ಆರ್ಜೆಂಟೀನಾಗೆ ಸೋಲು, ಕೇರಳದ ಹುಡ್ಗನಿಂದ ಸೂಸೈಡ್ ನೋಟ್!


ಕೊಟ್ಟಾಯಂ, ಜೂನ್ 22: ಫೀಫಾ ವಿಶ್ವಕಪ್ 2018ರ ನೆಚ್ಚಿನ ತಂಡ ಆರ್ಜೆಂಟೀನಾಕ್ಕೆ ಹೀನಾಯ ಉಂಟಾಗಿದ್ದನ್ನು ಸಹಿಸಿಕೊಳ್ಳಲು ಆಗದ ಕೇರಳದ ಅಭಿಮಾನಿಯೊಬ್ಬ ಸೂಸೈಡ್ ನೋಟ್ ಬರೆದಿಟ್ಟು ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಅರ್ಜೆಂಟೀನಾ ವಿರುದ್ಧ ಕ್ರೋವೇಷಿಯಾ ತಂಡ 3-0 ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತು. ಸ್ಥಳೀಯ ಮಾಧ್ಯಮಗಳ ವರದಿಯಂತೆ ಕೊಟ್ಟಾಯಂ ಜಿಲ್ಲೆಯ ಡಿನು ಅಲೆಕ್ಸ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಕೇರಳದಲ್ಲಿ ಅರ್ಜೆಂಟೀನಾ ತಂಡಕ್ಕೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಬ್ರೆಜಿಲ್ ಹಾಗೂ ಆರ್ಜೆಂಟೀನಾ ತಂಡಕ್ಕೆ ಭಾರತದಲ್ಲಿ ಅಪಾರ ಫ್ಯಾನ್ಸ್ ಇದ್ದಾರೆ.
ಪೊಲೀಸರ ಮಾಹಿತಿಯಂತೆ, ಡಿನು ಅವರು ಸಮೀಪದ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಶೋಧ ಕಾರ್ಯ ಮುಂದುವರೆದಿದೆ.
ಮಲೆಯಾಳಂನಲ್ಲಿ ಬರೆದಿರುವ ಆತ್ಮಹತ್ಯಾ ಪತ್ರದಲ್ಲಿ 'ನಾನು ನೋಡಬೇಕಾದ್ದೆಲ್ಲ ನೋಡಿದ್ದೇನೆ. ಬೇರೆ ಏನಾದರೂ ನೋಡಲು ಬಾಕಿ ಇದೆಯೆ? ನಾನು ಆಳಕ್ಕೆ ಧುಮುಕುತ್ತಿದ್ದೇನೆ ಎಂದು ಬರೆದಿದ್ದಾರೆ.
ಅರ್ಜೆಂಟೀನಾದ ಬಹುದೊಡ್ಡ ಫ್ಯಾನ್ ಆಗಿದ್ದ ಡಿನು, ಅರ್ಜೆಂಟೀನಾ ತಂಡದ ಸೋಲಿನಿಂದ ಕಂಗೆಟ್ಟಿದ್ದ. ಸ್ನೇಹಿತರು ಈ ವಿಷಯವಾಗಿ ಗೇಲಿ ಮಾಡಬಹುದು ಎಂಬ ಭಯದಿಂದ ಈ ರೀತಿ ಮಾಡಿರುವ ಶಂಕೆ ಇದೆ. ಆತನ ಮೊಬೈಲ್ ತುಂಬಾ ಮೆಸ್ಸಿಯ ಫೋಟೋಗಳಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications