Golden Boot: ಅದ್ಭುತ ನಡೆಯದಿದ್ದರೆ ಗೋಲ್ಡ್ ಬೂಟ್ ಮೆಸ್ಸಿ ಪಾಲು
ಫಿಫಾ ವಿಶ್ವಕಪ್ ಫುಟ್ಬಾಲ್ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಭಾನುವಾರ ತಡರಾತ್ರಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಹಾಗೂ ಸ್ಪೇನ್ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳು ಈ ಬಾರಿಯ ವಿಶ್ವಕಪ್‌ನಲ್ಲಿ ತಮ್ಮದೇ ಆದ ಆಟದ ಶೈಲಿಯಿಂದ ಹೆಸರು ಮಾಡಿವೆ. ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದು, ರಣರಂಗದ ಕಿಚ್ಚು ಪ್ರೇಕ್ಷಕರ ಗ್ಯಾಲರಿಯಲ್ಲೂ ಕಾಣಿಸಿಕೊಳ್ಳಲಿದೆ. ನ್ಯೂಯಾರ್ಕ್ ಜೆರ್ಸಿ ಮೆಗಾ ಈವೆಂಟ್‌ಗೆ ಆತಿಥ್ಯ ನೀಡಲು ಸಂಪೂರ್ಣ ಸಿದ್ಧವಾಗಿದೆ.
ಸುಮಾರು ಒಂದು ತಿಂಗಳಿಗೂ ಹೆಚ್ಚುಕಾಲ ಅಭಿಮಾನಿಗಳನ್ನು ರಂಜಿಸಿದ್ದ ಕಾಲ್ಚಳಕದ ಆಟದ ಫೈನಲ್ ಪಂದ್ಯ ಭಾನುವಾರ ನಡೆಯಲಿದೆ. ಭಾರೀ ಜಿದ್ದನ್ನು ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ನಿರೀಕ್ಷಿಸಲಾಗಿದೆ. 16 ವರ್ಷಗಳ ಬಳಿಕ ಸ್ಪೇನ್ ಪ್ರಶಸ್ತಿಯನ್ನು ಪಡೆಯಲು ಪ್ಲ್ಯಾನ್ ಮಾಡಿದರೆ, ಅರ್ಜೆಂಟೀನಾ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಲು ಸಿದ್ಧತೆ ನಡೆಸಿದೆ. ಇನ್ನು ಇದೇ ವೇಳೆ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಿಗೂ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ವೇಳೆ ಎಲ್ಲರ ಕಣ್ಣುಗಳು ಗೋಲ್ಡನ್ ಬೂಟ್ ಮೇಲೆ ನೆಟ್ಟಿರಲಿವೆ.

ಗೋಲ್ಡನ್ ಬೂಟ್.. ಈ ಪ್ರಶಸ್ತಿಯನ್ನು ಫಿಫಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರನಿಗೆ ನೀಡಲಾಗುತ್ತದೆ. ಈ ಬಾರಿ ಈ ಪ್ರಶಸ್ತಿಯ ಮೇಲೆ ಮೆಸ್ಸಿ ಈಗಗಾಲೇ ಎರಡೂ ಕೈಗಳನ್ನು ಇಟ್ಟಿದ್ದರೆ. ಒಂದು ವೇಳೆ ಫೈನಲ್ ಪಂದ್ಯದಲ್ಲಿ ಪವಾಡ ನಡೆದರೆ ಮಾತ್ರ ಮೆಸ್ಸಿ ಕೈಯಿಂದ ಈ ಪ್ರಶಸ್ತಿ ಬೇರೆಯವರಿಗೆ ಹೋಗಲಿದೆ.
ಮೆಸ್ಸಿ ಬಾರಿಸಿದ ಗೋಲು ಸಂಖ್ಯೆ ಎಷ್ಟು?
ಲಿಯೋನೆಲ್ ಮೆಸ್ಸಿ ಈ ಬಾರಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ಈ ಬಾರಿ ಅಮೋಘ ಪ್ರದರ್ಶನ ನೀಡುತ್ತಿದ್ದು, 8 ಗೋಲುಗಳನ್ನು ಬಾರಿಸಿದ್ದಾರೆ. ಈ ವೇಳೆ 4 ಅಸಿಸ್ಟ್‌ಗಳು ಸಹ ಮಾಡಿದ್ದಾರೆ. ಹೀಗಾಗಿ ಸದ್ಯಕ್ಕಂತೂ ಮೆಸ್ಸಿ ಈ ಪಟ್ಟಿಯಲ್ಲಿ ಟಾಪ್‌ನಲ್ಲಿ ಕುಳಿತಿದ್ದಾರೆ.
ಟಾಪ್ 5ನಲ್ಲಿ ಯಾರಿಗೆಲ್ಲಾ ಸ್ಥಾನ?
ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಮೆಸ್ಸಿಗೆ ಅಗ್ರಸ್ಥಾನ. ಇನ್ನು ಫ್ರಾನ್ಸ್ ತಂಡದ ಆಟಗಾರ ಕೈಲಿಯನ್ ಎಂಬಾಪ್ಪೆ 8 ಗೋಲು ಸಿಡಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ನಾರ್ವೆಯ ಎರ್ಲಿಂಗ್ ಹಾಲೆಂಡ್ 7 ಗೋಲು ಸಿಡಿಸಿದ್ದಾರೆ. ಇಂಗ್ಲೆಂಡ್ ತಂಡದ ಜೂಡ್ ಬೆಲ್ಲಿಂಗ್ಹ್ಯಾಮ್ 6 ಗೋಲು ಸಿಡಿಸಿ ನಾಲ್ಕು ಹಾಗೂ ಇದೇ ತಂಡದ ನಾಯಕ ಹ್ಯಾರಿ ಕೇನ್ 6 ಗೋಲು ಬಾರಿಸಿ ಐದನೇ ಸ್ಥಾನದಲ್ಲಿದ್ದಾರೆ. ಮೆಸ್ಸ ಅವರನ್ನು ಹೊರತುಪಡಿಸಿದರೆ, ಟಾಪ್ 5ನಲ್ಲಿರುವ ಆಟಗಾರರ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರ ನಡೆದಿವೆ.
ಮೈಕೆಲ್ ಒಯರ್ಜಾಬಲ್ ಸ್ಪೇನ್ ತಂಡದ ಸ್ಟಾರ್ ಆಟಗಾರ. ಇವರು ಈ ವಿಶ್ವಕಪ್‌ನಲ್ಲಿ ಈ ವರೆಗೆ 5 ಗೋಲು ಸಿಡಿಸಿದ್ದಾರೆ. ಒಂದು ವೇಳೆ ಇವರು ಫೈನಲ್ ಪಂದ್ಯದಲ್ಲಿ ನಾಲ್ಕು ಗೋಲು ಬಾರಿಸಿ, ಮೆಸ್ಸಿ ಒಂದು ಗೋಲು ಬಾರಿಸದೆ ಇದ್ದರೆ ಈ ಪ್ರಶಸ್ತಿ ಇವರಿಗೆ ಸಲ್ಲುತ್ತದೆ. ಇಲ್ಲದಿದ್ದರೆ, ಮೆಸ್ಸಿ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಮನೆಗೆ ತೆಗೆದುಕೊಂಡು ಹೋಗುವುದು ಫಿಕ್ಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

