ಫೀಫಾ 2018 : ನೈಜೀರಿಯಾ ಮಣಿಸಿ, 16ರ ಹಂತಕ್ಕೆ ಜಿಗಿದ ಮೆಸ್ಸಿ ಪಡೆ

ಮಾಸ್ಕೋ, ಜೂನ್ 26: ಫೀಫಾ ವಿಶ್ವಕಪ್ 2018ರಲ್ಲಿ ಇಲ್ಲಿ ತನಕ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದ ಸ್ಟಾರ್ ಆಟಗಾರ ಲಿಯೊನ್ನೆಲ್ ಮೆಸ್ಸಿ ತಮ್ಮ ಕಾಲ್ಚೆಳಕ ತೋರಿ, ಮೊದಲ ಗೋಲು ಗಳಿಸಿದರು.
ಡಿ ಗುಂಪಿನ ಅಂತಿಮ ಲೀಗ್ ಪಂದ್ಯದಲ್ಲಿ ನೈಜೀರಿಯಾ ವಿರುದ್ಧ ಗೆದ್ದರಷ್ಟೇ ಅರ್ಜೆಂಟೀನಾ ತಂಡ ಮುಂದಿನ ಹಂತಕ್ಕೇರಬಹುದಾಗಿತ್ತು. ಪಂದ್ಯ ಇನ್ನೇನು 1-1ರಲ್ಲಿ ಅಂತ್ಯ ಕಾಣುತ್ತದೆ ಎನ್ನುವಾಗ ಮಾರ್ಕಸ್ ರೋ ಹೊಡೆದ ಗೋಲು ಅರ್ಜೆಂಟೀನಾಕ್ಕೆ ಜೀವ ತಂದಿತು
ಲೈವ್ ಸ್ಕೋರ್ , ಕಾಮೆಂಟ್ರಿ | ಅಂಕ ಪಟ್ಟಿ
ಅರ್ಜೆಂಟೀನಾ 4-4-2-1 ಮಾದರಿಯಲ್ಲಿ ಕಣಕ್ಕಿಳಿದಿದ್ದರೆ, ನೈಜೀರಿಯಾ ತಂಡವು 3-5-2-1 ಮಾದರಿಯಲ್ಲಿ ಆಡುತ್ತಿದೆ.
2014ರ ರನ್ನರ್ ಅಪ್ ತಂಡ ಅರ್ಜೆಂಟೀನಾ ಈ ಬಾರಿಯ ವಿಶ್ವಕಪ್ ನಲ್ಲಿ ಉತ್ತಮ ನಿರ್ವಹಣೆ ತೋರಿಲ್ಲ. ಮೊದಲ ಬಾರಿಗೆ ದೊಡ್ಡ ಟೂರ್ನಮೆಂಟ್ ನಲ್ಲಿ ಆಡುತ್ತಿರುವ ಐಸ್ ಲ್ಯಾಂಡ್ ತಂಡ 'ಡಾರ್ಕ್ ಹಾರ್ಸ್' ನಂತೆ ಆಡಿ, ಅರ್ಜೆಂಟೀನಾ ವಿರುದ್ಧ 1-1 ಡ್ರಾ ಸಾಧಿಸಿತ್ತು.
ನಂತರ ಕ್ರೋವೇಷಿಯಾ ವಿರುದ್ಧ ಅರ್ಜೆಂಟೀನಾ 3-0 ಸೋಲು ಕಂಡಿತ್ತು. ಕ್ರೋವೇಷಿಯಾ ಈಗಾಗಲೇ ಈ ಗುಂಪಿನಿಂದ ಮುಂದಿನ ಹಂತ ತಲುಪಿದ್ದು, ಡೆನ್ಮಾರ್ಕ್ ವಿರುದ್ಧ ಸೆಣಸಲಿದೆ.
ಅರ್ಜೆಂಟೀನಾ ಹಾಗೂ ನೈಜೀರಿಯಾ ಪಂದ್ಯದಲ್ಲಿ ಗೆದ್ದವರು ಅಥವಾ ಐಸ್ ಲ್ಯಾಂಡ್ ಏನಾದರೂ ಕ್ರೋವೇಷಿಯಾ ವಿರುದ್ಧ ಗೆದ್ದರೆ, 16ರ ಹಂತದಲ್ಲಿ ಫ್ರಾನ್ಸ್ ವಿರುದ್ಧ ಆಡಬೇಕಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications