FIFA World Cup: ಒಂದೇ ದೇಶಕ್ಕೆ ಕೆಲವರು, ಎದುರಾಳಿಗಳಾಗಿ ಇನ್ನು ಕೆಲವರು.. ಇವರೇ ಆ ಸಹೋದರರು
2026ರ ಫಿಫಾ ವಿಶ್ವಕಪ್ ಜೂನ್ 11ರಂದು ಉತ್ತರ ಅಮೆರಿಕದಲ್ಲಿ ಆರಂಭವಾಗಲಿದೆ. ಈ ಮಹಾಸಮರ ಕೇವಲ ಕ್ರೀಡಾ ಅಭಿಮಾನಿಗಳ ಚಿತ್ತ ಕದ್ದಿದೆ. ಈ ಬಾರಿಯ ಪಂದ್ಯಾವಳಿಯಲ್ಲಿ ಒಟ್ಟು ಎಂಟು ಜೋಡಿ ಸಹೋದರರು ಕಣಕ್ಕಿಳಿಯುತ್ತಿದ್ದಾರೆ. ಫುಟ್ಬಾಲ್ ಇತಿಹಾಸದಲ್ಲಿ ಇದು ಅತ್ಯಂತ ಅಪರೂಪದ ಘಟನೆಯಾಗಿದೆ.
ಈ ಎಂಟು ಸಹೋದರರ ನಾಲ್ಕು ಜೋಡಿಗಳು ಒಂದೇ ತಂಡಕ್ಕಾಗಿ ಆಡುತ್ತಾರೆ. ಇನ್ನುಳಿದ ನಾಲ್ಕು ಜೋಡಿಗಳು ವಿಭಿನ್ನ ದೇಶಗಳನ್ನು ಪ್ರತಿನಿಧಿಸುತ್ತಿದ್ದಾರೆ. ರಾಷ್ಟ್ರೀಯತೆ ಮತ್ತು ವೈಯಕ್ತಿಕ ಆಯ್ಕೆಗಳ ಕಾರಣದಿಂದ ಅವರು ಬೇರ್ಪಟ್ಟಿದ್ದಾರೆ.

ಗ್ವೆಲಾ ಡುವೆ ಐವರಿ ಕೋಸ್ಟ್ ತಂಡದ ರಕ್ಷಣಾ ಆಟಗಾರರಾಗಿದ್ದಾರೆ. ಅವರ ಸೋದರ ಡೆಸಿರೆ ಫ್ರಾನ್ಸ್ ಪರ ಕಣಕ್ಕಿಳಿಯುತ್ತಾರೆ. ಇನಾಕಿ ವಿಲಿಯಮ್ಸ್ ಘಾನಾ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಅವರ ಸಹೋದರ ನಿಕೋ ವಿಲಿಯಮ್ಸ್ ಸ್ಪೇನ್ ತಂಡದ ವಿಂಗರ್ ಆಗಿ ಆಡುತ್ತಿದ್ದಾರೆ. ಈ ಸಹೋದರರು ವಿಭಿನ್ನ ರಾಷ್ಟ್ರಗಳ ಜೆರ್ಸಿ ಧರಿಸಿ ಕಣಕ್ಕಿಳಿಯಲಿದ್ದಾರೆ.
ಸಹೋದರರ ಸವಾಲ್
ಡೆರಿಕ್ ಲುಕ್ಕಾಸೆನ್ ಘಾನಾ ತಂಡದ ಭರವಸೆಯಾಗಿದ್ದಾರೆ. ಅವರ ಸೋದರ ಬ್ರಯಾನ್ ಬ್ರೋಬಿ ನೆದರ್ಲ್ಯಾಂಡ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಜಾನ್ ಸೌಟಾರ್ ಸ್ಕಾಟ್ಲೆಂಡ್ ತಂಡದ ಡಿಫೆಂಡರ್ ಆದರೆ, ಅವರ ಸಹೋದರ ಹ್ಯಾರಿ ಸೌಟಾರ್ ಆಸ್ಟ್ರೇಲಿಯಾದ ಪ್ರಮುಖ ಆಟಗಾರರಾಗಿದ್ದಾರೆ. ಇವರು ಬೇರೆ ಬೇರೆ ದೇಶಗಳ ಬಾವುಟದಡಿ ಆಡುತ್ತಿದ್ದಾರೆ.
ಫ್ರೆಂಚ್ ಡಿಫೆನ್ಸ್‌ನ ಎರಡು ಬಲಿಷ್ಠ ಪಿಲ್ಲರ್‌ಗಳೆಂದರೆ ಈ ಹೆರ್ನಾಂಡೆಜ್ ಸಹೋದರರು. ಲ್ಯೂಕಾಸ್ ಮತ್ತು ಥಿಯೋ ಇಬ್ಬರೂ ವಿಶ್ವದ ಅತ್ಯುತ್ತಮ ಲೆಫ್ಟ್-ಬ್ಯಾಕ್ ಆಟಗಾರರಾಗಿದ್ದು, ಫ್ರಾನ್ಸ್ ತಂಡಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ. ಡಚ್ ತಂಡದ ಪರ ಉದಯೋನ್ಮುಖ ಸೂಪರ್ ಸ್ಟಾರ್ ಕ್ವಿಂಟನ್ ಟಿಂಬರ್ ಮತ್ತು ಜೂರಿಯನ್ ಟಿಂಬರ್ ಕಣಕ್ಕೆ ಇಳಿಯಲಿದ್ದಾರೆ.
ಡಚ್ ತಂಡದ ಉದಯೋನ್ಮುಖ ಸೂಪರ್ ಸ್ಟಾರ್‌ಗಳಾದ ಇವರು ಅಯಾಕ್ಸ್ ಯೂತ್ ಸಿಸ್ಟಮ್ ಮೂಲಕ ಬೆಳೆದು ಬಂದವರು. ಜೂರಿಯನ್ ಅರ್ಸೆನಲ್ ಕ್ಲಬ್‌ನ ಬಲಿಷ್ಠ ಡಿಫೆಂಡರ್ ಆಗಿದ್ದರೆ, ಕ್ವಿಂಟನ್ ಮಿಡ್‌ಫೀಲ್ಡರ್ ಆಗಿ ನೆದರ್ಲ್ಯಾಂಡ್ಸ್ ತಂಡಕ್ಕೆ ಶಕ್ತಿ ತುಂಬಲಿದ್ದಾರೆ. ಲಾರೋಸ್ ಡುವಾರ್ಟೆ ಮತ್ತು ಡೆರಾಯ್ ಡುವಾರ್ಟೆ ಆಫ್ರಿಕದ ಕೇಪ್ ವರ್ಡೆ ದೇಶದ ಪರ ಫುಟ್‌ಬಾಲ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications