Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup 2026: 12 ವರ್ಷಗಳ ಬಳಿಕ ನಾಕೌಟ್ ಪ್ರವೇಶಿಸಿದ ಜರ್ಮನಿ

ಫಿಫಾ ವಿಶ್ವಕಪ್ 2026ರ ಅತ್ಯಂತ ರೋಚಕ ಗ್ರೂಪ್ 'ಇ' ಪಂದ್ಯದಲ್ಲಿ ಮಾಜಿ ಚಾಂಪಿಯನ್ ಜರ್ಮನಿ ತಂಡವು ಆಫ್ರಿಕಾದ ಬಲಿಷ್ಠ ಐವರಿ ಕೋಸ್ಟ್ ತಂಡವನ್ನು ಮಣಿಸಿ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ. ಕೆನಡಾದ ಟೊರಾಂಟೋದಲ್ಲಿ ಭಾನುವಾರ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಜರ್ಮನಿ 2-1 ಗೋಲುಗಳ ರೋಚಕ ಜಯ ದಾಖಲಿಸಿದೆ.

ಮೊದಲಾರ್ಧದಲ್ಲಿ ಒಂದು ಗೋಲಿನ ಹಿನ್ನೆಡೆ ಅನುಭವಿಸಿದರೂ, ದ್ವಿತೀಯಾರ್ಧದಲ್ಲಿ ಪಂದ್ಯದ ಚಿತ್ರಣವನ್ನೇ ಬದಲಿಸಿದ ಜರ್ಮನ್ ಪಡೆ ರೌಂಡ್ ಆಫ್ 32 ಹಂತಕ್ಕೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಜರ್ಮನಿ ಫುಟ್‌ಬಾಲ್ ಕ್ರೀಡೆಯಲ್ಲಿ ಈ ವಿಜಯವು ಒಂದು ಹೊಸ ಯುಗದ ಆರಂಭ ಎಂದೇ ಬಿಂಬಿತವಾಗುತ್ತಿದೆ. 12 ವರ್ಷಗಳ ನಂತರ ಜರ್ಮನಿ ವಿಶ್ವಕಪ್ ಟೂರ್ನಿಯಲ್ಲಿ ನಾಕೌಟ್ ಹಂತ ಪ್ರವೇಶಿಸಿದೆ. ಜರ್ಮನಿ 2014ರಲ್ಲಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಬಳಿಕ, ತಂಡಕ್ಕೆ ವಿಶ್ವಕಪ್ ಅಖಾಡದಲ್ಲಿ ಗ್ರಹಣ ಹಿಡಿದಂತಾಗಿತ್ತು.

FIFA World Cup 2026

ಪಂದ್ಯದ ಆರಂಭದಿಂದಲೂ ಉಭಯ ತಂಡಗಳು ಪರಸ್ಪರ ರಕ್ಷಣಾ ಕೋಟೆಯನ್ನು ಭೇದಿಸಲು ಪ್ರಯತ್ನ ನಡೆಸಿದರು. ಆದರೆ ಮೊದಲ ಗೋಲಿನ ನಗೆ ಬೀರಿದ್ದು, ಆಫ್ರಿಕನ್ ದೈತ್ಯ ಐವರಿ ಕೋಸ್ಟ್. ಪಂದ್ಯದ 30ನೇ ನಿಮಿಷದಲ್ಲಿ ಯಾನ್ ಡಿಯೋಮಂಡೆ ನೀಡಿದ ಅತ್ಯುತ್ತಮ ಪಾಸ್ ಅನ್ನು ಅತ್ಯಂತ ಜಾಣ್ಮೆಯಿಂದ ಜರ್ಮನಿಯ ಗೋಲುಪೆಟ್ಟಿಗೆಗೆ ರವಾನಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಮೊದಲಾರ್ಧದ ಮುಕ್ತಾಯಕ್ಕೆ ಐವರಿ ಕೋಸ್ಟ್ ತಂಡವು 1-0 ರ ಮುನ್ನಡೆ ಕಾಯ್ದುಕೊಂಡು ಜರ್ಮನಿಗೆ ತೀವ್ರ ಆತಂಕ ಉಂಟುಮಾಡಿತು.

ಮಾಸ್ಟರ್‌ ಪ್ಲ್ಯಾನ್‌

ದ್ವಿತೀಯಾರ್ಧದಲ್ಲಿ ಜರ್ಮನಿ ತರಬೇತುದಾರ ಭರ್ಜರಿ ಪ್ಲ್ಯಾನಿಂಗ್ ಮಾಡಿದರು. ಜರ್ಮನಿಯ 59ನೇ ನಿಮಿಷದಲ್ಲಿ ಐವರಿ ಕೋಸ್ಟ್ ತಂಡದ ರಕ್ಷಣಾ ವಿಭಾಗಕ್ಕೆ ಭಾರೀ ಪೆಟ್ಟು ನೀಡಲು ಪ್ಲ್ಯಾನ್ ಮಾಡಿಕೊಂಡಿತು. ಡೆನಿಸ್ ಉಂದಾವ್ ಮತ್ತು ನಾದಿಮ್ ಅಮೀರಿ ಅವರನ್ನು ಒಟ್ಟಿಗೆ ಮೈದಾನಕ್ಕಿಳಿಸಿದರು. ಈ ನಿರ್ಧಾರವು ಜರ್ಮನಿಯ ಆಟದ ವೇಗ ಹಾಗೂ ಆಕ್ರಮಣ ಶಕ್ತಿಯನ್ನು ದುಪ್ಪಟ್ಟು ಮಾಡಿತು. ಕೇವಲ ಎಂಟು ನಿಮಿಷಗಳ ಅಂತರದಲ್ಲಿ ತಂಡಕ್ಕೆ ಇದರಿಂದ ಪ್ರತಿಫಲ ದೊರೆಯಿತು.

ಪಂದ್ಯದ 67ನೇ ನಿಮಿಷದಲ್ಲಿ ನಾದಿಮ್ ಅಮೀರಿ ರಕ್ಷಣಾ ವಿಭಾಗದ ಆಟಗಾರರನ್ನು ವಂಚಿಸಿ ಕಳುಹಿಸಿದ ಅದ್ಭುತ ಕ್ರಾಸ್ ಅನ್ನು ಡೆನಿಸ್ ಉಂದಾವ್ ಗೋಲು ಬಾರಿಸಿದರು. ಇದರಿಂದಾಗಿ ಜರ್ಮನಿ 1-1 ರಿಂದ ಸಮಬಲ ಸಾಧಿಸುತ್ತಿದ್ದಂತೆ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿತು.

ಹೆಚ್ಚುವರಿ ಸಮಯದಲ್ಲಿ ಜರ್ಮನಿ ಕ್ರೀಡಾ ಜಗತ್ತು ಸಂಭ್ರಮಿಸುವಂತಹ ಗೆಲುವಿನ ಗೋಲು ಮೂಡಿಬಂತು. ಫೆಲಿಕ್ಸ್ ನ್ಮೇಚಾ ನೀಡಿದ ಪಾಸ್‌ನ ಸಂಪೂರ್ಣ ಲಾಭ ಪಡೆದ ಉಂದಾವ್, ತಮ್ಮ ಎಡಗಾಲಿನಿಂದ ಚೆಂಡನ್ನು ಗೋಲು ಪೆಟ್ಟಿಗೆಯ ಒಳಕ್ಕೆ ನೂಕಿದರು. ಪರಿಣಾಮ ಜರ್ಮನಿ ಇತಿಹಾಸ ನಿರ್ಮಿಸಿತು.

ಇಕ್ವೆಡಾರ್ ತಂಡಕ್ಕೆ ಆಘಾತ

ಇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಜಾಗತಿಕ ಫುಟ್‌ಬಾಲ್ ಅಚ್ಚರಿಯಿಂದ ನೋಡುವಂತಹ ಫಲಿತಾಂಶ ಬಂದಿತು. ಪುಟ್ಟ ಕೆರಿಬಿಯನ್ ದ್ವೀಪ ರಾಷ್ಟ್ರವಾದ ಕ್ಯುರಾಸ್ಸಾವೊ, ದಕ್ಷಿಣ ಅಮೆರಿಕದ ಪ್ರಬಲ ಶಕ್ತಿ ಇಕ್ವೆಡಾರ್ ತಂಡದ ವಿರುದ್ಧ ಡ್ರಾ ಸಾಧಿಸುವಲ್ಲಿ ಸಫಲವಾಯಿತು. ಈ ಮೂಲಕ ಕ್ಯುರಾಸ್ಸಾವೊ ತನ್ನ ಮೊದಲ ಅಂಕ ಕಲೆ ಹಾಕಿತು.

ತಂಡವನ್ನು ಗೋಲು ರಹಿತ (0-0) ಸಮಬಲಕ್ಕೆ ರೋಕುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ತನ್ನ ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲೇ ಇತಿಹಾಸದ ಮೊದಲ ಮಹತ್ವದ ಅಂಕವನ್ನು ಕ್ಯುರಾಸ್ಸಾವೊ ಕಬಳಿಸಿದೆ. ಜರ್ಮನಿ ವಿರುದ್ಧದ ಮೊದಲ ಪಂದ್ಯದಲ್ಲಿ 1-7 ರ ಹೀನಾಯ ಸೋಲಿನಿಂದ ತತ್ತರಿಸಿದ್ದ ಕ್ಯುರಾಸ್ಸಾವೊ ತಂಡಕ್ಕೆ ಈ ಪಂದ್ಯವು ಹೊಸ ಭರವಸೆಯನ್ನು ನೀಡಿದೆ. ಮೊದಲ ಪಂದ್ಯದಲ್ಲಿ ಐವರಿ ಕೋಸ್ಟ್ ವಿರುದ್ಧ ಸೋಲು ಕಂಡಿದ್ದ ಇಕ್ವೆಡಾರ್ ಈ ಪಂದ್ಯದಲ್ಲಿ ಪೂರ್ಣ ಮೂರು ಅಂಕಗಳನ್ನು ಪಡೆಯುವ ಕನಸಿಗೆ ಪೆಟ್ಟು ಬಿದ್ದಿದೆ.

Story first published: Sunday, June 21, 2026, 9:59 [IST]
Other articles published on Jun 21, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+