ಫೀಫಾ 2018: ಕೋಸ್ಟರಿಕಾ ವಿರುದ್ಧ ಡ್ರಾ ಸಾಧಿಸಿದ ಸ್ವೀಸ್ 16ರ ಹಂತಕ್ಕೆ

ಮಾಸ್ಕೋ, ಜೂನ್ 28: ಫೀಫಾ ವಿಶ್ವಕಪ್ 2018ರ 'ಇ' ಗುಂಪಿನಿಂದ 16ರ ಹಂತಕ್ಕೇರುವ ಸನಿಹದಲ್ಲಿರುವ ಸ್ವಿಟ್ಜರ್ಲೆಂಡ್ ತಂಡವು, ಕೋಸ್ಟರಿಕಾ ವಿರುದ್ಧ ಉತ್ತಮ ಆಟ ಪ್ರದರ್ಶಿಸಿದೆ. ಕೊನೆ ಹಂತದವರೆಗೂ ಗೆಲ್ಲುವ ಕುರುಹು ತೋರಿದ್ದ ಸ್ವೀಸ್ ತಂಡಕ್ಕೆ ಕೋಸ್ಟರಿಕಾ ಕೊನೆ ಕ್ಷಣದಲ್ಲಿ ಆಘಾತ ನೀಡಿ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಅಂತಿಮವಾಗಿ ಪಂದ್ಯ 2-2ರಲ್ಲಿ ಡ್ರಾ ಆದರೂ, ಇ ಗುಂಪಿನಿಂದ ಎರಡನೇ ತಂಡವಾಗಿ ಸ್ವಿಟ್ಜರ್ಲೆಂಡ್ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.
ಲೈವ್ ಸ್ಕೋರ್, ಕಾಮೆಂಟ್ರಿ | ಅಂಕಪಟ್ಟಿ
ಸ್ವಿಟ್ಜರ್ಲೆಂಡ್ ತಂಡವು ಆರಂಭದಿಂದಲೇ ಸತತ ದಾಳಿ ನಡೆಸಿ, ಪಂದ್ಯದ 30ನೇ ನಿಮಿಷದಲ್ಲಿ ಬ್ಲೆರಿಮ್ ಜೆಝೈಲಿ ಹೊಡೆದ ಸೂಪರ್ ಕಿಕ್ ನಿಂದ 1-0 ಮುನ್ನಡೆ ಪಡೆದುಕೊಂಡಿತು. ಆದರೆ, ಎರಡನೇ ಅವಧಿಯಲ್ಲಿ ಕೋಸ್ಟರಿಕಾದ ಕೆಂಡಿಲ್ ವಾಸ್ಟನ್ 56ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿದರು.
88ನೇ ನಿಮಿಷದಲ್ಲಿ ಜೊಸಿಪ್ ದ್ರಾಮಿಚ್ ಗೋಲು ಗಳಿಸಿ 2-1ರ ಮುನ್ನಡೆ ಗಳಿಸಿದ ಬಳಿಕ ಪಂದ್ಯ ಗೆಲ್ಲುವ ನಿರೀಕ್ಷೆಯಿತ್ತು. ಆದರೆ, 90+3 ನಿಮಿಷದಲ್ಲಿ ಸೊಮ್ಮರ್ ಸ್ವಂತ ಗೋಲು ಗಳಿಸಿದ್ದು, ಕೋಸ್ಟರಿಕಾಕ್ಕೆ ವಿಶ್ವಕಪ್ ಅಭಿಯಾನವನ್ನು ಉತ್ತಮ ರೀತಿಯಲ್ಲಿ ಮುಗಿಸಲು ಸಹಕಾರಿಯಾಯಿತು.
ಸ್ವಿಟ್ಜರ್ಲೆಂಡ್ ತಂಡಕ್ಕೆ ಕೋಸ್ಟರಿಕಾ ವಿರುದ್ಧ ಒಂದು ಅಂಕ ಸಿಕ್ಕರೂ ಸಾಕು. ಬ್ರೆಜಿಲ್ ಹಾಗೂ ಸ್ವಿಟ್ಜರ್ಲೆಂಡ್ ತಂಡಗಳು ತಲಾ 4 ಅಂಕಗಳಿಸಿದ್ದು, ಇನ್ನೊಂದು ಅಂಕ ಸಿಕ್ಕರೂ ಮುಂದಿನ ಹಂತ ತಲುಪಲಿವೆ.
ಸೆರ್ಬಿಯಾ ಏನಾದರೂ ಗೆಲುವು ಅಥವಾ ಡ್ರಾ ಸಾಧಿಸಿದರೆ ಸ್ವಿಟ್ಜರ್ಲೆಂಡ್ ಹಾಗೂ ಸೆರ್ಬಿಯಾ ನಡುವೆ ಗೋಲುಗಳ ಅಂತರ ಲೆಕ್ಕಕ್ಕೆ ಬರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications