For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫಿಫಾ ವಿಶ್ವಕಪ್: ಗೋಲುಗಳಿಲ್ಲದೆ ಡ್ರಾ ಕಂಡ ಮೆಕ್ಸಿಕೋ vs ಪೋಲೆಂಡ್ ಪಂದ್ಯ

FIFA World Cup 2022: Mexico vs Poland match goalless draw, Highlights

ಫಿಫಾ ವಿಶ್ವಕಪ್‌ ಲೀಗ್ ಹಂತದಲ್ಲಿಯೇ ಸಾಕಷ್ಟು ರೋಚಕತೆಗೆ ಸಾಕ್ಷಿಯಾಗುತ್ತಿದೆ. ಸಾಕಷ್ಟು ಕುತೂಹಲ ಕೆರಳಿಸಿದ್ದ ಪೋಲೆಂಡ್ ಹಾಗೂ ಮೆಕ್ಸಿಕೋ ನಡುವಿನ ಪಂದ್ಯ ಗೋಲುಗಳಿಲ್ಲದೆ ಡ್ರಾ ಫಲಿತಾಂಶ ಕಂಡಿದೆ. ಗುರುವಾರ ನಡೆದ ಪಂದ್ಯದಲ್ಲಿ ಪೋಲೆಂಡ್ ತಂಡದ ಸ್ಟಾರ್ ಆಟಗಾರ ರಾಬರ್ಟ್ ಲೆವಾಂಡೋವ್ಸ್ಕಿ ಅವರಿಗೆ ಗೋಲು ಗಳಿಸುವ ಚಿನ್ನದಂತಾ ಅವಕಾಶ ದೊರೆತಿತ್ತು. ಈ ಅವಕಾಶವನ್ನು ಕೈಚೆಲ್ಲಿದ ಅವರು ಫಿಫಾ ವಿಶ್ವಕಪ್‌ನಲ್ಲಿ ತಮ್ಮ ಗೋಲಿನ ಬರವನ್ನು ಮುಂದುವರಿಸಿದ್ದಾರೆ.

ಪೋಲೆಂಡ್ ತಂಡದ ರಾಬರ್ಟ್ ಲೆವಾಂಡೋವ್ಸ್ಕಿ ದ್ವಿತಿಯಾರ್ಧದಲ್ಲಿ ಪೆನಾಲ್ಟಿ ಅವಕಾಶವನ್ನು ಪಡೆದುಕೊಂಡಿದ್ದರು. ಈ ಮೂಲಕ ಗೋಲು ಗಳಿಸುವ ಅದ್ಭುತ ಅವಕಾಶ ಪೋಲೆಂಡ್ ಮುಂದಿತ್ತು. ಲೆವಾಂಡೋಸ್ಕಿ ಅವರ ಪ್ರಯತ್ನವನ್ನು ಮೆಕ್ಸಿಕೊ ಗೋಲ್‌ಕೀಪರ್ ಗಿಲ್ಲೆರ್ಮೊ ಒಚೋವಾ ತಡೆಯುವಲ್ಲಿ ಯಶಸ್ವಿಯಾದರು.

ಮೆಕ್ಸಿಕೋ ತಂಡದ ಫಾರ್ವರ್ಡ್ ಆಟಗಾರ ಅಲೆಕ್ಸಿಸ್ ವೇಗಾ ತಮಗಿದ್ದ ಎರಡು ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾದ ಕಾರಣ ಮೊದಲಾರ್ಧ ಗೋಲುಗಳಿಲ್ಲದೆ ನೀರಸವಾಗಿ ಅಂತ್ಯವಾಗಿತ್ತು. ಪಂದ್ಯದ ಆರಂಭದಲ್ಲಿ ವಿಂಗರ್ ಹಿರ್ವಿಂಗ್ ಲೊಜಾನೊ ಅವರ ನೀಡಿದ ಚೆಂಡನ್ನು ಗೋಲಾಗಿ ಪರಿವರ್ತಿಸಲು ವೇಗಾ ವಿಫಲವಾದರು. ಅದಾದ ಬಳಿಕ ಮೊದಲಾರ್ಧದ 24ನೇ ನಿಮಿಷದಲ್ಲಿ ವೇಗಾ ಅವರಿಗೆ ಹೆಡರ್ ಮೂಲಕ ಗೋಲು ಗಳಿಸುವ ಅವಕಾಶವಿತ್ತು. ಆದರೆ ಸ್ವಲ್ಪದಲ್ಲಿ ಈ ಅವಕಾಶ ಕೂಡ ವ್ಯರ್ಥವಾಯಿತು.

ಸಿ ಗುಂಪಿನಲ್ಲಿ ಪೋಲೆಂಡ್ ಮತ್ತು ಮೆಕ್ಸಿಕೊ ಪಂದ್ಯ ಡ್ರಾ ಆದ ಕಾರಣ ಅಂಕಗಳನ್ನು ಹಂಚಿಕೊಂಡಿದೆ. ಈ ಗುಂಪಿನಲ್ಲಿ ಬಲಿಷ್ಠ ಅರ್ಜೆಂಟೀನಾ ವಿರುದ್ಧ 2-1 ಅಂತರದಿಂದ ಐತಿಹಾಸಿಕ ಜಯಗಳಿಸಿದ ಬಳಿಕ ಸೌದಿ ಅರೇಬಿಯಾ ಅಚ್ಚರಿಯ ಫಲಿತಾಂಶದೊಂದಿಗೆ ಸದ್ಯ ಸಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪೋಲೆಂಡ್ ಮತ್ತು ಮೆಕ್ಸಿಕೊ ತಲಾ ಒಂದು ಪಾಯಿಂಟ್‌ನೊಂದಿಗೆ ಸೌದಿ ಅರೇಬಿಯಾಕ್ಕಿಂತ ಹಿಂದಿದ್ದು, ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

Story first published: Wednesday, November 23, 2022, 2:20 [IST]
Other articles published on Nov 23, 2022
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+