ನೆದರ್ಲ್ಯಾಂಡ್ಸ್ ಗ್ರೀಸ್ ತಲಾ ಒಮ್ಮೆ ಯೂರೋ ಪಂದ್ಯಾವಳಿಯನ್ನು ಗೆದ್ದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications