ವಿಶ್ವ ಕಂಡ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ನಿವೃತ್ತಿಯ ನಂತರ, ಅವರ 10 ಸಂಖ್ಯೆಯ ಜೆರ್ಸಿಯನ್ನು ಅರ್ಜೆಂಟೀನಾ ರಾಷ್ಟ್ರೀಯ ಫುಟ್ಬಾಲ್ ತಂಡದಿಂದ ನಿವೃತ್ತಿ ಮಾಡಲಾಗುತ್ತದೆ. ಮೆಸ್ಸಿಯನ್ನು ಗೌರವಿಸಲು ಅರ್ಜೆಂಟೀನಾ ಫುಟ್ಬಾಲ್ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ.
ಕಳೆದ ವರ್ಷ ಕತಾರ್‌ನಲ್ಲಿ ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನಾ ಫುಟ್‌ಬಾಲ್ ವಿಶ್ವಕಪ್ ಗೆದ್ದಿತ್ತು. ತಂಡವು 36 ವರ್ಷಗಳ ನಂತರ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಫೈನಲ್‌ನಲ್ಲಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ಅನ್ನು ಮಣಿಸಿತ್ತು.

ಮೆಸ್ಸಿ ಅಂತರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿಯಾದಾಗ, ಅವರ 10 ನಂಬರ್ ಜರ್ಸಿಯನ್ನು ಬೇರೆ ಯಾರೂ ಧರಿಸಲು ಅನುಮತಿಸಲಾಗುವುದಿಲ್ಲ ಎಂದು ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಷನ್ (ಎಎಫ್‌ಎ) ಅಧ್ಯಕ್ಷ ಕ್ಲಾಡಿಯೊ ಟಪಿಯಾ ಹೇಳಿದ್ದಾರೆಂದು ಸ್ಪ್ಯಾನಿಷ್ ಪತ್ರಿಕೆ ಮಾರ್ಕಾ ಉಲ್ಲೇಖಿಸಿದೆ. ಮೆಸ್ಸಿಯ ಗೌರವಾರ್ಥವಾಗಿ 10ನೇ ಸಂಖ್ಯೆಯ ಜೆರ್ಸಿಯನ್ನು ನಿವೃತ್ತಿ ಮಾಡಲು ಬಯಸುವುದಾಗಿ ತಿಳಿಸಿದ್ದಾರೆ.
ಮೆಸ್ಸಿಗಿಂತ ಮೊದಲು ಡಿಯಾಗೋ ಮರಡೋನಾ ಕೂಡ ಈ ಜೆರ್ಸಿಯನ್ನು ಧರಿಸುತ್ತಿದ್ದರು.
ಮೆಸ್ಸಿಗಿಂತ ಮೊದಲು, ಡಿಯಾಗೋ ಮರಡೋನಾ ಅರ್ಜೆಂಟೀನಾ ಪರ ಆಡುವಾಗ ಜರ್ಸಿ ಸಂಖ್ಯೆ 10 ಅನ್ನು ಧರಿಸುತ್ತಿದ್ದರು. ಅರ್ಜೆಂಟೀನಾ 2002 ರಲ್ಲಿ ಮರಡೋನಾ ಗೌರವಾರ್ಥವಾಗಿ ಈ ಜರ್ಸಿಯನ್ನು ನಿವೃತ್ತಿ ಮಾಡಲು ಪ್ರಯತ್ನಿಸಿತು, ಆದರೆ ಅಂತರರಾಷ್ಟ್ರೀಯ ಫುಟ್ಬಾಲ್ ಫೆಡರೇಶನ್ನ ಕಟ್ಟುನಿಟ್ಟಾದ ನಿಯಮಗಳಿಂದ ಇದು ಸಾಧ್ಯವಾಗಲಿಲ್ಲ.
FIFA ನಿಯಮಗಳ ಪ್ರಕಾರ, ತಂಡಗಳು 1 ರಿಂದ 23 ಸಂಖ್ಯೆಗಳನ್ನು ಬಳಸಬೇಕು. ಅಂತಹ ಪರಿಸ್ಥಿತಿಯಲ್ಲಿ, ಭವಿಷ್ಯದಲ್ಲಿ ಯಾರಾದರೂ ಈ ಸಂಖ್ಯೆಗಾಗಿ ಪಟ್ಟು ಹಿಡಿಯಬಹುದು.

2016 ರಲ್ಲಿ ಕೋಪಾ ಅಮೇರಿಕಾ ಫೈನಲ್‌ನಲ್ಲಿ ಸೋತ ನಂತರ ಮೆಸ್ಸಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತರಾದರು. ಅದರ ಮತ್ತೆ ನಂತರ ಮೈದಾನಕ್ಕೆ ಮರಳಿದರು. ವಾಸ್ತವವಾಗಿ, 2014 ರ ವಿಶ್ವಕಪ್ ಫೈನಲ್‌ನಲ್ಲಿ ಜರ್ಮನಿಗೆ ಸೋಲು ಮತ್ತು ಕೋಪಾ ಅಮೆರಿಕದಲ್ಲಿ ಚಿಲಿ ವಿರುದ್ಧದ ಸೋಲಿನ ನಂತರ, ಮೆಸ್ಸಿ ಮುಂದೆ ಆಡುವುದಿಲ್ಲ ಎಂಬ ಮಾತುಗಳಿದ್ದವು. ಅವರು 2016 ರಲ್ಲಿ ನಿವೃತ್ತರಾಗುವುದಾಗಿ ಘೋಷಿಸಿದರು. ನಂಥರ ದೇಶಕ್ಕೆ ತಮ್ಮ ಅಗತ್ಯ ಎಂಬುದನ್ನು ಅರಿತ ಮೆಸ್ಸಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದರು.
ಮೆಸ್ಸಿ ಅರ್ಜೆಂಟೀನಾ ಪರ 180 ಪಂದ್ಯಗಳಲ್ಲಿ 106 ಗೋಲು ಗಳಿಸಿದ್ದಾರೆ. ಅವರು 2021 ರ ಕೋಪಾ ಅಮೇರಿಕಾ ಮತ್ತು 2022 ರ ವಿಶ್ವಕಪ್ ಅನ್ನು ತಂಡಕ್ಕೆ ತೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರ. ಮೆಸ್ಸಿ 2026 ರ FIFA ವಿಶ್ವಕಪ್‌ನಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಅದಕ್ಕೂ ಮೊದಲು ಅವರು 2024 ರಲ್ಲಿ ಅರ್ಜೆಂಟೀನಾಕ್ಕಾಗಿ ಎರಡನೇ ಬಾರಿಗೆ ಕೋಪಾ ಅಮೇರಿಕಾ ಕಪ್ ಅನ್ನು ಗೆಲ್ಲಿಸಲು ಬಯಸುತ್ತಾರೆ.
ಕೆಲವು ವಾರಗಳ ಹಿಂದೆ, 2022 ರ ವಿಶ್ವಕಪ್‌ನಲ್ಲಿ ಮೆಸ್ಸಿ ಧರಿಸಿದ್ದ 6 ಜೆರ್ಸಿಗಳನ್ನು ಹರಾಜಿನಲ್ಲಿ $ 7.8 ಮಿಲಿಯನ್ (ಸುಮಾರು 64 ಕೋಟಿ ರೂ.) ಗೆ ಮಾರಾಟ ಮಾಡಲಾಗಿತ್ತು.
ಎಲ್ಲಾ ವಿಶ್ವಕಪ್ ಪಂದ್ಯಗಳಲ್ಲಿ ಗೋಲು ಗಳಿಸಿದ ಏಕೈಕ ಫುಟ್ಬಾಲ್ ಆಟಗಾರ ಮೆಸ್ಸಿ
ವಿಶ್ವಕಪ್‌ನ ಒಂದೇ ಋತುವಿನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಗೋಲು ಗಳಿಸಿದ ಏಕೈಕ ಫುಟ್ಬಾಲ್ ಆಟಗಾರ ಮೆಸ್ಸಿ. ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧವೂ ಗೋಲು ಗಳಿಸಿದ್ದರು.
ಕ್ರಿಕೆಟ್‌ನಲ್ಲಿ, ಬಿಸಿಸಿಐ ಎಂಎಸ್ ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಅವರ ಗೌರವಾರ್ಥ ಅವರ ಜೆರ್ಸಿಯನ್ನು ನಿವೃತ್ತಿಗೊಳಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿಯೇ ಬಿಸಿಸಿಐ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಅವರ ಗೌರವಾರ್ಥ ಅವರ ಜೆರ್ಸಿ ಸಂಖ್ಯೆ-7 ಅನ್ನು ನಿವೃತ್ತಿ ಮಾಡಲು ನಿರ್ಧರಿಸಿತ್ತು. ಅವರ ನಾಯಕತ್ವದಲ್ಲಿ, ಧೋನಿ 2007 ರ T-20 ವಿಶ್ವಕಪ್, 2011 ODI ವಿಶ್ವಕಪ್ ಮತ್ತು 2013 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದೆ.
ಧೋನಿಗೂ ಮುನ್ನ ಬಿಸಿಸಿಐ ಸಚಿನ್ ತೆಂಡೂಲ್ಕರ್ ಅವರ 10ನೇ ನಂಬರ್ ಜೆರ್ಸಿಗೂ ಈ ಗೌರವ ನೀಡಿತ್ತು. 2017 ರಲ್ಲಿ, ಸಚಿನ್ ಅವರ 10 ನಂಬರ್ ಜೆರ್ಸಿ ಕೂಡ ಶಾಶ್ವತವಾಗಿ ನಿವೃತ್ತಿಯಾಯಿತು.