Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup: 16 ಮೈದಾನ, 104 ಪಂದ್ಯ: ಇಲ್ಲಿದೆ ಸಂಪೂರ್ಣ ಮಾಹಿತಿ

ಫಿಫಾ ವಿಶ್ವಕಪ್‌ ಫುಟ್ಬಾಲ್‌ ಕ್ಷಣಗಣನೆ ಆರಂಭವಾಗಿದೆ. ಕಾಲ್ಚೆಂಡಿನ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಒಟ್ಟು 48 ತಂಡಗಳು ಭಾಗವಹಿಸುತ್ತಿದ್ದು, 104 ಪಂದ್ಯಗಳು ನಡೆಯಲಿವೆ. ಈ ಬಾರಿಯ ಫಿಫಾ ವಿಶ್ವಕಪ್‌ ಎಷ್ಟು ಮೈದಾನದಲ್ಲಿ ನಡೆಯಲಿದೆ. ಆ ಮೈದಾನಗಳ ವಿವರ ಇಲ್ಲಿದೆ.

ಈ ಬಾರಿ ಫಿಫಾ ವಿಶ್ವಕಪ್‌ 23ನೇ ಆವೃತ್ತಿಯದ್ದಾಗಿದೆ. ಈ ವಿಶ್ವಕಪ್‌ ಮೂರು ದೇಶಗಳಲ್ಲಿ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ವಿಶ್ವಕಪ್‌ನ್ನು ಮೂರು ದೇಶಗಳು ಆಯೋಜಿಸುತ್ತಿವೆ. ಒಟ್ಟು 16 ಮೈದಾನದಲ್ಲಿ ಈ ಬಾರಿಯ ಫುಟ್ಬಾಲ್‌ ವಿಶ್ವಕಪ್‌ ನಡೆಯಲಿದೆ. ಅದರಲ್ಲಿ ಅಮೆರಿಕದ 11 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ.

FIFA World Cup

ಅಮೆರಿಕಾದಲ್ಲಿ 11 ಮೈದಾನ

ಫಿಫಾ ವಿಶ್ವಕಪ್‌ಗೆ ಆಯ್ಕೆಯಾದ 16 ಮೈದಾನಗಳಲ್ಲಿ 11 ಮೈದಾನಗಳು ಅಮೆರಿಕದಲ್ಲಿವೆ. ಟೂರ್ನಿಯ ಪ್ರಮುಖ ಪಂದ್ಯಗಳಿಗೆ ಇಲ್ಲಿನ ಮೈದಾನವೇ ಆತಿಥ್ಯ ನೀಡಲಿದೆ. ಇದರಲ್ಲಿ ಮೆಟ್‌ಲೈಫ್ ಕ್ರೀಡಾಂಗಣವೂ ಒಂದು. ಇದೇ ಮೈದಾನದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. ಈ ಮೈದಾನದಲ್ಲಿ ಒಟ್ಟು 82,500 ಜನರು ಕುಳಿತುಕೊಳ್ಳುವ ವ್ಯವಸ್ಥೆ ಇದೆ.

ಅಮೆರಿಕದ ಮತ್ತೊಂದು ಹೆಸರುವಾಸಿ ಕ್ರೀಡಾಂಗಣ ಮಿಯಾಮಿ. ರಿಯಲ್ ಮ್ಯಾಡ್ರಿಡ್, ಚೆಲ್ಸಿಯಾ ಹಾಗೂ ಬಾರ್ಸಿಲೋನಾ ನಡುವಿನ ಪಂದ್ಯಗಳು ಸೇರಿದಂತೆ ವಿಶ್ವದ ಪ್ರಮುಖ ಫುಟ್‌ಬಾಲ್ ತಂಡಗಳು ಇಲ್ಲಿ ಸೆಣಸಾಡಿವೆ. ಈ ಕ್ರೀಡಾಂಗಣದಲ್ಲಿ 65 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವ ಅವಕಾಶವಿದೆ. ಕೆಳಗಿನ ಕೋಷ್ಟಕದಲ್ಲಿ ಅಮೆರಿಕದ ಎಷ್ಟು ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಸಂಖ್ಯೆಗಳು ಎಷ್ಟು? ಎಂಬ ಮಾಹಿತಿ ಇದೆ.

ಅಮೆರಿಕದ ಕ್ರೀಡಾಂಗಣಗಳ ಬಗ್ಗೆ ಮಾಹಿತಿ

ಕ್ರೀಡಾಂಗಣ ಪ್ರೇಕ್ಷಕರ ಸಂಖ್ಯೆ ಪಂದ್ಯಗಳ ಸಂಖ್ಯೆ
ಡಲ್ಲಾಸ್ ಕ್ರೀಡಾಂಗಣ, ಅಮೆರಿಕ 94,000 9
ಮಿಯಾಮಿ ಕ್ರೀಡಾಂಗಣ, ಅಮೆರಿಕ 65,000 7
ಮೆಟ್‌ಲೈಫ್ ಕ್ರೀಡಾಂಗಣ, ಅಮೆರಿಕ 82,500 8
ಹಾಸ್ಟನ್ ಕ್ರೀಡಾಂಗಣ, ಅಮೆರಿಕ 72,000 7
ಫಿಲಡೆಲ್ಫಿಯಾ ಕ್ರೀಡಾಂಗಣ, ಅಮೆರಿಕ 69,000 6
ಅಟ್ಲಾಂಟಾ ಕ್ರೀಡಾಂಗಣ, ಅಮೆರಿಕ 75,000 8
ಸ್ಯಾನ್ ಫ್ರಾನ್ಸಿಸ್ಕೋ ಸ್ಟೇಡಿಯಂ, ಅಮೆರಿಕ 71,000 6
ಸಿಯಾಟಲ್ ಕ್ರೀಡಾಂಗಣ, ಅಮೆರಿಕ 69,000 6
ಕನ್ಸಾಸ್ ಸಿಟಿ ಕ್ರೀಡಾಂಗಣ, ಅಮೆರಿಕ 73,000 6
ಲಾಸ್ ಎಂಜಲಿಸ್ ಸ್ಟೇಡಿಯಂ, ಅಮೆರಿಕ 70,000 8
ಬಾಸ್ಟನ್ ಕ್ರೀಡಾಂಗಣ, ಅಮೆರಿಕ 65,000

ಮೆಕ್ಸಿಕೋದಲ್ಲಿ 3 ಕ್ರೀಡಾಂಗಣಗಳ ಆತಿಥ್ಯ

ಮೆಕ್ಸಿಕೋ ಸಹ ಈ ಬಾರಿ ಫಿಫಾ ವಿಶ್ವಕಪ್‌ಗೆ ಆತಿಥ್ಯ ವಹಿಸಿದೆ. ಮೆಕ್ಸಿಕೋ ಸಿಟಿ ಕ್ರೀಡಾಂಗಣದಲ್ಲಿ ಒಟ್ಟು 5 ಪಂದ್ಯಗಳು ನಡೆಯಲಿವೆ. ಈ ಮೈದಾನದಲ್ಲಿ 83 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಲು ಅವಕಾಶವಿದೆ. ಇನ್ನು ಎಸ್ಟಾಡಿಯೊ ಮೋಂಟೆರಿ ಕ್ರೀಡಾಂಗಣವು 53 ಸಾವಿರ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದ್ದು ಒಟ್ಟು 6 ಪಂದ್ಯಗಳು ನಡೆಯಲಿವೆ. ಇದೇ ದೇಶದಲ್ಲಿರುವ ಎಸ್ಟಾಡಿಯೊ ಗ್ವಾಡಲಜರ್‌ ಮೈದಾನ ಸಹ 4 ಪಂದ್ಯಗಳಿಗೆ ಆತಿಥ್ಯ ನೀಡಲಿದ್ದು, 48 ಸಾವಿರ ಆಸನ ಸಾಮರ್ಥ್ಯ ಹೊಂದಿದೆ.

ಕೆನಡಾದಲ್ಲಿ 2 ಮೈದಾನ

23ನೇ ಫಿಫಾ ವಿಶ್ವಕಪ್‌ಗೆ ಆತಿಥ್ಯ ವಹಿಸಿರುವ ದೇಶಗಳಲ್ಲಿ ಒಂದಾಗಿರುವ ಕೆನಡಾ ಸಹ ಕೆಲವು ಪಂದ್ಯಗಳನ್ನು ಆಯೋಜಿಸಲಿದೆ. ಇದರಲ್ಲಿ ಬಿಸಿ ಪ್ಲೇಸ್‌ ಕ್ರೀಡಾಂಗಣ 8 ಪಂದ್ಯಗಳಿಗೆ ಆತಿಥ್ಯ ನೀಡಲಿದ್ದು, 54 ಸಾವಿರ ಜನರು ಪಂದ್ಯವನ್ನು ಕಣ್ಣು ತುಂಬಿಕೊಳ್ಳಬಹುದು. ಟೊರೆಂಟೊ ಕ್ರೀಡಾಂಗಣ ಸಹ 6 ಪಂದ್ಯಗಳನ್ನು ಹೋಸ್ಟ್ ಮಾಡಲಿದೆ. ಈ ಮೈದಾನ 45 ಸಾವಿರ ಪ್ರೇಕ್ಷಕರಿಗೆ ಅವಕಾಶ ನೀಡಲಿದೆ.

Story first published: Wednesday, June 10, 2026, 19:22 [IST]
Other articles published on Jun 10, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+