ಫೀಫಾ ವಿಶ್ವಕಪ್ 2018: ಪನಾಮಾ ವಿರುದ್ಧ ಟುನೀಷಿಯಾಕ್ಕೆ ಜಯ

ಸರ್ಸ್ಕಾಂಕ್, ಜೂನ್ 28: ಫೀಫಾ ವಿಶ್ವಕಪ್ 2018ರ ಜಿ ಗುಂಪಿನಲ್ಲಿ ಕೊನೆ ಎರಡು ಸ್ಥಾನದಲ್ಲಿರುವ ಪನಾಮಾ ಹಾಗೂ ಟುನೀಷಿಯಾ ತಂಡಗಳ ನಡುವೆ ಔಪಚಾರಿಕ ಪಂದ್ಯ ನಡೆಯುತ್ತಿದೆ. ಎರಡು ತಂಡಗಳು ಈಗಾಗಲೇ 16ರ ಹಂತಕ್ಕೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿವೆ.
ಲೈವ್ ಸ್ಕೋರ್, ಕಾಮೆಂಟ್ರಿ | ಅಂಕಪಟ್ಟಿ
ಪಂದ್ಯದ ಮೊದಲಾರ್ಧದ 33ನೇ ನಿಮಿಷದಲ್ಲಿ ಟುನೀಷಿಯಾದ ಮೆರಿಯಾ ಸ್ವಂತ ಗೋಲು ನೆರವಿನಿಂದ ಪನಾಮಾಗೆ ಮುನ್ನಡೆ ಸಿಕ್ಕಿತು. ಆದರೆ, ದ್ವಿತೀರ್ಯಾರ್ಧದಲ್ಲಿ ಬೆನ್ ಯುಸೆಫ್ ಉತ್ತಮವಾಗಿ ಗೋಲು ಗಳಿಸಿ ಟುನೀಷಿಯಾ ಪರ ಗೋಲು ಗಳಿಸಿ ಸಮಬಲವಾಗಿಸಿದರು. ನಂತರ 66 ನೇ ನಿಮಿಷದಲ್ಲಿ ಖಾಜ್ರಿ ಗೋಲು ಗಳಿಸಿ ತಂಡಕ್ಕೆ 2-1 ರ ಮುನ್ನಡೆ ತಂದು ಕೊಟ್ಟರು.
ಬೆಲ್ಜಿಯಂ ವಿರುದ್ಧ 5-2 ಹಾಗೂ ಇಂಗ್ಲೆಂಡ್ ವಿರುದ್ಧ 2-1 ಅಂತರದಿಂದ ಟುನೀಷಿಯಾ ಸೋಲು ಕಂಡಿದೆ. 1978ರಿಂದ ವಿಶ್ವಕಪ್ ಅರ್ಹತೆ ಗಳಿಸುತ್ತಿರುವ ಟುನೀಷಿಯಾ ಕಳೆದ 13 ಪಂದ್ಯಗಳಲ್ಲಿ ಸೋಲು ಕಂಡಿದೆ.
ಮೊದಲ ಬಾರಿಗೆ ಆಡುತ್ತಿರುವ ಪನಾಮಾ ವಿರುದ್ಧ ಇಂಗ್ಲೆಂಡ್ 1-6 ಅಂತರದಲ್ಲಿ ಗೆಲುವು ಸಾಧಿಸಿತು. ಜಿ ಗುಂಪಿನ ವಿಜೇತರು ಜಪಾನ್ ವಿರುದ್ಧ ಆಡಲಿದ್ದು, ಗುಂಪಿನ ರನ್ನರ್ ಅಪ್ ವಿರುದ್ಧ ಕೊಲಂಬಿಯಾ ಸೆಣಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications