FIFA World Cup 2022 : ಫಿಫಾ ವಿಶ್ವಕಪ್: ಕೋಸ್ಟರಿಕಾ ವಿರುದ್ಧ ಸ್ಪೇನ್‌ಗೆ 7-0 ಅಂತರದ ಗೆಲುವು

ಫಿಫಾ ವಿಶ್ವಕಪ್‌ನಲ್ಲಿ ಬುಧವಾರ ನಡೆದ ಸ್ಪೇನ್ ಹಾಗೂ ಕೋಸ್ಟರಿಕಾ ವಿರುದ್ಧದ ಪಂದ್ಯದಲ್ಲಿ ಸ್ಪೇನ್ ತಂಡಕ್ಕೆ ಕೋಸ್ಟರಿಕಾ ಸುಲಭ ತುತ್ತಾಯಿತು. ಪಂದ್ಯದುದ್ದಕ್ಕೂ ಸ್ಪೇನ್ ಗೋಲಿನ ಮಳೆ ಹರಿಸಿದ್ದು 7-0 ಅಂತರದಿಂದ ಗೆದ್ದು ಬೀಗಿದೆ. ಆರಂಭದಿಂದ ಅಂತ್ಯದವರೆಗೂ ಅದ್ಭುತ ಪ್ರದರ್ಶನ ನೀಡಿದ ಸ್ಪೇನ್ ಕೋಸ್ಟರಿಕಾ ತಂಡಕ್ಕೆ ಯಾವುದೇ ಹಂತದಲ್ಲೂ ಅವಕಾಶ ಬಿಟ್ಟುಕೊಡಲಿಲ್ಲ.
ಆರಂಭದಿಂದಲೇ ಸ್ಪೇನ್ ಅದ್ಭುತ ಪ್ರದರ್ಶನ ನೀಡುತ್ತಾ ಮುನ್ನುಗ್ಗಿತು. ಪಂದ್ಯ ಆರಂಭವಾದ 14ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದ ಸ್ಪೇನ್ ಬಳಿಕ ಒಂದಾದ ಮೇಲೊಂದರಂತೆ ಗೋಲು ಗಳಿಸಲು ಆರಂಭಿಸಿತು. ಮೊದಲಾರ್ಧದ ಅಂತ್ಯದ ವೇಳೆಗೆ 3-0 ಅಂತರದಿಂದ ಸ್ಪೇನ್ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತು.
ದ್ವಿತಿಯಾರ್ಧದಲ್ಲಿಯೂ ಸ್ಪೇನ್‌ನ ಆರ್ಭಟ ಮುಂದುವರಿಯಿತು. ಕೋಸ್ಟರಿಕಾ ತಂಡದ ಕಳಪೆ ರಕ್ಷಣಾ ವಿಭಾಗವನ್ನು ಭೇದಿಸಿ ಸುಲಭವಾಗಿ ನಾಲ್ಕನೇ ಗೋಲು ದಾಖಲಾಯಿತು. ಪಂದ್ಯದ ಪೂರ್ಣಾವಧಿ ಮುಕ್ತಾಯದ ವೇಳೆಗೆ ಸ್ಪೇನ್ 7-0 ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿದೆ.
ಸ್ಪೇನ್ ಪ್ಲೆಯಿಂಗ್ XI: ಉನೈ ಸಿಮೊನ್, ಅಜ್ಪಿಲಿಕ್ಯೂಟಾ, ಲ್ಯಾಪೋರ್ಟೆ, ರೋಡ್ರಿ, ಜೋರ್ಡಿ ಆಲ್ಬಾ, ಗವಿ, ಬಸ್ಕೆಟ್ಸ್, ಪೆದ್ರಿ; ಫೆರಾನ್ ಟೊರೆಸ್, ಅಸೆನ್ಸಿಯೊ, ಡ್ಯಾನಿ ಓಲ್ಮೊ.
ಕೋಸ್ಟರಿಕಾ ಪ್ಲೇಯಿಂಗ್ XI: ಕೀಲರ್ ನವಾಸ್; ಮಾರ್ಟಿನೆಜ್, ಡುವಾರ್ಟೆ, ಫುಲ್ಲರ್, ಕ್ಯಾಲ್ವೋ, ಒವಿಡೊ; ತೇಜೆಡಾ, ಸೆಲ್ಸೊ ಬೋರ್ಗೆಸ್; ಕ್ಯಾಂಪ್ಬೆಲ್, ಬೆನೆಟ್, ಕಾಂಟ್ರೆರಾಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications