Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup 2022: ಆಂಗ್ಲರಿಗೆ ಆಘಾತ ನೀಡಿ ಸೆಮಿಫೈನಲ್ ಪ್ರವೇಶಿಸಿದ ಹಾಲಿ ಚಾಂಪಿಯನ್ ಫ್ರಾನ್ಸ್

FIFA World Cup 2022: Defending Champions France Beat England By 2-1 And Enter Semi-Final

ಫಿಫಾ ವಿಶ್ವಕಪ್‌ 2022 ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ಇಂಗ್ಲೆಂಡ್ 2-1 ಗೋಲುಗಳೊಂದಿಗೆ ಮಣಿಸಿ ಸೆಮಿ ಫೈನಲ್ ಪ್ರವೆಶಿಸಿದೆ. ಸೆಮಿಫೈನಲ್‌ನಲ್ಲಿ ಫ್ರಾನ್ಸ್ ಮೊರೊಕ್ಕೊ ವಿರುದ್ಧ ಸೆಣೆಸಲಿದೆ.

ಕತಾರ್ ನ ಅಲ್‌ ಬಯಾತ್ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ಸೋತು ನಿರಾಸೆ ಅನುಭವಿಸಿತು. ಹಾಲಿ ಚಾಂಪಿಯನ್ನರ ವಿರುದ್ಧ ಅದ್ಭುತವಾಗಿ ಹೋರಾಡಿದ ಇಂಗ್ಲೆಂಡ್, ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಅವಕಾಶವನ್ನು ಕೂದಲೆಳೆಯಲ್ಲಿ ತಪ್ಪಿಸಿಕೊಂಡರು. ಇಂಗ್ಲೆಂಡ್‌ನ ಖ್ಯಾತ ಆಟಗಾರ ಹ್ಯಾರಿ ಕೇನ್ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲರಾದರು.

ಪಂದ್ಯ ಆರಂಭವಾದ 17ನೇ ನಿಮಿಷದಲ್ಲೇ ಅರುಲಿನ್ ಚೊಮೆನಿ ಪಂದ್ಯದ ಮೊದಲ ಗೋಲು ಗಳಿಸುವ ಮೂಲಕ ಹಾಲಿ ಚಾಂಪಿಯನ್ನರಿಗೆ ಮುನ್ನಡೆ ತಂದುಕೊಟ್ಟರು. ಮೊದಲಾರ್ಧದ ಮುಕ್ತಾಯದ ವೇಳೆಗೆ ಫ್ರಾನ್ಸ್ 1-0 ಗೋಲುಗಳ ಮುನ್ನಡೆ ಕಾಯ್ದುಕೊಂಡಿತ್ತು.

ಆದರೆ ದ್ವಿತೀಯಾರ್ಧದಲ್ಲಿ ಇಂಗ್ಲೆಂಡ್ ಉತ್ತಮ ಪ್ರದರ್ಶನ ನೀಡಿತು. 54ನೇ ನಿಮಿಷದಲ್ಲಿ ಹ್ಯಾರಿ ಕೇನ್ ಗೋಲು ಗಳಿಸುವ ಮೂಲಕ 1-1 ಸಮಬಲ ಸಾಧಿಸಿತು. ನಂತರ ಎರಡೂ ತಂಡಗಳು ಗೋಲು ಗಳಿಸಲು ಸಾಕಷ್ಟು ಪೈಪೋಟಿ ನಡೆಸಿದವು.

FIFA World Cup 2022: Defending Champions France Beat England By 2-1 And Enter Semi-Final

ಅವಕಾಶ ಕೈಚೆಲ್ಲಿದ ಹ್ಯಾರಿ ಕೇನ್

ಇಂಗ್ಲೆಂಡ್‌ನ ಹ್ಯಾರಿಕೇನ್ ತಮ್ಮ 53ನೇ ಅಂತಾರಾಷ್ಟ್ರೀಯ ಗೋಲು ಗಳಿಸುವ ಮೂಲಕ ಇಂಗ್ಲೆಂಡ್ ಪರ ಅತ್ಯಧಿಕ ಗೋಲು ಗಳಿಸಿದ ಆಟಗಾರ ಎನಿಸಿಕೊಂಡರು. ಈ ಮೊದಲು ವೇನ್ ರೂನಿ ಇಂಗ್ಲೆಂಡ್ ಪರ ಅತ್ಯಧಿಕ ಅಂತಾರಾಷ್ಟ್ರೀಯ ಗೋಲು ಗಳಿಸಿದ ಆಟಗಾರ ಎನಿಸಿಕೊಂಡಿದ್ದರು.

ಪಂದ್ಯದ 78ನೇ ನಿಮಿಷದಲ್ಲಿ ಆಟ ಮುಗಿಯಲು ಇನ್ನು ಕೇವಲ 12 ನಿಮಿಷಗಳು ಬಾಕಿಯಿದ್ದಾಗ, ಫ್ರಾನ್ಸ್‌ನ ಗೋಲುಗಳ ಸರದಾರ ಒಲಿವಿಯರ್ ಗಿರೌಡ್ ಹೆಡರ್ ಮೂಲಕ ಗೋಲು ಗಳಿಸುವುದರೊಂದಿಗೆ 2-1 ಗೋಲುಗಳ ಮುನ್ನಡೆ ಸಾಧಿಸಿತು. 84ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಗೋಲು ಗಳಿಸಲು ಸಿಕ್ಕ ಅವಕಾಶವನ್ನು ಹ್ಯಾರಿ ಕೇನ್ ಕೈಚೆಲ್ಲಿದರು.

ಮತ್ತೊಂದು ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಮೊರೊಕ್ಕೊ ಬಲಿಷ್ಠ ಪೋರ್ಚುಗಲ್ ತಂಡವನ್ನು ಮಣಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿತು. ಹಾಲಿ ಚಾಂಪಿಯನ್ ಫ್ರಾನ್ಸ್ ತಂಡಕ್ಕೆ ಫೈನಲ್ ಪ್ರವೇಶಿಸಲು ಮೊರೊಕ್ಕೊ ವಿರುದ್ಧ ಗೆಲುವು ಸಾಧಿಸಬೇಕಿದೆ. ಡಿಸೆಂಬರ್ 14 ರಂದು ಗುರುವಾರ ಫ್ರಾನ್ಸ್ ತಂಡ ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿರುವ ಮೊರೊಕ್ಕೊ ವಿರುದ್ಧ ಸೆಣೆಸಲಿದೆ.

"ಇಂಗ್ಲೆಂಡ್ ತಂಡದ ಸಾಮರ್ಥ್ಯ ನಮಗೆ ತಿಳಿದಿತ್ತು. ನಾವು ಅತ್ಯುತ್ತಮ ಆಡಿದರೆ ಮಾತ್ರ ಗೆಲುವು ಸಾಧಿಸುತ್ತೇವೆ ಎಂದು ಗೊತ್ತಿತ್ತು. ನಮ್ಮ ಶ್ರೇಷ್ಠ ಆಟವನ್ನು ಆಡಿದ್ದರಿಂದ ಈ ಪಂದ್ಯದಲ್ಲಿ ಗೆಲ್ಲಲು ಸಾಧ್ಯವಾಯಿತು. ಇದಕ್ಕಾಗಿ ನಾವು ಸಾಕಷ್ಟು ಕೆಲಸ ಮಾಡಿದ್ದೇವೆ." ಎಂದು ಫ್ರಾನ್ಸ್‌ನ ಫುಟ್ಬಾಲ್ ತಾರೆ ಗಿರೌಡ್ ಹೇಳಿದರು.

Story first published: Sunday, December 11, 2022, 8:45 [IST]
Other articles published on Dec 11, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+