Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜಪಾನನ್ನು 3-2ರಿಂದ ಸೋಲಿಸಿದ ಬೆಲ್ಜಿಯಂ ಕ್ವಾರ್ಟರ್ ಫೈನಲ್ ಗೆ

FIFA World Cup 2018: Belgium beat Japan 3-2 to enter quarters

ಮಾಸ್ಕೋ, ಜು. 3: ರಷ್ಯಾದ ರಾಸ್ಟೊವ್ ಅರೆನಾದಲ್ಲಿ ನಡೆದ ಬೆಲ್ಜಿಯಂ-ಜಪಾನ್ ಮುಖಾಮುಖಿಯಲ್ಲಿ ಬೆಲ್ಜಿಯಂ 3-2 ಅಂತರದ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದೆ. ಪಂದ್ಯದ ದ್ವಿತೀಯಾರ್ಧದಲ್ಲಿ ಸಿಡಿಸಿದ ಮೂರು ಗೋಲ್ ಗಳ ನೆರವಿನೊಂದಿಗೆ ಬೆಲ್ಜಿಯಂ ಗೆಲುವನ್ನಾಚರಿಸಿತು.

ಪಂದ್ಯದ ಸ್ಕೋರ್ ಕಾರ್ಡ್

ಪಂದ್ಯದ ದ್ವಿತೀಯಾರ್ಧದಲ್ಲಿ ಮೊದಲೆರಡು ಗೋಲ್ ಜಪಾನ್ ದಾಖಲಿಸಿತು. ಜಪಾನ್ ನ ಗೆಂಕಿ ಹರಗುಚಿ ಅವರು 48ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡದ ಖಾತೆ ತೆರೆದರು. ಅದಾಗಿ 52ನೇ ನಿಮಿಷದಲ್ಲಿ ಟಕಾಶಿ ಇನೂಯಿ ಅವರಿಂದ ಮತ್ತೊಂದು ಗೋಲ್ ದಾಖಲಾಯಿತು.

ಜಪಾನ್ ನಿಂದ ಎರಡು ಗೋಲ್ ದಾಖಲಾದ ಸ್ವಲ್ಪ ಹೊತ್ತಿನ ಬಳಿಕ ಅಂದರೆ 69ನೇ ನಿಮಿಷದಲ್ಲಿ ಬೆಲ್ಜಿಯಂ ಮೊದಲ ಗೋಲ್ ಬಾರಿಸಿತು. ಬೆಲ್ಜಿಯಂನ ಜೇನ್ ವೆರ್ಟೋಗೆನ್ ಅವರು ತಂಡಕ್ಕೆ 1-2ರ ಮುನ್ನಡೆ ಕೊಟ್ಟರು. 74ನೇ ನಿಮಿಷದಲ್ಲಿ ಮರೌನ್ ಫೆಲ್ಲೈನಿ ಅವರಿಂದ ಮತ್ತೊಂದು ಗೋಲ್ ದಾಖಲಾಯಿತು. ಪಂದ್ಯದ ಕೊನೇ ಕ್ಷಣದಲ್ಲಿ (94ನೇ ನಿಮಿಷದಲ್ಲಿ) ನೇಸರ್ ಚಾಂಡ್ಲ್ ತಂಡದ ಪರ ಮೂರನೇ ಗೋಲ್ ಬಾರಿಸಿ ಬೆಲ್ಜಿಯಂ ಗೆಲ್ಲಿಸಿದರು.

ಪಂದ್ಯದ ಮೊದಲಾರ್ಧದ 40ನೇ ನಿಮಿಷದಲ್ಲಿ ಜಪಾನ್ ನ ಗಾಕು ಶಿಬಾಸಕಿ ವಿರುದ್ಧ ಯೆಲ್ಲೋ ಕಾರ್ಡ್ ಪ್ರದರ್ಶಿಸಲ್ಪಟ್ಟಿತು. ಇತ್ತಂಡಗಳು ಎರಡೆರಡುಸಾರಿ ತಮ್ಮ ಆಟಗಾರರನ್ನು ಬದಲಿಸಿಕೊಂಡವು.

Story first published: Tuesday, July 3, 2018, 2:40 [IST]
Other articles published on Jul 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+