ಎಫ್‌ಸಿ ಬೇಯರ್ನ್ ಕಪ್: ಆರ್ಮಿ ಬಾಯ್ಸ್ ಸ್ಕೂಲ್ ಬೆಂಗಳೂರು ಚಾಂಪಿಯನ್ಸ್

ಬೆಂಗಳೂರು, ಡಿಸೆಂಬರ್ 1: ಅಡಿಡಾಸ್ ಮತ್ತು ಎಫ್ಸಿ ಬೇಯರ್ನ್ ಜಂಟಿ ಸಹಭಾಗಿತ್ವದಲ್ಲಿ ಬೆಂಗಳೂರಿನ ಸರ್ಜಾಪುರದ ಪ್ಲೇ ಅರೆನಾದಲ್ಲಿ ಗುರುವಾರ (ನವೆಂಬರ್ 29) ನಡೆದ ಬೆಂಗಳೂರು ವಿಭಾಗದ ಎಫ್‌ಸಿ ಬೇಯರ್ನ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಆರ್ಮಿ ಬಾಯ್ಸ್ ಸ್ಕೂಲ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಬೆಂಗಳೂರು ಪೂರ್ವದ ಡೆಲ್ಲಿ ಪಬ್ಲಿಕ್ ಸ್ಕೂಲ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.
ಟೂರ್ನಿ ಈಗ ಮುಂಬೈ, ಕೋಲ್ಕತಾ, ಚೆನ್ನೈ ಮತ್ತು ಶ್ರೀನಗರಗಳ ನಗರಮಟ್ಟದ ಸುತ್ತುಗಳ ಕಡೆಗೆ ಸಾಗಲಿದೆ. 14 ವಾರಗಳ ಕಾಲ ನಡೆಯಲಿರುವ ಈ ಟೂರ್ನಿ 2019ರ ಫೆಬ್ರವರಿಯಲ್ಲಿ ಹೊಸ ದಿಲ್ಲಿಯ 'ಅಡಿಡಾಸ್ ದಿ ಬೇಸ್'ನಲ್ಲಿ ಮುಕ್ತಾಯವಾಗಲಿದೆ. ಟೂರ್ನಿಯ ವಿಜೇತ ತಂಡ ಎಫ್‌ಸಿ ಬೇಯರ್ನ್ ಯೂತ್ ಕಪ್ ವಿಶ್ವ ಫೈನಲ್‌ನಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಲಿದೆ.
ಎಫ್‌ಸಿ ಬೇಯರ್ನ್ ಯೂತ್ ಕಪ್ 2018-19 ಟೂರ್ನಿ ಇದು ಹದಿನಾರು ವರ್ಷದೊಳಗಿನ 7 ಜನರ ತಂಡಗಳ ಅಂತರ್ ಶಾಲಾ ಫುಟ್ಬಾಲ್ ಟೂರ್ನಿ. ವೃತ್ತಿಪರ ಫುಟ್ಬಾಲ್ ಆಟಗಾರರೆನಿಸಲು ಯುವಕರಿಗೆ ವೇದಿಕೆ ಒದಗಿಸುತ್ತಿದೆ. ಆಯ್ದ ಆಟಗಾರರಿಗೆ ಖ್ಯಾತ ಅಲೆಯನ್ಸ್ ಅರೇನಾದಲ್ಲಿ ಕೊನೆಯ ಬುಂಡೇಸ್ಲಿಗಾ (ಜರ್ಮನ್ ರಾಷ್ಟ್ರೀಯ ಫುಟ್ಬಾಲ್ ಲೀಗ್) ಸೀಸನ್‌ನ ಕೊನೆಯ ಪಂದ್ಯವನ್ನು ವೀಕ್ಷಿಸುವ ಅವಕಾಶ ಲಭಿಸಲಿದೆ.
ಅಡಿಡಾಸ್ ಫುಟ್ಬಾಲ್ ಬಗ್ಗೆ
ಫುಟ್ಬಾಲ್ ಕ್ಷೇತ್ರದಲ್ಲಿ 'ಅಡಿಡಾಸ್' ಜಾಗತಿಕವಾಗಿ ಮುಂಚೂಣಿಯಲ್ಲಿರುವ ಸಂಸ್ಥೆ. ಇದು ಜಗತ್ತಿನ ಎಲ್ಲೆಡೆ ಪ್ರಮುಖ ಫುಟ್ಬಾಲ್ ಟೂರ್ನಿಗಳ ಪ್ರಾಯೋಜಕ/ಅಧಿಕೃತ ಪಾಲುದಾರನೂ ಹೌದು. ಈ ಟೂರ್ನಿಗಳಲ್ಲಿ ಫೀಫಾ ವಿಶ್ವಕಪ್, ಫೀಫಾ ಕಾನ್ಫೆಡರೇಷನ್ ಕಪ್, ಯುಇಎಫ್ಎ ಚಾಂಪಿಯನ್ ಲೀಗ್ ಮತ್ತು ಯುಇಎಫ್ಎ ಯುರೋಪಿಯನ್ ಚಾಂಪಿಯನ್‌ಶಿಪ್‌ಗಳು ಕೂಡ ಸೇರಿವೆ.
ಎಫ್‌ಸಿ ಬೇಯರ್ನ್ ಮ್ಯೂನಿಚ್
ಎಫ್‌ಸಿ ಬೇಯರ್ನ್ ಮ್ಯೂನಿಚ್ ಜಗತ್ತಿನ ಫುಟ್ಬಾಲ್ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಕ್ಲಬ್‌ಗಳಲ್ಲಿ ಒಂದಾಗಿದೆ. ಜೊತೆಗೆ ವಿಶ್ವ ಫುಟ್ಬಾಲ್‌ನ ಅತ್ಯುನ್ನತ ಮಟ್ಟದಲ್ಲಿ ಸ್ಪರ್ಧಿಸುವ ವಿಶ್ವಮಟ್ಟದ ಆಟಗಾರರನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ಇದು ಖ್ಯಾತಿಯನ್ನು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications