Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮ್ಯಾನ್ ಯುನೈಟೆಡ್ ಸೋಲಿಸಿ ಚೊಚ್ಚಲ ಯುರೋಪಾ ಲೀಗ್ ಪ್ರಶಸ್ತಿ ಗೆದ್ದ ವಿಲ್ಲಾರ್ರಿಯಲ್

Europa League 2021: Villarreal Beat Manchester United in EPIC Penalty Shootout

ಗ್ಡಾನ್ಸ್ಕ್: ಪೋಲ್ಯಾಂಡ್‌ನ ಗ್ಡಾನ್ಸ್ಕ್ ನಲ್ಲಿ ನಡೆದ ಯುರೋಪಾ ಲೀಗ್ 2021 ಫೈನಲ್ ಪಂದ್ಯದಲ್ಲಿ ಮ್ಯಾನ್ಚೆಸ್ಟರ್ ಯುನೈಟೆಡ್ ಸೋಲಿಸಿರುವ ವಿಲ್ಲಾರ್ರಿಯಲ್ ಚೊಚ್ಚಲ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಡ್ರಾಗೊಂಡು ರೋಚಕ ಹಂತಕ್ಕೆ ಹೋಗಿದ್ದ ಪಂದ್ಯ ಪೆನಾಲ್ಟಿ ಶೂಟೌಟ್‌ನಲ್ಲಿ ಕೊನೆಗೊಂಡಿತು.

ಪಂದ್ಯ ಆರಂಭವಾಗಿ ಮೊದಲಾರ್ಧದಲ್ಲಿ ಅಂದರೆ 29ನೇ ನಿಮಿಷದಲ್ಲಿ ವಿಲ್ಲಾರ್ರಿಯಲ್‌ ಪರ ಆಡುವ ಸ್ಪೇನ್‌ ಆಟಗಾರ ಜೆರಾರ್ಡ್ ಮೊರೆನೊ ಗೋಲ್ ಬಾರಿಸಿ ತಂಡಕ್ಕೆ 1-0ಯ ಮುನ್ನಡೆ ಕೊಟ್ಟರು. ಅದಾಗಿ ಮೊದಲಾರ್ಧದಲ್ಲಿ ಮತ್ತೆ ಗೋಲ್ ದಾಖಲಾಗಲಿಲ್ಲ.

ಪಂದ್ಯದ ದ್ವಿತೀಯಾರ್ಧದಲ್ಲಿ ಅಂದರೆ 55ನೇ ನಿಮಿಷದಲ್ಲಿ ಮ್ಯಾನ್ಚೆಸ್ಟರ್ ಯುನೈಟೆಡ್‌ ಪರ ಆಡುವ ಉರುಗ್ವೆ ಫಾರ್ವರ್ಡ್ ಆಟಗಾರ ಎಡಿನ್ಸನ್ ಕವಾನಿ ಗೋಲ್ ಬಾರಿಸಿ ಅಂಕವನ್ನು 1-1ರಿಂದ ಸರಿದೂಗಿಸಿದರು. ಆ ಬಳಿಕ ಇತ್ತಂಡಗಳ ಮಧ್ಯೆ ಜಿದ್ದಾಜಿದ್ದಿ ಹೋರಾಟ ನಡೆಯಿತಾದರೂ ಗೋಲ್ ದಾಖಲಾಗಲಿಲ್ಲ.

ಪಂದ್ಯ 1-1ರಿಂದ ಡ್ರಾಗೊಂಡಾಗ ಎರಡೂ ತಂಡಗಳಿಗೆ ಪೆನಾಲ್ಟಿ ಶೂಟೌಟ್ ಅವಕಾಶ ನೀಡಲಾಗಿತ್ತು. ತಂಡದ ಎಲ್ಲಾ ಆಟಗಾರರಿಗೆ ಒಂದೊಂದು ಶೂಟೌಟ್ ಅವಕಾಶ ನೀಡಲಾಗಿತ್ತು. ಆಗ ಮ್ಯಾನ್ಚೆಸ್ಟರ್ ಯುನೈಟೆಡ್ 10 ಪೆನಾಲ್ಟಿ ಶೂಟೌಟ್ ಅಂಕ ಗಳಿಸಿದರೆ ವಿಲ್ಲಾರ್ರಿಯಲ್ 11 ಅಂಕಗಳೊಂದಿಗೆ ಗೆಲುವನ್ನಾಚರಿಸಿತು.

Story first published: Thursday, May 27, 2021, 16:34 [IST]
Other articles published on May 27, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+