ಫೀಫಾ 2018 : 16ರ ಹಂತದಲ್ಲಿ ಫ್ರಾನ್ಸ್ ಜತೆ ಅರ್ಜೆಂಟೀನಾ ಕದನ


ಮಾಸ್ಕೋ, ಜೂನ್ 27: ಫೀಫಾ ವಿಶ್ವಕಪ್ 2018ರಲ್ಲಿ ಗೋಲು ಗಳಿಸಲು ಪರದಾಡುತ್ತಿದ್ದ ಮೆಸ್ಸಿ ಅಂತೂ ಗೋಲು ಬಾರಿಸಿದ್ದಲ್ಲದೆ, ತಂಡಕ್ಕೆ ಮುನ್ನಡೆ ತಂದು ಕೊಟ್ಟರು.
ಆದರೆ, ನೈಜೀರಿಯಾ ವಿರುದ್ಧದ ಪಂದ್ಯದಲ್ಲಿ ಹೀರೋ ಆಗಿ ಹೊರ ಹೊಮ್ಮಿದ್ದು ಯುವ ಆಟಗಾರ ಮಾರ್ಕೊಸ್ ರೋ. ಮಾರ್ಕೊಸ್ ಹೊಡೆದ ಕೊನೆ ಕ್ಷಣದ ಗೋಲಿನ ನೆರವಿನಿಂದ ಅರ್ಜೆಂಟೀನಾ 2-1 ಅಂತರದಿಂದ ನೈಜೀರಿಯಾದ ಆಸೆ ಭಗ್ನಗೊಳಿಸಲು ಸಾಧ್ಯವಾಯಿತು.
ವೇಳಾಪಟ್ಟಿ | ಅಂಕಪಟ್ಟಿ | ಪಂದ್ಯದ ಅಂಕಿ ಅಂಶ
ಡಿ ಗುಂಪಿನ ಅಂತಿಮ ಲೀಗ್ ಪಂದ್ಯದಲ್ಲಿ ನೈಜೀರಿಯಾ ವಿರುದ್ಧ ಗೆದ್ದರಷ್ಟೇ ಅರ್ಜೆಂಟೀನಾ ತಂಡ ಮುಂದಿನ ಹಂತಕ್ಕೇರಬಹುದಾಗಿತ್ತು. ಪಂದ್ಯ ಮುಗಿಯಲು ಇನ್ನೇನು ನಾಲ್ಕೈದು ನಿಮಿಷವಿತ್ತು. ಅರ್ಜೆಂಟೀನಾ ತಂಡದ ಬದಲಿ ಆಟಗಾರನಾಗಿ ಬಂದ ಮಾರ್ಕೊಸ್ ಹೀರೋ ಆಗಿ ಬಿಟ್ಟರು.
ಇದಕ್ಕೂ ಮುನ್ನ ಮಾರ್ಕೊಸ್ ಹೊಡೆದ ರೀತಿಯಲ್ಲೇ ಗೋಲು ಗಳಿಸುವ ಅವಕಾಶ ಪಡೆದಿದ್ದ ಹಿಗ್ವೇನ್ ಎಡವಿದರು. 2014ರಲ್ಲೂ ಇದೇ ರೀತಿ ಅವಕಾಶ ಮಿಸ್ ಮಾಡಿಕೊಂಡಿದ್ದರು.
ಆದರೆ, ಸೈಂಟ್ ಪೀಟರ್ಸ್ ಬರ್ಗ್ ನಲ್ಲಿ ಅರ್ಜೆಂಟೀನಾ ತಂಡ 4-4-2-1 ಮಾದರಿಯಲ್ಲಿ ಕಣಕ್ಕಿಳಿದು, ಕೊನೆಗೂ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಮೆಸ್ಸಿ ಹೊಡೆದ ಗೋಲು ರಷ್ಯಾದಲ್ಲಿ ನಡೆದಿರುವ ಫೀಫಾ 2018ರ 100ನೇ ಗೋಲಾಗಿತ್ತು. ನೈಜೀರಿಯಾ ತಂಡವು 3-5-2-1 ಮಾದರಿಯಲ್ಲಿ ಕಣಕ್ಕಿಳಿದು ಪಂದ್ಯದ ಮೊದಲಾರ್ಧದಲ್ಲಿ ಉತ್ತಮ ಆಟ ಪ್ರದರ್ಶಿಸಿತು. ವಿಕ್ಟರ್ ಮೊಸೆಸ್ ಗೋಲು ಗಳಿಸಿ ಉಭಯ ತಂಡಗಳು ಸಮಬಲ ಸಾಧಿಸಿದಾಗ, ಮೆಸ್ಸಿ ಪಡೆಗೆ ಆತಂಕ ಶುರುವಾಗಿತ್ತು.
ಆದರೆ, ಅರ್ಜೆಂಟೀನಾ ಕೋಚ್ ಸಂಪೋಲಿ ಕ್ರಿಶ್ಚಿಯನ್ ಪವೊನ್, ಮ್ಯಾಕ್ಸಿಮಿಲಿಯಾನೊ ಮೆಜಾ, ಸರ್ಗಿಯೊ ಅಗ್ವೇರೋ ಅವರನ್ನು ದ್ವಿತೀಯಾರ್ಧದಲ್ಲಿ ಕಣಕ್ಕಿಳಿಸಿದರು. ಆದರೆ, ಡಿಫೆಂಡರ್ ರೋ ಅಂತಿಮವಾಗಿ ತಂಡಕ್ಕೆ ಗೆಲುವಿನ ನಗೆ ತಂದು ಕೊಟ್ಟರು.
16ರ ಹಂತದಲ್ಲಿ ಜೂನ್ 30ರಂದು ನಡೆಯಲಿರುವ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ಸೆಣಸಲಿದೆ. ಜುಲೈ 01ರಂದು ಕ್ರೋವೇಷಿಯಾ ವಿರುದ್ಧ ಡೆನ್ಮಾರ್ಕ್ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications