ಬಿಕಿನಿ ರೂಪದರ್ಶಿಗೆ ಸೋತ 800 ಪುರುಷರು!
ರಿಯೋ ಡಿ ಜನೈರೋ, ಜು.2: ಸಾಂಬಾ ನಾಡಲ್ಲಿ ಫೀಫಾ ವಿಶ್ವಕಪ್ ಫೀವರ್ ಬರೀ ಮೈದಾನದಲ್ಲಷ್ಟೇ ಅಲ್ಲ ಮೈದಾನದ ಹೊರಗೂ ವ್ಯಾಪಕವಾಗಿ ಹಬ್ಬಿದೆ. ವಿಶ್ವಕಪ್ ಸಂದರ್ಭದಲ್ಲಿ ವಿಚಿತ್ರ ನಡಾವಳಿ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವವರಿಗೇನೂ ಕಡಿಮೆಯಿಲ್ಲ.
ಕೆಲವರು ಪ್ರತಿಭಾವಂತರಿಗಂತೂ ವಿಶ್ವಕಪ್ ಅದ್ಭುತ ವೇದಿಕೆ ಒದಗಿಸಬಲ್ಲುದು. ಅರ್ಜೆಂಟಿನಾದ ರೂಪದರ್ಶಿಯೊಬ್ಬಳು ರಿಯೋದ ಕಡಲ ತೀರದಲ್ಲಿ ಒಟ್ಟಿಗೆ 800ಕ್ಕೂ ಅಧಿಕ ಪುರುಷರನ್ನು ಮಣಿಸಿ ಬೀಗಿರುವ ಸುದ್ದಿ ಬಂದಿದೆ.
ಬ್ರೆಜಿಲ್ಲಿನಲ್ಲಿ 10 ಲಕ್ಷಕ್ಕೂ ಅಧಿಕ ವೇಶ್ಯೆರಿದ್ದಾರೆ. ಇವರೆಲ್ಲರೂ ತಮ್ಮ ವ್ಯಾಪಾರದ ನಡುವೆ ಸಮಯ ಸಿಕ್ಕಾಗ ಬೀದಿಗಿಳಿದು ಫುಟ್ಬಾಲ್ ಆಡುವ ಮೂಲಕ ವಿಶ್ವಕಪ್ ವ್ಯಾಮೋಹವನ್ನು ಪ್ರದರ್ಶಿಸುತ್ತಾರೆ. ಇನ್ನೊಂದೆಡೆ ತಮ್ಮ ದೇಶ ವಿಶ್ವಕಪ್ ನಲ್ಲಿ ಗೆದ್ದರೆ ಬೆತ್ತಲೆ ಓಟ ಓಡುವುದಾಗಿ ಪೋರ್ನ್ ಸ್ಟಾರ್ ಗಳು ಪ್ರಚಾರಗಿಟ್ಟಿಸಿಕೊಳ್ಳುತ್ತಾರೆ. [ಚಿಲಿ ಗೆದ್ದ ಖುಷಿಯಲ್ಲಿ 'ಮ್ಯಾರಥಾನ್' ಸಂಭೋಗ]
ಇತ್ತೀಚೆಗೆ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅತಿಥೇಯ ಬ್ರೆಜಿಲ್ ಗೆದ್ದಾಗ ಅಭಿಮಾನಿಗಳು ಹುಚ್ಚೆದ್ದು ಕುಣಿದಾಡಿದ್ದರು ಇವರಲ್ಲಿ ಬಿಸಿ ರಕ್ತದ ತರುಣಿಯರು ತಮ್ಮ ಟಾಪ್ ಕಳಚಿ ಕುಣಿದಿದ್ದು ದೊಡ್ಡ ಸುದ್ದಿಯಾಯಿತು. ಚಿಲಿ ದೇಶದ ಪತ್ರಕರ್ತೆ ಕೂಡಾ ಲೀಗ್ ಹಂತದ ಪಂದ್ಯದ ನಂತರ ತನ್ನ ಎದೆಯನ್ನು ಸಾರ್ವಜನಿಕವಾಗಿ ತೋರಿಸಿ ಎಲ್ಲರ ಗಮನ ಸೆಳೆದಿದ್ದಳು.[ಬ್ರೆಜಿಲ್ ಗೆದ್ದರೂ ಕಷ್ಟ, ಖುಷಿಗೇ ಪ್ರಾಣ ಬಿಟ್ಟ]
ಆದರೆ, ಇಂದಿನ ಕಥೆ ಸ್ವಲ್ಪ ಬೇರೆಯದ್ದೇ ಆಗಿದೆ. ಅರ್ಜೆಂಟೀನಾದ ರೂಪದರ್ಶಿ ಫಿಯೋರೆಲ್ಲಾ ಕಾಸ್ಟಿಲ್ಲೋ ರಿಯೋದ ಕಡಲಿನಲ್ಲಿ ಕಪ್ಪು ಬಣ್ಣದ ಬಿಕಿನಿ ತೊಟ್ಟು ಓಡಾಡಿದರೂ ಸುದ್ದಿಯಾಗಿದ್ದು ಮಾತ್ರ ಬೇರೆ ರೀತಿಯಲ್ಲಿ, ಅದು ಆಕೆ ಪ್ರತಿಭೆಯಿಂದ ಮಾತ್ರ ಎಂಬುದು ಗಮನಾರ್ಹ. ಕಡಲಿನಲ್ಲಿ ಒಮ್ಮೆಗೆ ಅಷ್ಟೊಂದು ಪುರುಷರನ್ನು ಈಕೆ ಹೇಗೆ ಸೋಲಿಸಿದಳು, ಆಕೆ ತೋರಿದ ಕಾಲ್ಚಳಕವಾದರೂ ಏನು? ಯಾರು ಆಕೆಯ ಮುಂದಿನ ಟಾರ್ಗೆಟ್ ? ಮುಂಬುದರ ಬಗ್ಗೆ ಮುಂದೆ ಓದಿ...

ಈಕೆ ಮಾಡಿದ ಸಾಧನೆ ಅಂತಿಂತದ್ದಲ್ಲ
ಬ್ರೆಜಿಲ್ ನ ಇಪಾನೇಮಾ ಬೀಚ್ ನಲ್ಲಿ ಬರೊಬ್ಬರಿ 800 ಪುರುಷರನ್ನು ಸೋಲಿಸಿದ್ದಾಳಂತೆ ಈ ಗಟ್ಟಿಗಿತ್ತಿ. ಅದು ಹೇಗೆ ಎಂಬುದ್ ಹುಬ್ಬೇರಿಸಬೇಡಿ. ಮುಖಗಂಟಿಕ್ಕಬೇಡಿ.ಆಕೆ ಅಷ್ಟೊಂದು ಸಂಖ್ಯೆಯ ಪುರುಷರನ್ನು ಸೋಲಿಸಿದ್ದು, ಫ್ರೀಸ್ಟೈಲ್ ಫುಟ್ಬಾಲ್ ನಲ್ಲಿ. ಫ್ರೀಸ್ಟೈಲ್ ಫುಟ್ಬಾಲ್ ನಲ್ಲಿ

ಯುವಕರು ಮಾತ್ರ ಕಂಗಾಲಾಗಿದ್ದಾರಂತೆ
ಆಕೆಯ ಆಹ್ವಾನವನ್ನು ಮನ್ನಿಸಿ ಆಕೆ ಬಳಿ ಚಾಲೆಂಜ್ ಸ್ವೀಕರಿಸುತ್ತಿದ್ದ ಯುವಕರು ಮಾತ್ರ ಕಂಗಾಲಾಗುತ್ತಿದ್ದಾರಂತೆ. ಆಕೆ ಸುಮ್ಮನೆ ಚಾಲೆಂಜ್ ಮಾಡುತ್ತಿಲ್ಲ. ನೀವು ಬಂದು ಆಡಿ ನೋಡಿ ಗೊತ್ತಾಗುತ್ತೆ ಎಂದು ಯುವಕರು ಸೋತ ಮುಖದಲ್ಲೇ ಆಕೆಯನ್ನು ಪ್ರಶಂಸಿಸುತ್ತಿದ್ದಾರೆ.

ಫುಟ್ಬಾಲ್ ಮಾಂತ್ರಿಕ ಮೆಸ್ಸಿಗೆ ಸವಾಲು
ಫುಟ್ಬಾಲ್ ಜಗತ್ತಿನ ಸರ್ವ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿಯೊಂದಿಗೆ ಆಡಬೇಕು ಎಂಬ ಹೆಬ್ಬಯಕೆ ನನಗಿದೆ, ಅರ್ಜೆಂಟೀನಾ ಮತ್ತು ಬಾರ್ಸಿಲೋನಾದ ಮಾಂತ್ರಿಕ ಮೆಸ್ಸಿಗೆ ನನ್ನ ಕೌಶಲ್ಯವನ್ನು ತೋರಿಸಬೇಕು. ಫ್ರೀಸ್ಟೈಲ್ ಫುಟ್ಬಾಲ್ ನಲ್ಲಿ ನನ್ನ ಚಾಲೆಂಜ್ ಮೆಸ್ಸಿ ಸ್ವೀಕರಿಸುತ್ತಾರಾ ನೋಡಬೇಕು ಎಂಬ ಕನಸಿದೆ ಎಂದು ರೂಪದರ್ಶಿಫಿಯೋರೆಲ್ಲಾ ಕಾಸ್ಟಿಲ್ಲೋ ಹೇಳಿದ್ದಾರೆ.
ರೂಪದರ್ಶಿ ಫಿಯೋರೆಲ್ಲಾ ಕಾಸ್ಟಿಲ್ಲೋ ಪ್ರತಿಭೆ
ರೂಪದರ್ಶಿ ಫಿಯೋರೆಲ್ಲಾ ಕಾಸ್ಟಿಲ್ಲೋ ಪ್ರತಿಭೆಯನ್ನು ಹೊರ ಹಾಕಿರುವ ವಿಡಿಯೋ ಇಲ್ಲಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications