Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದೇಶದ ಪ್ರತಿಷ್ಠಿತ ಕಪ್ ಗೆದ್ದ ನಮ್ಮ ಬೆಂಗಳೂರು ಎಫ್ ಸಿ

ಕೋಲ್ಕತ್ತಾ, ಮೇ 21: ಬಲಿಷ್ಠ ಮೋಹನ್ ಬಗಾನ್ ಗೆ ಬರಾಬತಿ ಸ್ಟೇಡಿಯಂನಲ್ಲಿ 0-2 ಅಂತರದಲ್ಲಿ ಸೋಲುಣಿಸಿ ದೇಶದ ಪ್ರತಿಷ್ಠಿತ ಫುಟ್ಬಾಲ್ ಕಪ್ ಗಳಲ್ಲಿ ಒಂದೆನಿಸಿರುವ ಫೆಡೆರೇಷನ್ ಕಪ್ ಎತ್ತಿ ಬೆಂಗಳೂರು ಎಫ್ ಸಿ ಜಯಭೇರಿ ಬಾರಿಸಿದೆ.

ಭಾನುವಾರ(ಮೇ 21) ನಡೆದ ಪಂದ್ಯದಲ್ಲಿ ಬೆಂಗಳೂರು ಪರ ಎರಡು ಗೋಲುಗಳು ಹೆಚ್ಚಿನ ಅವಧಿಯಲ್ಲಿ ಬದಲಿ ಆಟಗಾರ ವಿನೀತ್ ಗಳಿಸಿದ್ದು ಎಂಬುದು ವಿಶೇಷ. ಪಂದ್ಯದ ನಿಗದಿತ ಅವಧಿಯಲ್ಲಿ ಎರಡು ತಂಡಗಳು 0-0ರಲ್ಲಿ ಸಮಬಲ ಕಂಡಿದ್ದವು, ಪಂದ್ಯದ ಹೆಚ್ಚುವರಿ ಅವಧಿಯಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದ ಸಿ.ಕೆ ವಿನೀತ್ 107 ಹಾಗೂ 118ನೇ ನಿಮಿಷದಲ್ಲಿ ಗೋಲು ಗಳಿಸಿ ಕಪ್ ಗೆಲ್ಲಿಸಿಕೊಟ್ಟರು.

Federation Cup: Bengaluru FC beat Mohun Bagan 2-0 in extra time

ಈ ಬಾರಿಯ ಐ ಲೀಗ್ ಚಾಂಪಿಯನ್ ಐಜ್ವಾಲ್ ಫುಟ್ಬಾಲ್ ಕ್ಲಬ್ ತಂಡವನ್ನು ಏಕೈಕ ಗೋಲಿನಿಂದ ಸೋಲಿಸಿದ ಬೆಂಗಳೂರು ಫುಟ್ಬಾಲ್ ಕ್ಲಬ್ ಫೆಡೆರೆಷನ್ ಕಪ್ ಫೈನಲಿಗೇರಿತ್ತು.


ಇನ್ನೊಂದೆಡೆ ಈಸ್ಟ್ ಬೆಂಗಾಲ್ ತಂಡವನ್ನು 0-2 ಅಂತರದಿಂದ ಸೋಲಿಸಿದ ಮೋಹನ್ ಬಗಾನ್ ತಂಡ ಫೈನಲ್ ತಲುಪಿತ್ತು.

19ನೇ ಬಾರಿಗೆ ಫೈನಲ್ ತಲುಪಿ, 15ನೇ ಬಾರಿಗೆ ಕಪ್ ಎತ್ತುವ ಕನಸು ಕಂಡಿದ್ದ ಮೋಹನ್ ಬಗಾನ್ ತಂಡಕ್ಕೆ ಬೆಂಗಳೂರು ಫುಟ್ಬಾಲ್ ಕ್ಲಬ್ ಸೋಲುಣಿಸಿದೆ.

Story first published: Wednesday, January 3, 2018, 10:06 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+