For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಭಾರತ ಫುಟ್‌ಬಾಲ್‌ ಫೆಡರೇಶನ್ ಅಮಾನತುಗೊಳಿಸಿದ ಫಿಫಾ; ಭಾರತಕ್ಕೆ ಭಾರೀ ಮುಖಭಂಗ

FIFA suspends All India Football Federation due to third party influence

ವಿಶ್ವ ಫುಟ್ ಬಾಲ್ ಆಡಳಿತ ಮಂಡಳಿಯಾದ ಫಿಫಾ ಮಂಗಳವಾರ ( ಆಗಸ್ಟ್ 16 ) ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ( AIFF ) ಅನ್ನು ನಿಷೇಧ ಮಾಡಿ ಆದೇಶವನ್ನು ಹೊರಡಿಸಿದೆ.

ಭಾರತ ಫುಟ್ಬಾಲ್ ಫೆಡರೇಶನ್ ನಲ್ಲಿ ಮೂರನೇ ವ್ಯಕ್ತಿಗಳ ಅನಗತ್ಯ ಹಸ್ತಕ್ಷೇಪ ಹಾಗೂ ಫಿಫಾ ನಿಯಮಗಳ ಉಲ್ಲಂಘನೆ ಆದ ಕಾರಣ ಈ ನಿರ್ಧಾರವನ್ನು ಫಿಫಾ ತೆಗೆದುಕೊಂಡಿದೆ. ಫಿಫಾದ ಈ ನಿರ್ಧಾರ ಇದೀಗ ಭಾರತ ಫುಟ್ಬಾಲ್ ಫೆಡರೇಶನ್ ಗೆ ಭಾರಿ ಮುಖಭಂಗವನ್ನು ಉಂಟು ಮಾಡಿದೆ.

ಇನ್ನು ಫಿಫಾ ಭಾರತ ಫುಟ್ಬಾಲ್ ಫೆಡರೇಶನ್ ಮೇಲೆ ಹೇರಿರುವ ಈ ನಿಷೇಧದ ಪರಿಣಾಮ ಇದೀಗ ಇದೇ ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಅಂಡರ್ 17 ಮಹಿಳಾ ಫುಟ್ಬಾಲ್ ವಿಶ್ವಕಪ್ ಮೇಲೆ ಬೀರಿದ್ದು, ಭಾರತ ಈ ಮಹತ್ವದ ಟೂರ್ನಿಯ ಆತಿಥ್ಯ ವಹಿಸುವ ಅವಕಾಶವನ್ನು ಕಳೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಫುಟ್ಬಾಲ್ ಬೆಳೆಯುತ್ತಾ ತನ್ನ ವ್ಯಾಪ್ತಿಯನ್ನು ಕೊಂಚಮಟ್ಟದಲ್ಲಿ ಹೆಚ್ಚಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ರೀತಿಯ ನಿಷೇಧಕ್ಕೆ ಒಳಗಾದದ್ದು ತೀವ್ರ ಹಿನ್ನಡೆಯನ್ನುಂಟು ಮಾಡಿದೆ.

ಭಾರತ ಫುಟ್ಬಾಲ್ ಫೆಡರೇಶನ್ ಒಳಗಡೆ ಮೂರನೇ ವ್ಯಕ್ತಿಗಳ ಹಸ್ತಕ್ಷೇಪ, ಮಧ್ಯಸ್ಥಿಕೆ ಮತ್ತು ನಿರ್ಧಾರಗಳು ನಡೆಯುತ್ತವೆ ಎಂಬುದನ್ನು ಪತ್ತೆ ಹಚ್ಚಿರುವ ಫಿಫಾ ಈ ನಿಷೇಧವನ್ನು ಸುಲಭವಾಗಿ ತೆಗೆದು ಹಾಕುವುದಿಲ್ಲ ಎಂದೇ ಹೇಳಬಹುದು. ಇನ್ನು ಭಾರತ ಫುಟ್ಬಾಲ್ ಫೆಡರೇಶನ್ ನಿಯಮಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ಸಾಬೀತಾದರೆ ಮಾತ್ರ ಫಿಫಾ ಈ ನಿಷೇಧವನ್ನು ಹಿಂಪಡೆಯುವ ಸಾಧ್ಯತೆಗಳಿವೆ. ಹಾಗೂ ಫಿಫಾ ಭಾರತ ಕ್ರೀಡಾ ಸಚಿವಾಲಯದೊಂದಿಗೆ ರಚನಾತ್ಮಕ ಸಂಪರ್ಕದಲ್ಲಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಸಕಾರಾತ್ಮಕ ಫಲಿತಾಂಶವನ್ನು ನಿರೀಕ್ಷಿಸಬಹುದಾಗಿದೆ.

Story first published: Tuesday, August 16, 2022, 8:42 [IST]
Other articles published on Aug 16, 2022
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+