Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup 2026: ನಾಕೌಟ್‌ ಹಂತಕ್ಕೆ ತಲುಪಿದ ಕೇಪ್ ವರ್ಡೆ ಇತಿಹಾಸ

ಫಿಫಾ ವಿಶ್ವಕಪ್ 2026ರ ಕ್ರೀಡಾಕೂಟದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಕ್ರೀಡಾ ಜಗತ್ತಿನ ನಕ್ಷೆಯಲ್ಲಿ ಅತ್ಯಂತ ಪುಟ್ಟ ದ್ವೀಪ ರಾಷ್ಟ್ರ ಕೇಪ್ ವರ್ಡೆ ತನ್ನ ಸಂಘಟಿತ ಹೋರಾಟದ ಮೂಲಕ ಬಲಿಷ್ಠ ತಂಡಗಳನ್ನು ಮಣಿಸಿ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ. ಶನಿವಾರ ಮುಂಜಾನೆ ನಡೆದ ರೋಮಾಂಚಕ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಡ್ರಾ ಸಾಧಿಸುವ ಮೂಲಕ ಈ ಆಫ್ರಿಕನ್ ದೇಶ ಕ್ರೀಡಾ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿದೆ.

ಗ್ರುಪ್-ಎಚ್ ವಿಭಾಗದ ಈ ಅತ್ಯಂತ ಪ್ರಮುಖವಾದ ಪಂದ್ಯದಲ್ಲಿ ಕೇಪ್ ವರ್ಡೆ ಮತ್ತು ಸೌದಿ ಅರೇಬಿಯಾ ವಿರುದ್ಧ ಡ್ರಾ ಸಾಧಿಸಿ ಇತಿಹಾಸ ಬರೆಯಿತು. ಈ ಅಮೂಲ್ಯವಾದ ಒಂದು ಅಂಕದ ನೆರವಿನಿಂದ ಕೇಪ್ ವರ್ಡೆ ಮುಂದಿನ ಹಂತಕ್ಕೆ ಸುರಕ್ಷಿತವಾಗಿ ಹೆಜ್ಜೆ ಇರಿಸಿದೆ. ಇದೇ ವೇಳೆ ಇದೇ ಗ್ರೂಪ್‌ನ ಮತ್ತೊಂದು ಪಂದ್ಯದಲ್ಲಿ ಮಾಜಿ ಚಾಂಪಿಯನ್ ಉರುಗ್ವೆ ತಂಡವು ಬಲಿಷ್ಠ ಸ್ಪೇನ್ ವಿರುದ್ಧ ಸೋತ ಹಿನ್ನೆಲೆ ಕೇಪ್ ವರ್ಡೆ ತಂಡದ ಹಾದಿ ಸಂಪೂರ್ಣ ಸುಗಮವಾಯಿತು.

FIFA World Cup 2026

ಕೇಪ್ ವರ್ಡೆ ಜುಲೈ 3 ರಂದು ಅಮೆರಿಕದ ಮಿಯಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ. ಲಿಯೋನೆಲ್ ಮೆಸ್ಸಿ ಸಾರಥ್ಯದ ಜಗತ್ತಿನ ಅತಿ ಬಲಿಷ್ಠ ಫುಟ್‌ಬಾಲ್ ತಂಡದ ವಿರುದ್ಧ ಕೇಪ್‌ ವರ್ಡೆ ಹೇಗೆ ಆಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಬೆಲ್ಜಿಯಂಗೆ ಜಯ

ಇನ್ನು ಗ್ರುಪ್‌ ಜಿ ಪಂದ್ಯದಲ್ಲಿ ಈಜಿಪ್ಟ್‌ 1-1 ಇರಾನ್‌ ವಿರುದ್ಧ ಡ್ರಾ ಸಾಧಿಸಿದೆ. ಎಚ್‌ ಗುಂಪಿನ ಪಂದ್ಯದಲ್ಲಿ ಸ್ಪೇನ್‌ 1-0 ಉರುಗ್ವೆ ವಿರುದ್ಧ ಜಯ ಸಾಧಿಸಿದೆ. ಜಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ಬೆಲ್ಜಿಯಂ 5-1 ಗೋಲುಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿತು. ಬೆಲ್ಜಿಯಂ ಪರ ಅಲೆಕ್ಸಿಸ್ ಸೇಲ್ಮೇಕರ್ಸ್, ರೊಮೆಲು ಲುಕಾಕು, ಕೆವಿನ್ ಡಿ ಬ್ರೂಯ್ನೆ, ಲಿಯಾಂಡ್ರೊ ಟ್ರೋಸಾರ್ಡ್, ಗೋಲು ಬಾರಿಸಿ ತಂಡಕ್ಕೆ ಜಯದ ಮಾಲೆ ತೊಡಿಸಿದರು.

FIFA World Cup 2026

ಡೆಂಬೆಲೆ ಹ್ಯಾಟ್ರಿಕ್

ಐ ಗುಂಪಿನ ಪಂದ್ಯದಲ್ಲಿ ನಾರ್ವೆ ಮತ್ತು ಫ್ರಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಬೋಸ್ಟನ್ ಸ್ಟೇಡಿಯಂನಲ್ಲಿ ನಡೆದ ಈ ರೋಚಕ ಹಣಾಹಣಿಯಯಲ್ಲಿ ಫ್ರಾನ್ಸ್‌ ತಂಡ ಭರ್ಜರಿ ಪ್ರದರ್ಶನ ನೀಡಿ 4-1 ಗೋಲುಗಳಿಂದ ನಾರ್ವೆ ತಂಡವನ್ನು ಮಣಿಸಿತು. ಫ್ರಾನ್ಸ್‌ ತಂಡದ ಪರ ಔಸ್ಮಾನೆ ಡೆಂಬೆಲೆ ಹ್ಯಾಟ್ರಿಕ್ ಗೋಲು ಬಾರಿಸಿ ಮಿಂಚಿದರು.

ಐ ಗುಂಪಿನ ಇನ್ನೊಂದು ಪಂದ್ಯದಲ್ಲಿ ಸೆನೆಗಲ್‌ 5-0 ಗೋಲುಗಳಿಂದ ಇರಾಕ್‌ ತಂಡವನ್ನು ಮಣಿಸಿತು. ಸೆನೆಗಲ್‌ ಪರ ಲಿಮನ್, ಪಾಪೆ ಗುಯಿ, ಇಸ್ಮಾಯಿಲಾ ಸರಾ, ಹಬೀಬ್ ಡಿಯಾರಾ ಗೋಲು ಬಾರಿಸಿ ಅಬ್ಬರಿಸಿದರು.

Story first published: Saturday, June 27, 2026, 11:43 [IST]
Other articles published on Jun 27, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+