FIFA Ranking 2024: ಕೋಪಾ ಅಮೇರಿಕಾ ಚಾಂಪಿಯನ್ ಅರ್ಜೆಂಟೀನಾ ನಂಬರ್-1; ಭಾರತಕ್ಕೆ ಯಾವ ಸ್ಥಾನ?
ಜುಲೈ 18 ಗುರುವಾರ, 2024ರ ಫಿಫಾ ಪುರುಷರ ರ‍್ಯಾಕಿಂಗ್ ಬಿಡುಗಡೆಯಾಗಿದೆ. ಯಶಸ್ಸಿನ ಕೊರತೆಯಿಂದ ಬಳಲುತ್ತಿರುವ ಭಾರತ ಫಿಫಾ ಪುರುಷರ ಶ್ರೇಯಾಂಕದಲ್ಲಿ 124ನೇ ಸ್ಥಾನದಲ್ಲಿ ಉಳಿಸಿಕೊಂಡಿದೆ.
2022ರ ವಿಶ್ವಕಪ್ ಮತ್ತು ಕೊಪಾ ಅಮೆರಿಕ 2024ರ ಚಾಂಪಿಯನ್ ಅರ್ಜೆಂಟೀನಾ ಅಗ್ರಸ್ಥಾನದಲ್ಲಿದೆ. ಯುರೋ 2024ರ ಸೆಮಿ-ಫೈನಲ್ ತಲುಪಿದ ನಂತರ ಫ್ರಾನ್ಸ್ ಎರಡನೇ ಸ್ಥಾನ ಪಡೆದಿದೆ.

ಹೊಸ ಯುರೋಪಿಯನ್ ಚಾಂಪಿಯನ್ ಸ್ಪೇನ್ 3ನೇ ಸ್ಥಾನದಲ್ಲಿ 5 ಅಂಕಗಳನ್ನು ಪಡೆದಿದೆ. ನಂತರ ಫೈನಲಿಸ್ಟ್‌ಗಳಾದ ಇಂಗ್ಲೆಂಡ್ (4 ನೇ, 1 ಅಂಕ) ಮತ್ತು ಬ್ರೆಜಿಲ್ (5 ನೇ, 1 ಅಂಕ) ಆಗ್ರ ಐದರಲ್ಲಿ ಸ್ಥಾನ ಪಡೆದಿವೆ. ಬೆಲ್ಜಿಯಂ (6ನೇ, 3 ಅಂಕಗಳ ಕೆಳಗೆ) ಈಗ ಅಗ್ರ 5ರ ಹೊರಗಿದೆ.
ಆದರೆ ನೆದರ್ಲ್ಯಾಂಡ್ಸ್ (7ನೇ) ಮತ್ತು ಪೋರ್ಚುಗಲ್ (8ನೇ, 2 ಅಂಕಗಳ ಕೆಳಗೆ) ತಂಡಗಳು ಕ್ರಮವಾಗಿ ಕೆಳಗಿವೆ. ಕೊಲಂಬಿಯಾ (9ನೇ, 3 ಸ್ಥಾನ ಮೇಲಕ್ಕೆ) ಕೊಪಾ ಅಮೇರಿಕಾ ಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಸೋಲಿನ ಹೊರತಾಗಿಯೂ ಅಗ್ರ 10ರಲ್ಲಿ ಸ್ಥಾನ ಪಡೆದಿದೆ.
ಭಾರತದ ರ‍್ಯಾಕಿಂಗ್ ಕುಸಿತ
2026ರ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳ ಎರಡನೇ ಸುತ್ತಿನಲ್ಲಿ ಕತಾರ್ ಮತ್ತು ಅಫ್ಘಾನಿಸ್ತಾನ ವಿರುದ್ಧ ಸೋಲನ್ನು ಎದುರಿಸಬೇಕಾಗಿದ್ದ ಕಾರಣ ಜೂನ್ ತಿಂಗಳು ಭಾರತಕ್ಕೆ ತುಂಬಾ ಕೆಟ್ಟದ್ದಾಗಿತ್ತು.ಹೀಗಾಗಿ ಭಾರತೀಯ ಪುರುಷರ ರಾಷ್ಟ್ರೀಯ ಫುಟ್‌ಬಾಲ್ ತಂಡವು ಫಿಫಾ ಅಂಕಪಟ್ಟಿಯಲ್ಲಿ ಮೂರು ಸ್ಥಾನಗಳನ್ನು ಕಳೆದುಕೊಂಡಿತ್ತು.
ಕಳೆದ ವರ್ಷ ಡಿಸೆಂಬರ್‌ನಿಂದ ಭಾರತ ಅಂಕಪಟ್ಟಿಯಲ್ಲಿ ಜಾರುತ್ತಿದೆ. 2023ರಲ್ಲಿ ಭಾರತ 99ರ ಅತ್ಯುತ್ತಮ ರ‍್ಯಾಕಿಂಗ್‌ನೊಂದಿಗೆ ಅಗ್ರ 100 ರೊಳಗೆ ಪ್ರವೇಶ ಪಡೆದಿತ್ತು. ಆದರೆ ಅಂದಿನಿಂದ ಭಾರತ ಸತತವಾಗಿ ಅಂಕಪಟ್ಟಿಯಲ್ಲಿ ಕೆಳಗೆ ಬೀಳುತ್ತಿದೆ. ಏಷ್ಯಾದಲ್ಲಿ, ಭಾರತವು 22ನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications