FIFA 2026: ಎಂಬಪ್ಪೆ ದಾಖಲೆಯ ಆಟಕ್ಕೆ ಸ್ವೀಡನ್ ಸ್ಟನ್; ಇತಿಹಾಸ ನಿರ್ಮಿಸಿದ ಮೆಕ್ಸಿಕೊ
ಸ್ಟಾರ್ ಆಟಗಾರ ಕೈಲಿಯನ್ ಎಂಬಪ್ಪೆ ಅವರು ಬಾರಿಸಿದ ಎರಡು ಅಮೋಘ ಗೋಲುಗಳ ಸಹಾಯದಿಂದ ಫ್ರಾನ್ಸ್ 3-0 ಗೋಲುಗಳಿಂದ ಫಿಫಾ ವಿಶ್ವಕಪ್ ರೌಂಡ್ 32 ಪಂದ್ಯದಲ್ಲಿ ಸ್ವೀಡನ್ ತಂಡವನ್ನು ಮಣಿಸಿ ಅಬ್ಬರಿಸಿದೆ. ನ್ಯೂ ಯಾರ್ಕ್‌ನ ನ್ಯೂ ಜೆರ್ಸಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಫ್ರಾನ್ಸ್ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿತು.
ಸ್ವೀಡನ್ ವಿರುದ್ಧದ ಪಂದ್ಯದಲ್ಲಿ, ಫ್ರಾನ್ಸ್ ಮೊದಲಾರ್ಧದಿಂದಲೇ ಆಕ್ರಮಣಕಾರಿಯಾಗಿ ಆಡಿತು, ಮೊದಲ 45 ನಿಮಿಷಗಳಲ್ಲಿ ಗೋಲು ಗಳಿಸಲು ಫ್ರಾನ್ಸ್ ಸತತ ಪ್ರಯತ್ನ ಮಾಡಿತು. ಆದರೆ ಹೆಚ್ಚುವರಿ ಸಮಯದಲ್ಲಿ ಸ್ಟಾರ್ ಆಟಗಾರ ಎಂಬಪ್ಪೆ ಸೊಗಸಾದ ಗೋಲನ್ನು ಬಾರಿಸಿದರು. ಇದೇ ಅವಧಿಯಲ್ಲಿ ಎಂಬಪ್ಪೆ ಒಂದು ಗೋಲನ್ನು ದಾಖಲಿಸಿದ್ದರು. ಆದರೆ ಅದನ್ನು ಫೌಲ್ ಎಂದು ನೀಡಲಾಗಿತ್ತು.

ದ್ವಿತೀಯಾರ್ಧದ ಆರಂಭದೊಂದಿಗೆ, ಬ್ರಾಡ್ಲಿ ಬಾರ್ಕೋಲಾ 53 ನೇ ನಿಮಿಷದಲ್ಲಿ ಅಮೋಘ ಕಾಲ್ಚಳಕದ ಪ್ರದರ್ಶನ ನೀಡಿ ಫ್ರಾನ್ಸ್‌ಗೆ 2-0 ಮುನ್ನಡೆ ತಂದುಕೊಟ್ಟರು. ಇಲ್ಲಿಂದ ಫ್ರಾನ್ಸ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. 74ನೇ ನಿಮಿಷದಲ್ಲಿ ಎಂಬಪ್ಪೆ ಮತ್ತೊಂದು ಗೋಲು ದಾಖಲಿಸಿದರು. ಪರಿಣಾಮ ಫ್ರಾನ್ಸ್ ತಂಡಕ್ಕೆ ಗೆಲುವು ಹತ್ತಿರವಾಯಿತು. ಅಲ್ಲದೆ ಫ್ರಾನ್ಸ್ ಸುಲಭವಾಗಿ ಪಂದ್ಯವನ್ನು ಗೆದ್ದು ಬೀಗಿತು.
ಎಂಬಪ್ಪೆ ದಾಖಲೆ
ಸ್ವೀಡನ್ ವಿರುದ್ಧದ ಪಂದ್ಯದಲ್ಲಿ 2 ಗೋಲು ಬಾರಿಸುತ್ತಲೇ ಎಂಬಪ್ಪೆ ಫಿಫಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಈಗ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಇವರು ಒಟ್ಟಾರೆ ಫುಟ್ಬಾಲ್ ವಿಶ್ವಕಪ್‌ನಲ್ಲಿ ಈ ವರೆಗೆ 18 ಗೋಲು ದಾಖಲಿಸಿದ್ದಾರೆ.
ಗೋಲ್ಡನ್ ಬೂಟ್ ಮೇಲೆ ಕಣ್ಣು
ಫ್ರಾನ್ಸ್ ತಂಡದ ಎಂಬಪ್ಪೆ ಗೋಲ್ಡನ್ ಬೂಟ್ ಮೇಲೆ ಕಣ್ಣು ನೆಟ್ಟಿದ್ದಾರೆ. ಇವರು ಈ ವಿಶ್ವಕಪ್‌ನಲ್ಲಿ 6 ಗೋಲು ಹಾಗೂ 2 ಅಸಿಸ್ಟ್ ದಾಖಲಿಸಿದ್ದಾರೆ. ಈ ಪಟ್ಟಿಯಲ್ಲಿ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಸಹ ಇದ್ದು, ಇವರು ಸಹ 6 ಗೋಲು ಸಿಡಿಸಿದ್ದಾರೆ. ಇನ್ನು ನಾರ್ವೆ ತಂಡದ ಎರ್ಲಿಂಗ್ ಹಾಲೆಂಡ್ 5 ಗೋಲು ಬಾರಿಸಿದ್ದಾರೆ.
40 ವರ್ಷದ ಬಳಿಕ ನಾಕೌಟ್‌ಗೆ
ಫಿಫಾ ವಿಶ್ವಕಪ್ ಫುಟ್‌ಬಾಲ್ ಮಹಾಸಮರದ ಜಂಟಿ ಆತಿಥೇಯ ದೇಶವಾದ ಮೆಕ್ಸಿಕೊ ಹೊಸ ಸುದೀರ್ಘ ಇತಿಹಾಸವನ್ನು ಸೃಷ್ಟಿಸಿದೆ. ಇಡೀ ವಿಶ್ವವೇ ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಿದ್ದ ರೌಂಡ್ ಆಫ್ 32 ಪಂದ್ಯದಲ್ಲಿ ಮೆಕ್ಸಿಕೊ 2-0 ಗೋಲುಗಳ ಅಂತರದಿಂದ ಈಕ್ವೆಡಾರ್ ತಂಡವನ್ನು ಮಣ್ಣುಮುಕ್ಕಿಸಿದೆ. ಈ ಸ್ಮರಣೀಯ ವಿಜಯವು ಮೆಕ್ಸಿಕೊ ಕ್ರೀಡಾ ಇತಿಹಾಸದಲ್ಲೇ ಹಿಂದೆಂದೂ ಕಾಣದ ಮಹತ್ವದ ಮೈಲಿಗಲ್ಲು ಎನಿಸಿಕೊಂಡಿದೆ. ಕಳೆದ ಬರೋಬ್ಬರಿ 40 ವರ್ಷಗಳಿಂದ ಮೆಕ್ಸಿಕೊ ತಂಡಕ್ಕೆ ವಿಶ್ವಕಪ್‌ನ ನಾಕೌಟ್ ಹಂತವನ್ನು ದಾಟಿ ಮುನ್ನಡೆಯಲು ಸಾಧ್ಯವಾಗಿರಲಿಲ್ಲ.

ತಮ್ಮದೇ ತವರಿನ ಅಂಗಳದಲ್ಲಿ ನೆರೆದಿದ್ದ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಮೆಕ್ಸಿಕೊ ಆಟಗಾರರು ಅಬ್ಬರಿಸಿದರು. ಆರಂಭಿಕ ಹಂತದಿಂದಲೇ ಹಠ ಬಿಡದೆ ಮೆಕ್ಸಿಕೊ ಎದುರಾಳಿ ರಕ್ಷಣಾ ಕೋಟೆಯನ್ನು ಬೇಧಿಸುವಲ್ಲಿ ಯಶಸ್ವಿಯಾಯಿತು. ಪಂದ್ಯದ 22ನೇ ನಿಮಿಷದಲ್ಲಿ ಜೂಲಿಯನ್ ಕ್ವಿನೋನೆಸ್ ಗೋಲ್ ಬಾರಿಸಿದರು.
ಮೊದಲ ಗೋಲ್ ಬಾರಿಸಿದ ಉತ್ಸಾಹದಲ್ಲಿದ್ದ ಆತಿಥೇಯರು ತಮ್ಮ ದಾಳಿಯ ಹೆಚ್ಚಿಸಿದರು. ಮೊದಲ ಗೋಲ್ ಬಂದ ಕೇವಲ ಒಂಬತ್ತು ನಿಮಿಷಗಳ ಅಂತರದಲ್ಲಿ, ಅಂದರೆ ಸರಿಯಾಗಿ 31ನೇ ನಿಮಿಷದಲ್ಲಿ ಸ್ಟ್ರೈಕರ್ ರೌಲ್ ಜಿಮೆನೆಜ್ ಅವರು ಗೋಲಾಗಿ ಪರಿವರ್ತಿಸಿದರು. ಈ ಬ್ಯಾಕ್-ಟು-ಬ್ಯಾಕ್ ಗೋಲುಗಳು ಈಕ್ವೆಡಾರ್ ತಂಡದ ಯೋಜನೆಗಳನ್ನು ಸಂಪೂರ್ಣ ಧೂಳೀಪಟ ಮಾಡಿದವು.
ಪಂದ್ಯದ ಕೊನೆಯ ಕ್ಷಣದವರೆಗೂ ಗೋಲು ಬಾರಿಸುವ ಈಕ್ವೆಡಾರ್ ಆಸೆ ಫಲಿಸಲಿಲ್ಲ. ಮೆಕ್ಸಿಕೊ ಕೊನೆಯ ಬಾರಿಗೆ 1986ರ ತವರಿನ ವಿಶ್ವಕಪ್‌ನಲ್ಲೇ ರೌಂಡ್ ಆಫ್ 16ಗೆ ಅರ್ಹತೆ ಪಡೆದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

