Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫ್ರೆಂಚರನ್ನು ಬಗ್ಗುಬಡಿದು ಉಪಾಂತ್ಯಕ್ಕೆ ಜರ್ಮನ್ನರು ಎಂಟ್ರಿ

ರಿಯೊ ಡಿ ಜನೈರೊ, ಜು.5 : ಮ್ಯಾಟ್ಸ್‌ ಹಮೆಲ್ಸ್‌ ಹೊಡೆದ ಆಕರ್ಷಕ ಗೋಲು, ಗೋಲ್ ಕೀಪರ್ ನುಯೆರ್ ಅದ್ಭುತ ಸೇವ್ ಗಳ ಮೂಲಕ ಜರ್ಮನ್ನರು ಫೀಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್‍ ಫೈನಲ್ ಪಂದ್ಯದಲ್ಲಿ ಫ್ರಾನ್ಸ್‌ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಮರಕಾನಾ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ರೋಚಕ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಏಕೈಕ ಗೋಲಿನಿಂದ ಸೋಲಿಸಿದ ಜರ್ಮನ್ನರಿಗೆ ಆಸರೆಯಾಗಿದ್ದು ಗೋಲಿ ನುಯೆರ್. ಪಂದ್ಯದ ದ್ವಿತೀಯಾರ್ಧದಲ್ಲಿ ಫ್ರೆಂಚರ ಡಜನ್ ಗಟ್ಟಲೆ ದಾಳಿಯನ್ನು ಸಮರ್ಥವಾಗಿ ತಡೆದ ನುಯೆರ್ ಫ್ರಾನ್ಸ್ ತಂಡ ಗೋಲು ಗಳಿಸುವ ಅವಕಾಶವನ್ನು ತಡೆದರು.

ಪಶ್ಚಿಮ ಯೂರೋಪಿನ ಡರ್ಬಿಯಲ್ಲಿ ಜರ್ಮನ್ನರು ಹೆಚ್ಚು ಆಕ್ರಮ ಣಕಾರಿ ಆಟ ತೋರಿದ್ದು ಫಲ ನೀಡಿತು, ಫ್ರಾನ್ಸ್ ತಂಡ ಮೊದಲಾರ್ಧದಲ್ಲಿ ಗೋಲು ಗಳಿಕೆಯ ಉತ್ಸಾಹ, ಆತುರ ತೋರದಿದ್ದದ್ದು ಮುಳುವಾಯಿತು.

ಆರಂಭದ ಐದು ನಿಮಿಷಗಳಲ್ಲಿ ಜರ್ಮನಿ ಆಟಗಾರರು ಚೆಂಡಿನ ಮೇಲೆ ಪೂರ್ಣ ನಿಯಂತ್ರಣ ಸಾಧಿಸಿದ್ದರು. ಫ್ರಾನ್ಸ್‌ ತಂಡದ ಗೋಲು ಗಳಿಸುವ ಮೊದಲ ಉತ್ತಮ ಪ್ರಯತ್ನ ಏಳನೇ ನಿಮಿಷದಲ್ಲಿ ಕಂಡುಬಂತು. ಆದರೆ ಕರಿಮ್‌ ಬೆಂಜೆಮಾ ಮತ್ತು ಮ್ಯಾಥ್ಯೂ ವಲ್ಬುಯೆನಾ ನಡೆಸಿದ ಪ್ರಯತ್ನ ವಿಫಲವಾಯಿತು. ಮುಂದೆ ನಿರೀಕ್ಷಿಸಿ ಓದಿ...

ಆರಂಭಿಕ ಮುನ್ನಡೆ ಪಡೆದ ಜರ್ಮನ್ನರು

ಆರಂಭಿಕ ಮುನ್ನಡೆ ಪಡೆದ ಜರ್ಮನ್ನರು

ಪಂದ್ಯದ 13ನೇ ನಿಮಿಷದಲ್ಲಿ ಜರ್ಮನಿ ಮುನ್ನಡೆ ಗಳಿಸಿತು. ಟೋನಿ ಕ್ರೂಸ್‌ ಫ್ರೀ ಕಿಕ್‌ನಲ್ಲಿ ನಿಖರವಾಗಿ ಒದ್ದ ಚೆಂಡನ್ನು ಮ್ಯಾಟ್ಸ್‌ ಹಮೆಲ್ಸ್‌ ಹೆಡ್‌ ಮಾಡಿ ಗೋಲು ಬಾರಿಸಿದರು. ಫ್ರಾನ್ಸ್ ಗೋಲ್‌ಕೀಪರ್‌ ಹ್ಯೂಗೊ ಲಾರಿಸ್‌ ಮೇಲಕ್ಕೆ ನೆಗೆದರೂ ಚೆಂಡು ಗುರಿ ಸೇರಿತು.

ಹಿನ್ನೆಡೆಯಿಂದ ಫ್ರಾನ್ಸ್ ಕಂಗಾಲು

ಹಿನ್ನೆಡೆಯಿಂದ ಫ್ರಾನ್ಸ್ ಕಂಗಾಲು

ಫ್ರಾನ್ಸ್‌ ತಾನಾಡಿದ ಕಳೆದ 20 ಪಂದ್ಯಗಳಲ್ಲಿ 19ರಲ್ಲೂ ಮೊದಲ ಅವಧಿಯಲ್ಲಿ ಎದುರಾಳಿಗೆ ಗೋಲು ಬಿಟ್ಟುಕೊಟ್ಟಿರಲಿಲ್ಲ. ಆದರೆ ಜರ್ಮನಿಗೆ ಆರಂಭದಲ್ಲೇ ಗೋಲು ಬಿಟ್ಟುಕೊಟ್ಟು ನಿರಾಸೆ ಅನುಭವಿಸಿತು. ಲೀಗ್ ಹಂತದಲ್ಲಿ ಫ್ರಾನ್ಸ್ ಆರಂಭಿಕ ಮುನ್ನಡೆ ಹೆಚ್ಚಿನ ಗೋಲು ಗಳಿಕೆ ಮೂಲಕ ಗಮನ ಸೆಳೆದಿತ್ತು. ಆದರೆ, ಈ ಪಂದ್ಯದಲ್ಲಿ ಜರ್ಮನ್ನರ ಮುಂದೆ ಮಂಕಾದರು.

ಉತ್ತಮ ಅವಕಾಶ ಕಳೆದು ಕೊಂಡ ಫ್ರಾನ್ಸ್

ಉತ್ತಮ ಅವಕಾಶ ಕಳೆದು ಕೊಂಡ ಫ್ರಾನ್ಸ್

ಫ್ರಾನ್ಸ್‌ ಸಮಬಲದ ಗೋಲಿಗಾಗಿ ಸತತ ಪ್ರಯತ್ನ ನಡೆಸಿ ಪದೇ ಪದೇ ದಾಳಿ ನಡೆಸಿತು. ಮೇಲಿಂದ ಮೇಲೆ ಪ್ರಯತ್ನಿಸಿದ ಕಾರಣ ಪಂದ್ಯದ ಕಾವು ಹೆಚ್ಚಿತು. 34ನೇ ನಿಮಿಷ ದಲ್ಲಿ ಫ್ರಾನ್ಸ್‌ಗೆ ಸಮಬಲದ ಗೋಲು ಗಳಿಸುವ ಸೊಗಸಾದ ಅವಕಾಶ ಲಭಿಸಿತ್ತು. ಆದರೆ, ಗೋಲು ಗಳಿಸುವಲ್ಲಿ ವಿಫಲವಾಯಿತು.

ಗೋಲು ಗಳಿಸಲು ವಿಫಲರಾದ ಬೆಂಜೆಮಾ

ಗೋಲು ಗಳಿಸಲು ವಿಫಲರಾದ ಬೆಂಜೆಮಾ

ಗ್ರಿಜ್‌ಮನ್‌ ನೀಡಿದ ಪಾಸ್‌ನಲ್ಲಿ ವಲ್ಬುಯೆನಾ ಚೆಂಡನ್ನು ಗುರಿಯತ್ತ ಒದ್ದರು. ಜರ್ಮನಿ ಗೋಲ್‌ಕೀಪರ್‌ ಮ್ಯಾನುಯೆಲ್‌ ನುಯೆರ್‌ ತಮ್ಮ ಎಡಭಾಗಕ್ಕೆ ನೆಗೆದು ಆಕರ್ಷವಾಗಿ ತಡೆದರು. ರಿಬೌಂಡ್‌ ಆಗಿ ಬಂದ ಚೆಂಡನ್ನು ಮತ್ತೆ ಗೋಲು ಬಾರಿಸಲು ಬೆಂಜೆಮಾ ವಿಫಲರಾದರು.

ಮತ್ತೆ ತಡೆಗೋಡೆಯಾದ ಮ್ಯಾನುಯೆಲ್ ನುಯೆರ್

ಮತ್ತೆ ತಡೆಗೋಡೆಯಾದ ಮ್ಯಾನುಯೆಲ್ ನುಯೆರ್

44ನೇ ನಿಮಿಷದಲ್ಲಿ ಬೆಂಜೆಮಾ ನಡೆಸಿದ ಪ್ರಯತ್ನಕ್ಕೆ ಫಲ ಕಾಣಲಿಲ್ಲ. ಪಾಲ್‌ ಪೋಗ್ಬಾ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದು ಅಂಗಳದ ಎಡಭಾಗದಿಂದ ನುಗ್ಗಿದ ಬೆಂಜೆಮಾ ಇಬ್ಬರು ಡಿಫೆಂಡರ್‌ಗಳನ್ನು ತಪ್ಪಿಸಲು ಯಶಸ್ವಿಯಾದರು. ಆದರೆ ಗೋಲ್‌ಕೀಪರ್‌ ನುಯೆರ್‌ ಅವರನ್ನು ವಂಚಿಸಲು ವಿಫಲರಾದರು. ಪಂದ್ಯದ ಮೊದಲ ಅವಧಿ ಕೊನೆಗೊಂಡಾಗ ಜರ್ಮನಿ ಗೋಲಿನ ಮುನ್ನಡೆ ಪಡೆದು ಗೆಲುವು ಸಾಧಿಸಿತು.

ವಿಶ್ವಕಪ್ ನಲ್ಲಿ ಜರ್ಮನಿ ಭರ್ಜರಿ ಸಾಧನೆ

ವಿಶ್ವಕಪ್ ನಲ್ಲಿ ಜರ್ಮನಿ ಭರ್ಜರಿ ಸಾಧನೆ

ವಿಶ್ವಕಪ್ ನಲ್ಲಿ ಒಟ್ಟಾರೆ 13 ನೇ ಬಾರಿ ಹಾಗೂ 2002ರಿಂದ ಸತತ ನಾಲ್ಕನೇ ಬಾರಿ ಜರ್ಮನಿ ತಂಡ ಸೆಮಿಸ್ ಪ್ರವೇಶಿಸಿದೆ. ಜು.8 ರಂದು ಬ್ರೆಜಿಲ್ ತಂಡವನ್ನು ಎದುರಿಸಲಿದೆ.

Story first published: Wednesday, January 3, 2018, 10:13 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+