Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೀಫಾ Ranking: ಚಾಂಪಿಯನ್ ಫ್ರಾನ್ಸ್ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ಬೆಲ್ಜಿಯಂ

FIFA Rankings: Belgium move ahead of France to take outright top spot

ಬ್ರಸೆಲ್ಸ್, ಅಕ್ಟೋಬರ್ 25: ಫೀಫಾ ವರ್ಲ್ಡ್ ಕಪ್ 2018ರ ಚಾಂಪಿಯನ್ ಫ್ರಾನ್ಸ್ ತಂಡವನ್ನು ಫೀಫಾ ರ್ಯಾಂಕಿಂಗ್ ನಲ್ಲಿ ಬೆಲ್ಜಿಯಂ ತಂಡ ಹಿಂದಿಕ್ಕಿದೆ. ರ್ಯಾಂಕಿಂಗ್ ನ ಅಗ್ರ ಸ್ಥಾನದಲ್ಲಿದ್ದ ಫ್ರಾನ್ಸ್ ಜಾಗವನ್ನು ಬೆಲ್ಜಿಯಂ ಆವರಿಸಿಕೊಂಡಿದೆ. ಈ ತಿಂಗಳಿನಲ್ಲಿ ನಡೆದ ಪಂದ್ಯಗಳಲ್ಲಿ ಬೆಲ್ಜಿಯಂ ಮುನ್ನಡೆ ಸಾಧಿಸಿದ್ದರ ಫಲಿತಾಂಶವಾಗಿ ಬೆಲ್ಜಿಯಂ ಮೊದಲ ಸ್ಥಾನ ಅಲಂಕರಿಸಿದೆ.

ಈ ಹಿಂದೆಯೇ ಬೆಲ್ಜಿಯಂ ತಂಡ, ರ್ಯಾಂಕಿಂಗ್ ನಲ್ಲಿ ಫ್ರಾನ್ಸ್ ನ ಬೆನ್ನು ಬಿದ್ದಿತ್ತು. ಅಂದರೆ ರ್ಯಾಂಕಿಂಗ್ ನಲ್ಲಿ ಫ್ರಾನ್ಸ್ ಜೊತೆ ಬೆಲ್ಜಿಯಂ ಕೂಡ ಸಮಾನ ಅಂಕ (1729) ಹಂಚಿಕೊಂಡಿತ್ತು. ಈಗ 1733 ಅಂಕಗಳನ್ನು ಪಡೆದಿರುವ ಬೆಲ್ಜಿಂ ಮೊದಲ ಸ್ಥಾನದಲ್ಲಿದ್ದರೆ, ಫ್ರಾನ್ಸ್ 1732 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

ಈಗಿನ ರ್ಯಾಂಕಿಂಗ್ ನಲ್ಲಿ ಬ್ರೆಜಿಲ್ ಮೂರನೇ ಸ್ಥಾನ, ಫೀಫಾ ವಿಶ್ವಕಪ್ ರನ್ನರ್ಸ್ ತಂಡ ಕ್ರೊವೇಷಿಯಾ 4ನೇ ಸ್ಥಾನ, ಉಳಿದಂತೆ ಇಂಗ್ಲೆಂಡ್, ಉರುಗ್ವೆ, ಪೋರ್ಚುಗಲ್, ಸ್ವಿಟ್ಜರ್ ಲ್ಯಾಂಡ್, ಸ್ಪೇನ್, ಡೆನ್ಮಾರ್ಕ್ 5ರಿಂದ 10ರೊಳಗೆ ಸ್ಥಾನ ಪಡೆದುಕೊಂಡಿವೆ.

ನೇಷನ್ಸ್ ಲೀಗ್ ಪಂದ್ಯದಲ್ಲಿ ಬೆಲ್ಜಿಯಂ ತಂಡ, ಸ್ವಿಟ್ಜರ್ಲ್ಯಾಂಡ್ ತಂಡವನ್ನು ಸೋಲಿಸಿತ್ತು, ಮತ್ತು ಸೌಹಾರ್ದ ಪಂದ್ಯದಲ್ಲಿ ನೆದರ್ಲ್ಯಾಂಡ್ ವಿರುದ್ಧ ಡ್ರಾ ಸಾಧಿಸಿತ್ತು. ರ್ಯಾಂಕಿಂಗ್ ನಲ್ಲಿ ಬೆಲ್ಜಿಯಂ ಜಿಗಿತಕ್ಕೆ ಈ ಪ್ರದರ್ಶನವೇ ಕಾರಣ. ಅಂದ್ಹಾಗೆ ಫೀಫಾ ವರ್ಲ್ಡ್ ಕಪ್ ಫೈನಲ್ ನಲ್ಲಿ ಫ್ರಾನ್ಸ್, ಕ್ರೊವೇಷಿಯಾ ವಿರುದ್ಧ 4-2ರ ಜಯ ಸಾಧಿಸಿತ್ತು.

Story first published: Thursday, October 25, 2018, 18:25 [IST]
Other articles published on Oct 25, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+