ವಿಶ್ವಕಪ್ 2018: ಕೇನ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡ

ಲಂಡನ್, ಮೇ 22: ರಷ್ಯಾದಲ್ಲಿ ನಡೆಯಲಿರುವ ಫೀಫಾ ವಿಶ್ವಕಪ್ 2018ರ ಜಾಗತಿಕ ಸಮರದಲ್ಲಿ ಇಂಗ್ಲೆಂಡ್ ತಂಡವನ್ನು ಹ್ಯಾರಿ ಕೇನ್ ಅವರು ಮುನ್ನಡೆಸಲಿದ್ದಾರೆ ಎಂದು ಫುಟ್ಬಾಲ್ ಅಸೋಸಿಯೇಷನ್ ಸ್ಪಷ್ಟಪಡಿಸಿದೆ.
ಟೊಟೊನ್ಹಾಮ್ ಹಾಟ್ಸ್ ಪುರ್ ಸ್ಟ್ರೈಕರ್ ಕೇನ್ ಅವರು ಇಂಗ್ಲೆಂಡ್ ಪರ 23 ಪಂದ್ಯಗಳನ್ನಾಡಿ 12 ಗೋಲು ಗಳಿಸಿದ್ದಾರೆ. ಕಳೆದ ವರ್ಷ ಸ್ಕಾಲೆಂಡ್ ವಿರುದ್ಧ ವಿಶ್ವಕ ಪ್ಅರ್ಹತಾ ಸುತ್ತಿನ ಪಂದ್ಯದಲ್ಲಿ ಕೇನ್ ಅವರು ಮೊದಲ ಬಾರಿಗೆ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದರು.
ಈ ಬಾರಿ ವಿಶ್ವಕಪ್ ನಲ್ಲಿ ಟ್ಯೂನಿಷಿಯಾ, ಪನಾಮಾ ಹಾಗೂ ಬೆಲ್ಜಿಯಂ ತಂಡವನ್ನು ಇಂಗ್ಲೆಂಡ್ ಎದುರಿಸಲಿದ್ದು, ಸುಲಭವಾಗಿ ಮುಂದಿನ ಹಂತಕ್ಕೇರುವ ನಿರೀಕ್ಷೆಯಿದೆ.
ಕಳೆದ ವಾರವೇ 23 ಸದಸ್ಯರ ಇಂಗ್ಲೆಂಡಿನ ತಂಡವನ್ನು ಪ್ರಕಟಿಸಿದ್ದರೂ ನಾಯಕನ ಹೆಸರು ಪ್ರಕಟಿಸಿರಲಿಲ್ಲ. ಕಳೆದ 18 ತಿಂಗಳಿನಿಂದ ನಡೆದಿರುವ ಸಿದ್ಧತಾ ಶಿಬಿರದಲ್ಲಿ ಉತ್ತಮ ನಿರ್ವಹಣೆ ತೋರಿರುವ ಕೇನ್ ಅವರು ಉತ್ತಮ ಫಲಿತಾಂಶ ತರುವ ನಂಬಿಕೆಯಿದೆ ಎಂದು ತಂಡದ ಮ್ಯಾನೇಜರ್ ಗರೇಟ್ ಸೌಥ್ ಗೇಟ್ ಹೇಳಿದ್ದಾರೆ.
ಉಳಿದಂತೆ ಜೋ ಹಾರ್ಟ್, ಜಾಕ್ ವಿಲ್ಶೇರ್ ಅವರು ತಂಡಕ್ಕೆ ಆಯ್ಕೆಯಾಗಿಲ್ಲ. ಲಿವರ್ ಪೂಲ್ ನ ಟ್ರೆಂಟ್ ಅಲೆಕ್ಸಾಂಡರ್ ಅರ್ನಾಲ್ಡ್ ಅಚ್ಚರಿಯ ಆಯ್ಕೆ ಎನಿಸಿಕೊಂಡರೆ, ಚೆಲ್ಸಿ ಕ್ಯಾಪ್ಟನ್ ಗ್ಯಾರಿ ಕಾಹಿಲ್ ತಂಡಕ್ಕೆ ಬಲ ತರುವ ನಿರೀಕ್ಷೆಯಿದೆ.
ಟಾಮ್ ಹೀಟನ್, ಜೇಮ್ಸ್ ಟಾರ್ಕೊವ್ಸ್ಕಿ, ಲೆವಿಸ್ ಕುಕ್, ಜಾಕ್ ಲಿವರ್ ಮೋರ್, ಆಡಂ ಲಲ್ಲಾನ ಅವರು ಸೌಥ್ ಗೇಟ್ ಅವರ ಸ್ಟ್ಯಾಂಡ್ ಬೈ ಪಟ್ಟಿಯಲ್ಲಿದ್ದಾರೆ.
ಜಿ ಗುಂಪಿನಲ್ಲಿರುವ ಇಂಗ್ಲೆಂಡ್ ತಂಡವು ಜೂನ್ 18ರಂದು ಟುನಿಷಿಯಾ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ. ಇದಕ್ಕೂ ಮುನ್ನ ನೈಜೀರಿಯಾ ಹಾಗೂ ಕೋಸ್ಟರಿಕಾ ವಿರುದ್ಧ ಸೌಹಾರ್ದ ಪಂದ್ಯ ನಿಗದಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications