Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌ನಿಂದ ಹೊರಬಿದ್ದ ಸೋಮಾಲಿಯಾ ರೆಫರಿಗೆ ಪೂರ್ಣ ಸಂಬಳ ನೀಡಲು FIFA ನಿರ್ಧಾರ

23ನೇ ಆವೃತ್ತಿಯ ಫಿಫಾ ವಿಶ್ವಕಪ್ ಆರಂಭವಾಗಿದೆ. ಈ ವಿಶ್ವಕಪ್‌ನಲ್ಲಿ 48 ದೇಶಗಳು ಭಾಗವಹಿಸುತ್ತಿದ್ದು ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿವೆ. ಈ ಬಾರಿಯ ವಿಶ್ವಕಪ್‌ನ್ನು ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾ ತಂಡಗಳು ಆತಿಥ್ಯ ವಹಿಸಿವೆ. ಈ ವಿಶ್ವಕಪ್‌ ಆರಂಭಕ್ಕೂ ಮುನ್ನ ಸೊಮಾಲಿ ರೆಫರಿ ಒಮರ್ ಅಬ್ದುಲ್ಕಾದಿರ್ ಅರ್ತಾನ್ ಭಾರೀ ಸುದ್ದಿಯಲ್ಲಿದ್ದರು.

ಫಿಫಾ ಈಗ ಅರ್ತಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಬಿಬಿಸಿ ವರದಿಯ ಪ್ರಕಾರ, ವಿಶ್ವಕಪ್‌ನಲ್ಲಿ ಭಾಗವಹಿಸಲು ಸೊಮಾಲಿಯಾ ರೆಫರಿ ವಿಫಲರಾದರೂ ಸಹ ಅವರಿಗೆ ಸಿಗಬೇಕಿದ್ದ ಸಂಪೂರ್ಣ ಸಂಬಳವನ್ನು ಪಾವತಿಸಲು ಫಿಫಾ ನಿರ್ಧರಿಸಿದೆ.

FIFA

ಸೊಮಾಲಿಯಾ ರೆಫರಿಗೆ ಸಿಗುವ ಹಣವೆಷ್ಟು?

ಅಮೆರಿಕ ಸೊಮಾಲಿಯಾ ರೆಫರಿಯನ್ನು ದೇಶದೊಳಗೆ ಪ್ರವೇಶಿಸಲು ಅನುಮತಿ ನೀಡದ ಕಾರಣ ಅವರು ತವರಿಗೆ ಮರಳ ಬೇಕಾಯಿತು. ಈ ಪ್ರಕರಣ ಟೀಕೆಗೆ ಗುರಿಯಾಗಿತ್ತು. ಈಗ ಫಿಫಾ ಒಮರ್ ಅಬ್ದುಲ್ಕಾದಿರ್ ಅರ್ತಾನ್ ಅವರಿಗೆ ಪೂರ್ಣ ವೇತನವನ್ನು ನೀಡಲು ನಿರ್ಧರಿಸಿದೆ. ಆದರೆ ರೆಫರಿಗಳ ಶುಲ್ಕವನ್ನು ಇನ್ನು ಬಹಿರಂಗಪಡಿಸದ ಕಾರಣ ಒಮರ್ ಅಬ್ದುಲ್ಕಾದಿರ್ ಅರ್ತಾನ್ ಎಷ್ಟು ಪಡೆಯುತ್ತಾರೆ ಎಂಬುದು ಪ್ರಸ್ತುತ ಸ್ಪಷ್ಟವಾಗಿಲ್ಲ.

ಟೂರ್ನಿಯಲ್ಲಿ ಭಾಗವಹಿಸುತ್ತಿರುವ ರೆಫರಿಗಳ ಸಂಖ್ಯೆ ಎಷ್ಟು?

ಫಿಫಾ ವಿಶ್ವಕಪ್‌ ಮುಗಿದ ಬಳಿಕವೆ ರೆಫರಿ ಶುಲ್ಕವನ್ನು ಪಡೆಯುತ್ತಾರೆ ಎಂದು ವರದಿ ಹೇಳುತ್ತದೆ. ಈ ಬಾರಿಯ ಫುಟ್ಬಾಲ್‌ ವಿಶ್ವಕಪ್‌ನಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿದ್ದು, 51 ರೆಫರಿಗಳು, 88 ಸಹಾಯಕ ರೆಫರಿಗಳು ಮತ್ತು 30 ವೀಡಿಯೊ ಸಹಾಯಕ ರೆಫರಿಗಳು ಭಾಗವಹಿಸುತ್ತಿದ್ದಾರೆ.

ಏನಿದು ಪ್ರಕರಣ

ಸೋಮಾಲಿಯಾ ರೆಫರಿ ಒಮರ್ ಅಬ್ದುಲ್ಕಾದಿರ್ ಅರ್ತಾನ್ ಫಿಫಾ ವಿಶ್ವಕಪ್‌ನಲ್ಲಿ ಭಾಗವಹಿಸುವ ಆಸೆಗೆ ಅಮೆರಿಕದ ಪೆಟ್ಟು ನೀಡಿದೆ . ಅಗತ್ಯವಿರುವ ಎಲ್ಲಾ ಸರಿಯಾದ ದಾಖಲೆಗಳನ್ನು ಹೊಂದಿದ್ದರೂ ಸಹ, ಅಮೆರಿಕದ ಅಧಿಕಾರಿಗಳು ಅವರನ್ನು ಸುಮಾರು 11 ಗಂಟೆಗಳ ಕಾಲ ವಿಚಾರಣೆ ನಡೆಸಿ ದೇಶದೊಳಗೆ ಪ್ರವೇಶಿಸಲು ನಿರಾಕರಿಸಿದ್ದಲ್ಲದೆ, ಇಸ್ತಾಂಬುಲ್‌ಗೆ ತೆರಳುವ ವಿಮಾನದಲ್ಲಿ ಮರಳಿ ಕಳುಹಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಆಡಳಿತದ ಅವಧಿಯಲ್ಲಿ ಜಾರಿಯಾದ ಪ್ರಯಾಣ ನಿರ್ಬಂಧಗಳಿಗೆ ಒಳಪಟ್ಟ ದೇಶಗಳಲ್ಲಿ ಸೋಮಾಲಿಯಾ ಕೂಡ ಸೇರಿದೆ.

ಯಾರು ಈ ಒಮರ್ ಅರ್ತಾನ್?

ಒಮರ್ ಅಬ್ದುಲ್ಕಾದಿರ್ ಅರ್ತಾನ್ ಕೇವಲ ಸಾಮಾನ್ಯ ರೆಫರಿಯಲ್ಲ, 2025ರ ಸಾಲಿನ ಆಫ್ರಿಕಾದ ಅತ್ಯುತ್ತಮ ಪುರುಷ ರೆಫರಿ ಪ್ರಶಸ್ತಿ ವಿಜೇತರಾಗಿದ್ದಾರೆ. ಇವರ ಈ ಸಾಧನೆಯ ಬಲದಿಂದ ಇವರಿಗೆ ವಿಶ್ವಕಪ್‌ನಲ್ಲಿ ರೆಫರಿಯಾಗಿ ಭಾಗವಹಿಸುವ ಅವಕಾಶ ಲಭಿಸಿತು. ಆದರೆ ಅವರ ಕನಸು ನನಸಾಗಲಿಲ್ಲ. ಆದರೆ ಇವರು ತವರಿಗೆ ಮರಳಿದಾಗ ಅವರಿಗೆ ಅಭಿಮಾನಿಗಳು ಹೃದಯಸ್ಪರ್ಶಿ ಸ್ವಾಗತ ನೀಡಿದರು.

Story first published: Sunday, June 14, 2026, 19:45 [IST]
Other articles published on Jun 14, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+