Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA WC: ಸ್ಪೇನ್‌, ಫ್ರಾನ್ಸ್‌ ಫೈನಲ್‌ಗಾಗಿ ಫೈಟ್‌: ಬೆಂಗಳೂರಿನ ಅಭಿಮಾನಿಗಳಿಗೆ ವಿಶೇಷ ವ್ಯವಸ್ಥೆ

ಫಿಫಾ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯಗಳು ಬುಧವಾರ ರಾತ್ರಿ ನಡೆಯುತ್ತಿದೆ. ಆರ್ಲಿಂಗ್ಟನ್‌ನಲ್ಲಿನ ಡಲ್ಲಾಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಠ ಫ್ರಾನ್ಸ್‌ ಹಾಗೂ ಸ್ಪೇನ್‌ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಎಲ್ಲರ ಚಿತ್ತ ನೆಟ್ಟಿದೆ.

ಈಗಾಗಲೇ ಈ ತಂಡಗಳು 38 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಈ ವೇಳೆ ಸ್ಪೇನ್‌ 18 ಜಯ, ಫ್ರಾನ್ಸ್‌ 13 ಗೆಲುವು ಸಾಧಿಸಿದೆ. ಇನ್ನು ಉಳಿದ 7 ಪಂದ್ಯಗಳು ಡ್ರಾದಲ್ಲಿ ಅಂತ್ಯವಾಗಿವೆ. ಸ್ಪೇನ್‌ 2010ರ ಬಳಿಕ ಫೈನಲ್‌ ತಲುಪುವಲ್ಲಿ ವಿಫಲವಾಗಿದೆ. ಹೀಗಾಗಿ ಸ್ಪೇನ್‌ ಎರಡನೇ ಪ್ರಶಸ್ತಿಗೆ ಹತ್ತಿರವಾಗಲು ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಫ್ರಾನ್ಸ್ ತಂಡ ಐದನೇ ಬಾರಿಗೆ ಫಿಫಾ ವಿಶ್ವಕಪ್‌ ಫೈನಲ್‌ಗೆ ಅರ್ಹತೆ ಪಡೆಯುವ ಕನಸು ಕಾಣುತ್ತಿದೆ.

FIFA WC

ಸ್ಪೇನ್‌ ತಂಡದಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ. ಈ ವಿಶ್ವಕಪ್‌ನಲ್ಲಿ ಈ ಆಟಗಾರರು ಸ್ಥಿರ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದ್ದಾರೆ. ಸ್ಪೇನ್‌ ತಂಡದ ಪರ ಮೈಕೆಲ್ ಒಯರ್ಜಾಬಲ್ ಈ ವಿಶ್ವಕಪ್‌ನಲ್ಲಿ ನಾಲ್ಕು ಗೋಲು ಬಾರಿಸಿ ಮಿಂಚಿದ್ದಾರೆ. ಸ್ಪೇನ್ ತಂಡದ ಉನೈ ಸೈಮನ್ ಈ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಇವರು ಒಟ್ಟಾರೆ 10 ಗೋಲುಗಳನ್ನು ಈ ಟೂರ್ನಿಯಲ್ಲಿ ಸೇವ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Fifa World Cup 2026: ಅರ್ಜೆಂಟೀನಾ ಸೆಮಿಫೈನಲ್‌ಗೆ ಲಗ್ಗೆ, ಇಂಗ್ಲೆಂಡ್‌ ವಿರುದ್ಧ ಫೈಟ್‌

Fifa World Cup 2026: ಅರ್ಜೆಂಟೀನಾ ಸೆಮಿಫೈನಲ್‌ಗೆ ಲಗ್ಗೆ, ಇಂಗ್ಲೆಂಡ್‌ ವಿರುದ್ಧ ಫೈಟ್‌

ಫ್ರಾನ್ಸ್ ತಂಡದ ಪರ ನಾಯಕ ಕೈಲಿಯನ್ ಎಂಬಪ್ಪೆ ಸಹ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಈ ಮೆಗಾ ಟೂರ್ನಿಯಲ್ಲಿ 8 ಗೋಲುಗಳನ್ನು ಬಾರಿಸಿದ್ದು, ಗೋಲ್ಡನ್‌ ಬೂಟ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರಿಗೆ ಔಸ್ಮಾನೆ ಡೆಂಬೆಲೆ (5 ಗೋಲು), ಬ್ರಾಡ್ಲಿ ಬಾರ್ಕೋಲಾ ಗೋಲು ಬಾರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಹೀಗಾಗಿ ಪಂದ್ಯ ಕುತೂಹಲ ಮೂಡಿಸಿದೆ.

ಈ ಪಂದ್ಯವಾಳಿಯಲ್ಲಿ ಅಮೋಘ ಪ್ರದರ್ಶನ ನೀಡಿದೆ. ಈ ವರೆಗೆ ಈ ಟೂರ್ನಿಯಲ್ಲಿ ಸ್ಪೇನ್‌ 27 ಗೋಲುಗಳನ್ನು ಬಾರಿಸಿದ್ದು, ಕೇವಲ ನಾಲ್ಕು ಗೋಲು ಬಿಟ್ಟುಕೊಟ್ಟಿದೆ.

ಅಭಿಮಾನಿಗಳಿಗೆ ವಿಶೇಷ ವ್ಯವಸ್ಥೆ

ಬುಧವಾರ ತಡರಾತ್ರಿ ಫಿಫಾ ವಿಶ್ವಕಪ್‌ ಸೆಮಿಫೈನಲ್‌ ನಡೆಯಲಿದೆ. ಈ ಪಂದ್ಯವನ್ನು ವೀಕ್ಷಿಸುವ ಸಂಖ್ಯೆ ಬೆಂಗಳೂರಿನಲ್ಲೂ ಹೆಚ್ಚಿದೆ. ಹೀಗಾಗಿ ಭಾರತದ ರಾಷ್ಟ್ರೀಯ ರೆಸ್ಟೋರೆಂಟ್‌ ಸಂಘಟದ ಕೋರಿಕೆಯ ಮೇರೆಗೆ ಆಹಾರ ಸೇವೆಯನ್ನು ವಿಸ್ತರಿಸಲು ಕರ್ನಾಟಕ ರಾಜ್ಯ ಸರ್ಕಾರ ಅನಮತಿ ನೀಡಿದೆ ಎಂದು ಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.

Rohit Sharma: ಇಂಗ್ಲೆಂಡ್‌ ವಿರುದ್ದ ಐದು ದಾಖಲೆ ಮೇಲೆ ಹಿಟ್‌ಮ್ಯಾನ್‌ ಕಣ್ಣು

Rohit Sharma: ಇಂಗ್ಲೆಂಡ್‌ ವಿರುದ್ದ ಐದು ದಾಖಲೆ ಮೇಲೆ ಹಿಟ್‌ಮ್ಯಾನ್‌ ಕಣ್ಣು

ಫಿಫಾ ವಿಶ್ವಕಪ್‌ ಸೆಮಿಫೈನಲ್‌ ನೋಡುವುದು ಎಲ್ಲಿ?

ಭಾರತದಲ್ಲಿ ಫಿಫಾ ವಿಶ್ವಕಪ್‌ ಸೆಮಿಫೈನಲ್ ಪಂದ್ಯವನ್ನು ಜಿನಲ್ಲಿ ನೋಡಬಹದು. ಅಲ್ಲದೆ ಜಿ5 ಆಪ್‌ನಲ್ಲೂ ವೀಕ್ಷಿಸಬಹುದು. ಅಲ್ಲದೆ ಉಚಿತವಾಗಿ ಈ ಪಂದ್ಯವನ್ನು ಡಿಡಿ ಸ್ಪೋರ್ಟ್ಸ್‌ನಲ್ಲಿ ಉಚಿತವಾಗಿ ನೋಡಬಹುದು.

ಫ್ರಾನ್ಸ್‌, ಸ್ಪೇನ್‌ ಪಂದ್ಯ ಪ್ರಾರಂಭವಾಗುವುದು ಯಾವಾಗ?

ಮೊದಲ ಸೆಮಿಫೈನಲ್‌ ಪಂದ್ಯ ಬುಧವಾರ ತಡರಾತ್ರಿ 12.30ಕ್ಕೆ ನಡೆಯಲಿದೆ.

Story first published: Tuesday, July 14, 2026, 17:07 [IST]
Other articles published on Jul 14, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+