ಫೀಫಾ 2018: ಇಂಗ್ಲೆಂಡ್ ಸೋಲಿಸಿದ ಬೆಲ್ಜಿಯಂಗೆ ಜಪಾನ್ ಮುಂದಿನ ಗುರಿ

ಕಾಲಿಂಗ್ರಾಡ್, ಜೂನ್ 28: ಗರೇತ್ ಸೌಥ್ ಗೇಟ್ ಅವರ ಮಾರ್ಗದರ್ಶನದಲ್ಲಿ, ಹ್ಯಾರಿ ಕೇನ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಜಿ ಗುಂಪಿನ ಅಗ್ರಸ್ಥಾನಕ್ಕಾಗಿ ಇಂಗ್ಲೆಂಡ್ ಹಾಗೂ ಬೆಲ್ಜಿಯಂ ನಡುವೆ ಪೈಪೋಟಿ ನಡೆದಿದೆ. ಎರಡು ತಂಡಗಳು ಈಗಾಗಲೇ 16ರ ಹಂತಕ್ಕೆ ಅರ್ಹತೆ ಪಡೆದುಕೊಂಡಿವೆ.
ಲೈವ್ ಸ್ಕೋರ್, ಕಾಮೆಂಟ್ರಿ | ಅಂಕಪಟ್ಟಿ
ಪಂದ್ಯದ ಮೊದಲಾರ್ಧದಲ್ಲಿ ಬೆಲ್ಜಿಯಂನ ಟಿಲಾಮನಾಸ್, ಡೆನ್ಡೋಕರ್ ಗೆ ಹಳದಿ ಕಾರ್ಡ್ ಸಿಕ್ಕಿತು. ಉಭಯ ತಂಡಗಳು ನಾಲ್ಕು ಬಾರಿ ಗೋಲು ಬಾರಿಸುವ ಅವಕಾಶ ಪಡೆದರೂ ಗೋಲು ಗಳಿಸಲು ವಿಫಲವಾದವು. 51ನೇ ನಿಮಿಷದಲ್ಲಿ ಅದ್ನಾನ್ ಜನುಜಾ ಅವರು ಸೂಪರ್ ಕಿಕ್ ತೆಗೆದುಕೊಂಡು ಬೆಲ್ಜಿಯಂಗೆ ಮುನ್ನಡೆ ತಂಡು ಕೊಟ್ಟರು. ಈ ಪಂದ್ಯ ಗೆದ್ದು ಬೆಲ್ಜಿಯಂ ಜಿ ಗುಂಪಿನಲ್ಲಿ 9 ಅಂಕ ಗಳಿಸಿ ಅಗ್ರಸ್ಥಾನ ಗಳಿಸಿತು.
ಟುನಿಷಿಯಾ ಹಾಗೂ ಪನಾಮಾ ವಿರುದ್ಧ ಗೆದ್ದಿರುವ ಮೂರು ಸಿಂಹಗಳ ತಂಡ ಇಂಗ್ಲೆಂಡ್ ಹಾಗೂ ರೆಡ್ ಡೆವಿಲ್ಸ್ ಬೆಲ್ಜಿಯಂ ತಲಾ 6 ಅಂಕಗಳೊಂದಿಗೆ 8 ಪರ 2 ವಿರುದ್ಧ ಗೋಲು ಹೊಂದಿವೆ.
ಒಂದು ವೇಳೆ ಈ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡರೆ ಫೇರ್ ಪ್ಲೇ ಆಧಾರದ ಮೇಲೆ ಗುಂಪಿನ ಅಗ್ರಸ್ಥಾನಿಯನ್ನು ಆಯ್ಕೆ ಮಾಡಲಾಗುತ್ತದೆ.

ಜಿ ಗುಂಪಿನ ವಿಜೇತರು ಜಪಾನ್ ವಿರುದ್ಧ ಆಡಲಿದ್ದು, ಗುಂಪಿನ ರನ್ನರ್ ಅಪ್ ವಿರುದ್ಧ ಕೊಲಂಬಿಯಾ ಸೆಣಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+

Click it and Unblock the Notifications