Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup 2026: ಮೆಕ್ಸಿಕೊ ವಿರುದ್ಧದ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ ‘ವಯಾಗ್ರ’ ರಹಸ್ಯ ಅಸ್ತ್ರ?

ಫಿಫಾ ವಿಶ್ವಕಪ್ ದಿನಕಳೆದಂತೆ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗುತ್ತಿದೆ. ವಿಶ್ವಕಪ್‌ನಲ್ಲಿ ಸ್ಟಾರ್ ಆಟಗಾರರು ತಮ್ಮ ಸ್ಥಿರ ಪ್ರದರ್ಶನ ಮುಂದುವರೆಸಿದ್ದಾರೆ. ಇನ್ನು ಬಲಿಷ್ಠ ತಂಡಗಳು ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿವೆ. ಸೋಮವಾರ ರೌಂಡ್ ಆಫ್‌ 16 ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ಹಂತದ ಪಂದ್ಯದಲ್ಲಿ ಇಂಗ್ಲೆಂಡ್‌ ಹಾಗೂ ಆತಿಥೇಯ ಮೆಕ್ಸಿಕೊ ತಂಡಗಳು ಕಾದಾಡಲಿವೆ. ಈ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದ ತಂತ್ರ ಸಖತ್ ವೈರಲ್ ಆಗಿದೆ.

ಕ್ವಾರ್ಟರ್ ಫೈನಲ್ ತಲುಪಲು ಇಂಗ್ಲೆಂಡ್ ಫುಟ್‌ಬಾಲ್ ತಂಡವು ಅತ್ಯಂತ ವಿಶಿಷ್ಟ ಹಾಗೂ ಅಚ್ಚರಿಯ ವೈದ್ಯಕೀಯ ತಂತ್ರವೊಂದನ್ನು ಹೆಣೆದುಕೊಂಡಿದೆ. ಮೆಕ್ಸಿಕೋ ವಿರುದ್ಧ ಸೋಮವಾರ ನಡೆಯಲಿರುವ ಅತ್ಯಂತ ನಿರ್ಣಾಯಕ ರೌಂಡ್ 16 ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಆಟಗಾರರು ತಮ್ಮ ಶಾರೀರಿಕ ಸಾಮರ್ಥ್ಯ ಮತ್ತು ಸ್ಟೆಮಿನಾವನ್ನು ಹೆಚ್ಚಿಸಿಕೊಳ್ಳಲು 'ವಯಾಗ್ರ' ಮಾತ್ರೆಗಳನ್ನು ಬಳಸಲಿದ್ದಾರೆ. ಈ ವಿಭಿನ್ನ ಯೋಜನೆಗೆ ಫಿಫಾ ಅಧಿಕಾರಿಗಳಿಂದಲೂ ಈಗಾಗಲೇ ಅಧಿಕೃತ ಒಪ್ಪಿಗೆ ಸಿಕ್ಕಿದೆ ಎಂದು ತಿಳಿದು ಬಂದಿದೆ.

FIFA World Cup 2026

ವಯಾಗ್ರ ಮಾತ್ರೆ ಬಳಸಲು ಕಾರಣ ಏನು?

ರೌಂಡ್ ಆಫ್‌ 16 ಪಂದ್ಯ ಮೆಕ್ಸಿಕೊದ ಪ್ರಸಿದ್ಧ ಎಸ್ಟಾಡಿಯೋ ಅಜ್ಟೆಕಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಮೈದಾನ ಸಮುದ್ರ ಮಟ್ಟದಿಂದ ಸುಮಾರು 7350 ಅಡಿಗಳಷ್ಟು ಎತ್ತರದಲ್ಲಿದೆ. ಇಷ್ಟು ಎತ್ತರದ ಪ್ರದೇಶಗಳಲ್ಲಿ ಗಣನೀಯವಾಗಿ ಆಮ್ಲಜನಕದ ಮಟ್ಟ ಕಡಿಮೆ ಇರುತ್ತದೆ. ಇದರಿಂದ ಆಟಗಾರರು ಬೇಗನೆ ಆಯಾಸಕ್ಕೆ ಒಳಗಾಗುತ್ತಾರೆ. ಇಲ್ಲಿ ಕಾಣಿಸಿಕೊಳ್ಳುವ ಉಸಿರಾಟದ ಸಮಸ್ಯೆಯನ್ನು ನಿವಾರಿಸಲು ಇಂಗ್ಲೆಂಡ್ ತಂಡ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ.

ಕೇಪೆ ವರ್ಡೆ ಫುಟ್ಬಾಲ್‌ ಲೋಕದ RCB: ಕೇವಲ 1% ಚಾನ್ಸ್‌, ಇತಿಹಾಸ ನಿರ್ಮಿಸಿದ ಚಿಕ್ಕ ರಾಷ್ಟ್ರ

ಕೇಪೆ ವರ್ಡೆ ಫುಟ್ಬಾಲ್‌ ಲೋಕದ RCB: ಕೇವಲ 1% ಚಾನ್ಸ್‌, ಇತಿಹಾಸ ನಿರ್ಮಿಸಿದ ಚಿಕ್ಕ ರಾಷ್ಟ್ರ

ಫುಟ್ಬಾಲ್ ಆಟದಲ್ಲಿ ನಿರಂತರವಾಗಿ ಆಟಗಾರರು ಓಡುತ್ತಲೇ ಇರುತ್ತಾರೆ. ಇದರಿಂದ ಆಟಗಾರರಿಗೆ ಹೈ-ಇಂಟೆನ್ಸಿಟಿ ಹಾಗೂ ಆಮ್ಲಜನಕ ಉತ್ತಮವಾಗಿ ಸರಬರಾಜು ಆಗುವುದು ಮುಖ್ಯ. ವಯಾಗ್ರ ಔಷಧಿಯಲ್ಲಿ ಕಂಡುಬರುವ 'ಸಿಲ್ಡೆನಾಫಿಲ್' ಎಂಬ ರಾಸಾಯನಿಕ ಅಂಶವು ಮಾನವ ದೇಹದ ರಕ್ತನಾಳಕ್ಕೆ ಉಪಕಾರಿ. ಇದರಿಂದ ಹೃದಯದಿಂದ ಶ್ವಾಸಕೋಶಕ್ಕೆ ಮತ್ತು ಸ್ನಾಯುಗಳಿಗೆ ರಕ್ತ ಹಾಗೂ ಆಕ್ಸಿಜನ್ ಸರಬರಾಜು ಸುಲಭವಾಗಿ ಹಾಗೂ ವೇಗವಾಗಿ ಆಗುತ್ತದೆ. ಇದರಿಂದ ಆಟಗಾರರು ಹೆಚ್ಚು ದಣಿಯುವುದಿಲ್ಲ.

FIFA World Cup 2026

ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆಯಾದ 'ವಾಡಾ' ನಿಷೇಧಿತ ಔಷಧಿಗಳ ಪಟ್ಟಿಯಲ್ಲಿ ವಯಾಗ್ರವನ್ನು ಸೇರಿಸಿಲ್ಲ. ಹೀಗಾಗಿ ಇಂಗ್ಲೆಂಡ್ ಆಟಗಾರರ ಈ ಔಷಧ ಸೇವನೆಯು ಡೋಪಿಂಗ್ ನಿಯಮಗಳ ಉಲ್ಲಂಘನೆಯ ವ್ಯಾಪ್ತಿಗೆ ಬರುವುದಿಲ್ಲ. ಈ ಹಿಂದೆ ಕೂಡ ಅಪ್ರತಿಮ ರನ್ನರ್‌ಗಳು ಹಾಗೂ ಸೈಕ್ಲಿಸ್ಟ್‌ಗಳು ತಮ್ಮ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಇಂತಹ ಪ್ರಯೋಗ ಮಾಡಿದ್ದರು ಎಂದು ತಿಳಿದು ಬಂದಿದೆ.

FIFA World Cup 2026: ಅರ್ಜೆಂಟೀನಾಗೆ ಬಾಯಿಗೆ ಬರಿಸಿದ ಕೇಪ್ ವರ್ಡೆ: ಹಾಲಿ ಚಾಂಪಿಯನ್‌ರಿಗೆ ಗೆಲುವಿನ ಉಡುಗೊರೆ

FIFA World Cup 2026: ಅರ್ಜೆಂಟೀನಾಗೆ ಬಾಯಿಗೆ ಬರಿಸಿದ ಕೇಪ್ ವರ್ಡೆ: ಹಾಲಿ ಚಾಂಪಿಯನ್‌ರಿಗೆ ಗೆಲುವಿನ ಉಡುಗೊರೆ

ವಿಶ್ವಕಪ್ ಗೆಲ್ಲುವ ಹಾಟ್ ಫೇವರಿಟ್ ತಂಡಗಳಲ್ಲಿ ಒಂದಾಗಿರುವ ಇಂಗ್ಲೆಂಡ್ ಸದ್ಯ ಭರ್ಜರಿ ಲಯದಲ್ಲಿದೆ. ಹ್ಯಾರಿ ಕೇನ್ ಮತ್ತು ಜೂಡ್ ಬೆಲ್ಲಿಂಗ್‌ಹ್ಯಾಮ್ ಅವರಂತಹ ಸ್ಟಾರ್ ಅಟ್ಯಾಕರ್‌ಗಳನ್ನು ಹೊಂದಿರುವ ಇಂಗ್ಲೆಂಡ್‌ ತನ್ನ ಸ್ಥಿರ ಪ್ರದರ್ಶನದ ಮೂಲಕವೇ ಗಮನ ಸೆಳೆಯುತ್ತಿದೆ. ಇನ್ನು ಮೆಕ್ಸಿಕೊ ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕೆ ಇಳಿಯಲು ಸಜ್ಜಾಗಿದೆ. ಭಾರೀ ಚರ್ಚೆಗೆ ಕಾರಣವಾಗಿರುವ ಈ ವಯಾಗ್ರ ಪ್ರಯೋಗವು ಇಂಗ್ಲೆಂಡ್ ತಂಡದ ಅದೃಷ್ಟವನ್ನು ಹೇಗೆ ಬದಲಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

Story first published: Saturday, July 4, 2026, 15:52 [IST]
Other articles published on Jul 4, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+