FIFA World Cup 2026: ಕೊನೆಯ ಕ್ಷಣದಲ್ಲಿ ಅರ್ಜೆಂಟೀನಾ ಮ್ಯಾಜಿಕ್: ಫೈನಲ್ ಪ್ರವೇಶಿಸಿ ಮೆಸ್ಸಿ ಪಡೆ
ಅಟ್ಲಾಂಟಾ: ಫಿಫಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡಕ್ಕೆ ಶಾಕ್ ನೀಡಿ, ಫೈನಲ್ ಪ್ರವೇಶಿಸುವ ಇಂಗ್ಲೆಂಡ್ ಆಸೆ 85 ನಿಮಿಷದ ವರೆಗೆ ಹಸಿರಾಗಿಯೇ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಅರ್ಜೆಂಟೀನಾ ಕೆಚ್ಚೆದೆಯ ಆಟ ಪ್ರದರ್ಶನ ನೀಡಿ ಅಬ್ಬರಿಸಿತು. ಪರಿಣಾಮ ಇಂಗ್ಲೆಂಡ್ ಫೈನಲ್ ಪ್ರವೇಶಿಸುವ ಆಸೆಗೆ ಪೆಟ್ಟು ನೀಡಿತು. ಜುಲೈ 20 ರಂದು ನ್ಯೂ ಯಾರ್ಕ್ ಜೆರ್ಸಿಯಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಹಾಗೂ ಸ್ಪೇನ್ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.
ಮೊದಲ ಅರ್ಧದ ಪಂದ್ಯದಲ್ಲಿ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿದವು. ಈ ಹಂತದಲ್ಲಿ ಉಭಯ ತಂಡಗಳ ಜಿದ್ದಾಜಿದ್ದಿನ ಕಾಳಗ ಕಂಡು ಬಂದಿತು. ಆರಂಭದಲ್ಲಿ ಮೆಸ್ಸಿ ಅಷ್ಟು ಆಕ್ಟಿವ್ ಆಗಿ ಕಾಣಿಸಿಕೊಳ್ಳಲಿಲ್ಲ. ಮೆಸ್ಸಿ ಅವರನ್ನು ಕೇಂದ್ರೀಕರಿಸಿಯೇ ಇಂಗ್ಲೆಂಡ್ ಯೋಜನೆಯನ್ನು ರೂಪಿಸಿಕೊಂಡಿತ್ತು. ಇಂಗ್ಲೆಂಡ್ ತಂಡ ಅಮೋಘ ಆಟವನ್ನು ಪ್ರದರ್ಶಿಸಿತು. ಈ ಹಂತದಲ್ಲಿ ಅರ್ಜೆಂಟೀನಾ ಸುಮಾರು 226 ಪಾಸ್‌ಗಳನ್ನು ನೀಡಿ ಗಮನ ಸೆಳೆದರೆ, ಇಂಗ್ಲೆಂಡ್ 191 ಪಾಸ್‌ಗಳನ್ನು ನೀಡಿತು.

ಮೊದಲ ಅರ್ಧದಲ್ಲಿ ಉಭಯ ತಂಡಗಳು ಹಲವು ಬಾರಿ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ತಳ್ಳುವ ಪ್ರಯತ್ನವನ್ನು ಮಾಡಿತು. ಇಂಗ್ಲೆಂಡ್ ಒಮ್ಮೆ ಗೋಲು ಬಾರಿಸಲು ಪ್ರಯತ್ನಿಸಿದರೆ, ಅರ್ಜೆಂಟೀನಾ ಎರಡು ಬಾರಿ ಗೋಲು ಪೆಟ್ಟಿಗೆಯ ಹತ್ತಿರ ಚೆಂಡನ್ನು ಒಯ್ದರು ಸಹ ಫಲ ನೀಡಲಿಲ್ಲ.
ಎರಡನೇ ಅವಧಿಯ ಆರಂಭದಲ್ಲಿ ಇಂಗ್ಲೆಂಡ್ ಮಿಂಚು
ಎರಡನೇ ಅವಧಿಯ ಆಟದಲ್ಲಿ ಇಂಗ್ಲೇಂಡ್ ತಂಡ ಆರಂಭದಲ್ಲೇ ಅರ್ಜೆಂಟೀನಾ ತಂಡದ ಮೇಲೆ ಒತ್ತಡವನ್ನು ಹೇರಲು ಪ್ರಯತ್ನಿಸಿತು. ಈ ಹಂತದಲ್ಲಿ ಆಂಥೋನಿ ಗಾರ್ಡನ್ ಅವರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಿದರು. ಪರಿಣಾಮ ಇಂಗ್ಲೆಂಡ್ ಪಂದ್ಯದಲ್ಲಿ 55ನೇ ನಿಮಿಷದಲ್ಲಿ ಗೋಲು ದಾಖಲಿಸಿತು. ಪರಿಣಾಮ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿತು.
ಇಂಗ್ಲೆಂಡ್ ಮೊದಲ ಗೋಲು ಬಾರಿಸಿದ ಬಳಿಕ ಅರ್ಜೆಂಟೀನಾ ಕೆಚ್ಚೆದೆಯ ಆಟವನ್ನು ಆಡಿ ಗಮನ ಸೆಳೆಯಿತು. ಈ ಅವಧಿಯಲ್ಲಿ ಅರ್ಜೆಂಟೀನಾ ಬ್ಯಾಕ್ ಟು ಬ್ಯಾಕ್ ಅಟ್ಯಾಕ್ ಮಾಡಿ ಗೋಲು ಬಾರಿಸಲು ತಂತ್ರವನ್ನು ಹೆಣೆದುಕೊಂಡಿತು. ಚಿಕ್ಕ ಚಿಕ್ಕ ಪಾಸ್‌ಗಳ ಮೂಲಕ ಪದೇ ಪದೇ ಗೋಲ್ ಪೋಸ್ಟ್ ಟಾರ್ಗೆಟ್ ಮಾಡಿತು. ಆದರೆ ಇಂಗ್ಲೆಂಡ್ ತಂಡ ಗೋಲ್ ಕೀಪರ್ ಅಮೋಘ ಪ್ರದರ್ಶನ ನೀಡಿ ಗೋಲು ನೀಡಿದಂತೆ ತಡೆಯುವಲ್ಲಿ ಸಫಲವಾದರು. ಆದರೆ ಕೊನೆಯ ಕ್ಷಣದಲ್ಲಿ ಗೋಲು ತಡೆಯುವಲ್ಲಿ ವಿಫಲರಾದರು.

ಮೆಸ್ಸಿ ನೀಡಿದ ಅಸಿಸ್ಟ್‌ನ ಲಾಭ ಪಡೆದ ಪಾಸ್‌ನ ಲಾಭ ಪಡೆದ ಎಂಜೊ ಫೆರ್ನಾಂಡಿಸ್ ತಮ್ಮ ಕಾಲ್ಚಳಕದ ಪ್ರದರ್ಶನ ನೀಡಿ ಅಬ್ಬರಿಸಿದರು. ಅಷ್ಟೋತ್ತಿಗೆ ಅರ್ಜೆಂಟೀನಾ ಅಭಿಮಾನಿಗಳ ಮುಖದಲ್ಲಿ ಚಿಂತೆಯ ಗೆರೆಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ಆದರೆ 85ನೇ ನಿಮಿಷದಲ್ಲಿ ಎಂಜೊ ಫೆರ್ನಾಂಡಿಸ್ ಕಮಾಲ್ ಮಾಡಿದರು. ಇವರು ಅರ್ಜೆಂಟೀನಾ ಗೋಲಿನ ಖಾತೆ ತೆರೆಯುವಲ್ಲಿ ಸಫಲವಾಯಿತು.
ಪಂದ್ಯದ ಹೆಚ್ಚುವರಿ ಸಮಯದಲ್ಲಿ ಲೌಟಾರೊ ಮಾರ್ಟಿನೆಜ್ (90+2 ನಿಮಿಷ) ಗೋಲು ದಾಖಲಿಸಿ ಅಂತರವನ್ನು ಹಿಗ್ಗಿಸುವಲ್ಲಿ ಸಫಲರಾದರು. ಅರ್ಜೆಂಟೀನಾ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತು.
ಮೆಸ್ಸಿ ಕಮಾಲ್
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಕಮಾಲ್ ಮಾಡಿದರು. ಸೆಮಿಫೈನಲ್ ಪಂದ್ಯದಲ್ಲಿ ಯಾವುದೇ ಗೋಲು ದಾಖಲಿಸದೇ ಇದ್ದರೂ ಸಹ ಮೆಸ್ಸಿ ನೀಡಿದ ಅಸಿಸ್ಟ್‌ಗಳ ಸಹಾಯದಿಂದಲೇ ಅರ್ಜೆಂಟೀನಾ ಎರಡು ಗೋಲು ದಾಖಲಿಸಿ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

