ಫೀಫಾ ವಿಶ್ವಕಪ್ ಫೈನಲ್: ಮೋದಿಗೆ ಆಹ್ವಾನ
ಬೆಂಗಳೂರು, ಜೂ.16: ಬ್ರೆಜಿಲ್ಲಿನಲ್ಲಿ ನಡೆದಿರುವ ಫೀಫಾ ವಿಶ್ವಕಪ್ 2014ರ ಅಂತಿಮ ಹಣಾಹಣಿ ವೀಕ್ಷಿಸಲು ರಿಯೋಗೆ ಬರುವಂತೆ ಬ್ರೆಜಿಲ್ ಅಧ್ಯಕ್ಷೆ ದಿಲ್ಮಾ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ಕಳಿಸಿದ್ದಾರೆ.
ಬ್ರೆಜಿಲ್ಲಿನ ಅಧ್ಯಕ್ಷೆ ದಿಲ್ಮಾ ವಾನಾ ರೂಸೆಫ್ ಅವರು ಜುಲೈ 13 ರಂದು ರಿಯೋ ಡಿ ಜನೈರೋದ ಎಸ್ಟಾಡಿಯೋ ಮರಕಾನ ಸ್ಟೇಡಿಯಂನಲ್ಲಿ ನಡೆಯುವ ಫೀಫಾ ವಿಶ್ವಕಪ್ ಫೈನಲ್ ಪಂದ್ಯ ನೋಡಲು ಆಗಮಿಸುವಂತೆ ಭಾರತದ ಪ್ರಧಾನಿ ಮೋದಿ ಅವರಿಗೆ ಪತ್ರ ಕಳಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ.
ಒಂದು ವೇಳೆ ಮೋದಿ ಅವರು ಈ ಪಂದ್ಯ ವೀಕ್ಷಣೆಗೆ ತೆರಳಿದರೆ, ಮೋದಿ ಅವರ ಜತೆಗೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕಬ್ ಜೂಮಾ ಅವರ ಜತೆಗೂಡಲಿದ್ದಾರೆ. ಫೀಫಾ ವಿಶ್ವಕಪ್ ಪಂದ್ಯಾವಳಿ ಮುಗಿಯುತ್ತಿದ್ದಂತೆ BRICS ಶೃಂಗಸಭೆ ಆರಂಭಗೊಳ್ಳಲಿದ್ದು ಜುಲೈ 15 ಹಾಗೂ 17 ರಂದು ಫೊರ್ಟಾಲೆಜಾದಲ್ಲಿ ನಡೆಯಲಿದೆ.[ಫೀಫಾ ವಿಶ್ವಕಪ್ 2014 ಟೂರ್ ಗೈಡ್]
BRICS? : ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ಸೌಥ್ ಆಫ್ರಿಕಾ ದೇಶಗಳ ಒಕ್ಕೂಟದ ಸಭೆ ಇದಾಗಿದೆ. ಈ ಸಭೆಗೂ ಮುನ್ನ ಜಾಗತಿಕ ಕ್ರೀಡಕೂಟ ವಿಶ್ವಕಪ್ ವೀಕ್ಷಣೆಗೆ ಈ ಎಲ್ಲಾ ದೇಶಗಳ ನಾಯಕರಿಗೂ ಆಹ್ವಾನ ಕಳಿಸಲಾಗಿದೆ. ಮೋದಿ ಅವರು ಫೈನಲ್ ಪಂದ್ಯ ವೀಕ್ಷಿಸಲು ತೆರಳುವ ಬಗ್ಗೆ ಇನ್ನು ಸ್ಪಷ್ಟನೆ ಸಿಕ್ಕಿಲ್ಲ. [ಸಾಂಬಾ ನಾಡಲ್ಲಿ ವಿಶ್ವಕಪ್ ಸಮರ ಸಂಭ್ರಮ]
ಫೀಫಾ ವಿಶ್ವಕಪ್ ಟೂರ್ನಿಯಿಂದಾಗಿ ಮಾರ್ಚ್ ತಿಂಗಳಿನಲ್ಲಿ ನಡೆಯಬೇಕಿದ್ದ ಬ್ರಿಕ್ಸ್ ಸಭೆ ಜುಲೈಗೆ ಮುಂದೂಡಲ್ಪಟ್ಟಿತ್ತು. ಇತ್ತೀಚೆಗೆ ವಿಶ್ವಕಪ್ ಸ್ಮರಣಿಕೆ ಅಂಚೆ ಚೀಟಿ ಬಿಡುಗಡೆ ಮಾಡಿದ್ದ ಪ್ರಧಾನಿ ಮೋದಿ ಅವರು ಫುಟ್ಬಾಲ್ ವಿಶ್ವಕಪ್ ಟೂರ್ನಿ ಮೂಲಕ ದೇಶಗಳ ನಡುವೆ ಬಾಂಧವ್ಯ ಹೆಚ್ಚಲಿದೆ ಎಂದಿದ್ದರು.

ಭಾರತದಲ್ಲಿ ಕ್ರಿಕೆಟ್ ಜನಪ್ರಿಯ ಕ್ರೀಡೆಯಾಗಿದ್ದು, ಫೀಫಾ ಶ್ರೇಯಾಂಕದಲ್ಲಿ ಭಾರತದ ಫುಟ್ಬಾಲ್ ತಂಡ 154ನೇ ಶ್ರೇಯಾಂಕದಲ್ಲಿದೆ. 1950ರಲ್ಲಿ ವಿಶ್ವಕಪ್ ಆಡುವ ಅರ್ಹತೆ ಪಡೆದರೂ ಆಡಲು ತೆರಳಿರಲಿಲ್ಲ. ಬ್ರಿಕ್ಸ್ ಪಟ್ಟಿಯಲ್ಲಿರುವ ದಕ್ಷಿಣ ಆಫ್ರಿಕಾ 2010, ಬ್ರೆಜಿಲ್ 1950, 2014, ರಷ್ಯಾ 2018ರಲ್ಲಿ ವಿಶ್ವಕಪ್ ಆಯೋಜನೆ ಆತಿಥ್ಯ ಪಡೆದಿವೆ. [ಫೀಫಾ ವಿಶ್ವಕಪ್ 2014 ಸಮಗ್ರ ಸುದ್ದಿ]
ಮಹತ್ವದ ಸಭೆ : ವಿವಿಧ ದೇಶಗಳ ಜತೆ ಮೋದಿ ಅವರ ಮೊದಲ ಸಭೆ ಇದಾಗಲಿದ್ದು, ಭೂತಾನ್ ನಿಂದ ಭಾರತಕ್ಕೆ ಹಿಂತಿರುಗಿದ ಮೇಲೆ ಜುಲೈ 3-4 ರಂದು ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ನಡುವೆ ನೇಪಾಳಕ್ಕೂ ತೆರಳುವ ಸಾಧ್ಯತೆಯಿದೆ. ನಂತರ ಬ್ರೆಜಿಲ್ ಗೆ ಆಗಮಿಸಲಿದ್ದಾರೆ. ಚೀನಾದ ಅಧ್ಯಕ್ಷರೊಡನೆ ಮೊದಲ ಬಾರಿಗೆ ಮೋದಿ ಭೇಟಿ ಮಾಡಲಿದ್ದಾರೆ. ಬಂಡವಾಳ ಹೂಡಿಕೆ, ದ್ವಿಪಕ್ಷೀಯ ಮಾತುಕತೆಗೆ ಈ ಸಭೆ ವೇದಿಕೆ ಒದಗಿಸಲಿದೆ.
ಬ್ರಿಕ್ಸ್ ರಾಷ್ಟ್ರದ ಮುಖ್ಯಸ್ಥರಲ್ಲದೆ, ಅರ್ಜೆಂಟೀನಾದ ಅಧ್ಯಕ್ಷೆ ಕ್ರಿಸ್ಟೀನಾ ಕಿರ್ಚ್ನೆರ್, ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್, ಕತಾರ್ ನ ಎಮಿರ್,ಮೊನಾಕೋದ ಪ್ರಿನ್ಸ್ ಆಲ್ಬರ್ಟ್, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು ಸಭೆಯಲ್ಲಿ ಭಾಗವಹಿಸಲಿದ್ದು, ಭಾರತದ ಪಾಲಿಗೆ ಮಹತ್ವದ ಸಭೆ ಎನಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications